ಶಿಲ್ಪಾ ಶೆಟ್ಟಿ ಗಂಡ ಮಾಡುತ್ತಿದ್ದದ್ದು ನೀಲಿ ಚಿತ್ರ ಅಲ್ಲ, ಕಾಮೋದ್ರೇಕಕಾರಿ ವಿಡಿಯೋ | ಮಾಡೆಲ್ ಹೇಳಿದ್ದೇನು?
ಮುಂಬೈ: ನಟಿ ಶಿಲ್ಪಾ ಶೆಟ್ಟಿ ಪತಿ ರಾಜ್ ಕುಂದ್ರಾ ಅಶ್ಲೀಲ ಚಿತ್ರಗಳ ಸಿನಿಮಾಗಳನ್ನು ನಿರ್ಮಿಸಿ ಪ್ರಕಟಿಸುತ್ತಿದ್ದ ಆರೋಪದ ಮೇಲೆ ಬಂಧನವಾಗಿದ್ದು, ಇದರ ಬೆನ್ನಲ್ಲೇ ಮಾಡೆಲ್ ವೋರ್ವಳು ಕುಂದ್ರಾ ಪರವಾಗಿ ವಾದಿಸಿದ್ದಾರೆ.
ನೀವು ಮೊದಲು ಕುಂದ್ರಾ ಅವರು ಮಾಡಿರುವ ವಿಡಿಯೋಗಳನ್ನು ನೋಡಿ, ಅವರು ನೀಲಿ ಚಿತ್ರಗಳನ್ನು ತಯಾರಿಸುತ್ತಿರಲಿಲ್ಲ. ಅದು ಉದ್ರೇಕಕಾರಿ ವಿಡಿಯೋಗಳನ್ನು ಮಾಡುತ್ತಿದ್ದರು ಎನ್ನುವುದನ್ನು ನೀವೇ ನೋಡಿ ನಿರ್ಧರಿಸಿ ಎಂದು ಆಕೆ ಹೇಳಿದ್ದಾಳೆ.
ಮಾಡೆಲ್ ಗೆಹಾನಾ ವಶಿಷ್ಠ್ ಈ ಹೇಳಿಕೆ ನೀಡಿದ ಮಾಡೆಲ್ ಆಗಿದ್ದಾಳೆ. ಈ ಸಂಬಂಧ ಆಕೆ ಬಿಡುಗಡೆ ಮಾಡಿರುವ ವಿಡಿಯೋದಲ್ಲಿ, ರಾಜ್ ಕುಂದ್ರಾ ಬಗ್ಗೆ ಪೊಲೀಸರು ತಪ್ಪು ತಿಳಿದುಕೊಂಡಿದ್ದಾರೆ. ಅವರು ತಯಾರಿಸುತ್ತಿದ್ದದ್ದು ಪೋರ್ನ್ ವಿಡಿಯೋಗಳಲ್ಲ, ಬದಲಿಗೆ ಎರೋಟಿಕಾ ವಿಡಿಯೋಗಳನ್ನು ಅವರು ಮಾಡುತ್ತಿದ್ದರು. ಈ ಪ್ರಕರಣದಲ್ಲಿ ಯಾವುದೇ ಒಂದು ನಿರ್ಧಾರವನ್ನು ತೆಗೆದುಕೊಳ್ಳುವ ಮೊದಲು ವಿಡಿಯೋಗಳನ್ನು ನೋಡಿ ಎಂದು ಆಕೆ ಸಲಹೆ ನೀಡಿದ್ದಾಳೆ.
ಎರೋಟಿಕಾ ಅಥವಾ ಕಾಮೋದ್ರೇಕಗೊಳಿಸುವ ವಿಡಿಯೋಗಳು ಬಾಲಿವುಡ್ ನಲ್ಲಿ ಕೂಡ ಇದೆ. ಆದರೆ, ರಾಜ್ ಕುಂದ್ರಾ ಅವರನ್ನು ಟಾರ್ಗೆಟ್ ಮಾಡಿ ಅವರನ್ನು ಸಂಕಷ್ಟಕ್ಕೆ ಸಿಲುಕಿಸಲಾಗಿದೆ ಎಂದು ಮಾಡೆಲ್ ಆರೋಪಿಸಿದ್ದಾಳೆ.
ಇನ್ನಷ್ಟು ಸುದ್ದಿಗಳು…
ಶಿಲ್ಪಾ ಶೆಟ್ಟಿಯ ಗಂಡ ಹಣ ಮಾಡಿದ್ದು ಹೇಗೆ? | ರಾಜ್ ಕುಂದ್ರಾ ಬಂಧನದ ಬೆನ್ನಲ್ಲೇ ವಿಡಿಯೋ ವೈರಲ್
ಆಂಬುಲೆನ್ಸ್ ಮುಂದೆ ಅಡ್ಡಾದಿಡ್ಡಿಯಾಗಿ ಕಾರು ಚಲಾಯಿಸಿದ ಆರೋಪಿ ಪೊಲೀಸ್ ವಶಕ್ಕೆ