ಶಿಲ್ಪಾ ಶೆಟ್ಟಿಯ ಗಂಡ ಹಣ ಮಾಡಿದ್ದು ಹೇಗೆ? | ರಾಜ್ ಕುಂದ್ರಾ ಬಂಧನದ ಬೆನ್ನಲ್ಲೇ ವಿಡಿಯೋ ವೈರಲ್ - Mahanayaka
5:05 PM Wednesday 11 - December 2024

ಶಿಲ್ಪಾ ಶೆಟ್ಟಿಯ ಗಂಡ ಹಣ ಮಾಡಿದ್ದು ಹೇಗೆ? | ರಾಜ್ ಕುಂದ್ರಾ ಬಂಧನದ ಬೆನ್ನಲ್ಲೇ ವಿಡಿಯೋ ವೈರಲ್

shilpa shetty and husband
20/07/2021

ಹೈದರಾಬಾದ್: ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಪತಿ ಹಾಗೂ ಉದ್ಯಮಿ ರಾಜ್ ಕುಂದ್ರಾ ಅವರನ್ನು ಅಶ್ಲೀಲ ಚಿತ್ರ ನಿರ್ಮಿಸಿ ಮೊಬೈಲ್ ಅಪ್ಲಿಕೇಶನ್ ಗಳಲ್ಲಿ ಹರಿಯ ಬಿಟ್ಟ ಆರೋಪದಲ್ಲಿ ಮುಂಬೈ ಪೊಲೀಸರು  ಬಂಧಿಸಿದ್ದಾರೆ. ಇದರ ನಡುವೆಯೇ ಟಿವಿ ಶೋವೊಂದರಲ್ಲಿ ರಾಜ್ ಕುಂದ್ರಾ  ಅವರಿಗೆ ಕೇಳಲಾಗಿರುವ ಪ್ರಶ್ನೆ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ರಾಜ್ ಕುಂದ್ರಾ ಬಂಧನವಾಗುತ್ತಿದ್ದಂತೆಯೇ ಹಿಂದಿಯಲ್ಲಿ ಪ್ರಸಾರವಾಗುತ್ತಿರುವ ಕಪಿಲ್ ಶರ್ಮಾ ಅವರ ಶೋದಲ್ಲಿ ಭಾಗವಹಿಸಿದ್ದ  ಹಳೆಯ ವಿಡಿಯೋವೊಂದು ವೈರಲ್ ಆಗಿದೆ. ಈ ಕಾರ್ಯಕ್ರಮದಲ್ಲಿ  ಪತ್ನಿ ಶಿಲ್ಪ ಶೆಟ್ಟಿ ಹಾಗೂ ಅವರ ಸಹೋದರಿ ಶಮಿತಾ ಶೆಟ್ಟಿ ಕೂಡ ಪಾಲ್ಗೊಂಡಿದ್ದರು.

ಕಾರ್ಯಕ್ರಮದಲ್ಲಿ ಕಪಿಲ್ ಶರ್ಮಾ ಅವರು ಒಂದು ಪ್ರಶ್ನೆ ಕೇಳಿದ್ದರು. ಆದರೆ ಆ ಪ್ರಶ್ನೆಗೆ ತಡವಾಗಿ ಉತ್ತರ ಸಿಕ್ಕಿದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಜನರು ಪ್ರತಿಕ್ರಿಯಿಸುತ್ತಿದ್ದಾರೆ.  ಕಪಿಲ್ ಶರ್ಮಾ ಕಾರ್ಯಕ್ರಮದಲ್ಲಿ ಕುಂದ್ರಾಗೆ, “ನೀವು ಶಿಲ್ಪಾ ಶೆಟ್ಟಿ ಜೊತೆಗೆ ಶಾಪಿಂಗ್ ಮಾಡುತ್ತೀರಿ,  ವಿಮಾನದಲ್ಲಿ ಹೋಗುತ್ತೀರಿ, ಪಾರ್ಟಿಗಳಲ್ಲಿ ಪಾಲ್ಗೊಳ್ಳುತ್ತೀರಿ. ಸುಮ್ಮನೆ ಕುಳಿತು ಫುಟ್ಬಾಲ್ ವೀಕ್ಷಿಸುತ್ತೀರಿ.  ಹಾಗಿದ್ರೆ, ನೀವು ಹಣ ಹೇಗೆ ಮಾಡುತ್ತೀರಿ?” ಎಂದು ಪ್ರಶ್ನಿಸಿದ್ದರು. ಈ ಪ್ರಶ್ನೆಗೆ ಎಲ್ಲರೂ ಬಿದ್ದು ಬಿದ್ದು ನಗುತ್ತಾರೆ. ಆದರೆ, ಪ್ರಶ್ನೆಗೆ ಯಾರು ಕೂಡ ಉತ್ತರ ನೀಡಲಿಲ್ಲ. ಆದರೆ, ಈಗ ಅದಕ್ಕೆ ಉತ್ತರ ದೊರೆತಿದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಜನರು ಟ್ರೋಲ್ ಮಾಡಿದ್ದಾರೆ.

ಇನ್ನಷ್ಟು ಸುದ್ದಿಗಳು…

ಅಪ್ರಾಪ್ತೆಗೆ ಮದುವೆಯಾದರೂ ಸಂಬಂಧ ಮುಂದುವರಿಸಿದ ವಿದ್ಯಾರ್ಥಿ | ಪತಿಗೆ ತಿಳಿದಾಗ ನಡೆದದ್ದೇನು ಗೊತ್ತಾ?

ಸ್ನಾನ ಮಾಡುತ್ತಿದ್ದಾಗ ಮೊಬೈಲ್ ನಲ್ಲಿ ಚಿತ್ರೀಕರಣ: ಯುವತಿ ಕಿರುಚಿದಾಗ ಆರೋಪಿ ಪರಾರಿ

ದಲಿತ ಯುವಕನ ಕುದುರೆ ಸವಾರಿಗೆ ಅಡ್ಡಿಪಡಿಸಿದ 9 ಮಂದಿಗೆ 5 ವರ್ಷ ಜೈಲೂಟ | ದೌರ್ಜನ್ಯದ ವಿರುದ್ಧ ದೊರಕಿತು ನ್ಯಾಯ

ಯುವಕನ ದವಡೆಯಲ್ಲಿತ್ತು ಬರೋಬ್ಬರಿ 82 ಹಲ್ಲುಗಳು!

ಇತ್ತೀಚಿನ ಸುದ್ದಿ