ವಿಡಿಯೋದಲ್ಲಿ ಬೆತ್ತಲಾಗಲು ರಾಜ್ ಕುಂದ್ರಾ  ಹೇಳಿದ್ದರು ಎಂದ ಯೂಟ್ಯೂಬ್ ಸ್ಟಾರ್ | ಶಿಲ್ಪಾ ಶೆಟ್ಟಿ ಪತಿಯ ಮತ್ತೊಂದು ಕರ್ಮಕಾಂಡ ಬಯಲು - Mahanayaka
11:17 PM Wednesday 11 - December 2024

ವಿಡಿಯೋದಲ್ಲಿ ಬೆತ್ತಲಾಗಲು ರಾಜ್ ಕುಂದ್ರಾ  ಹೇಳಿದ್ದರು ಎಂದ ಯೂಟ್ಯೂಬ್ ಸ್ಟಾರ್ | ಶಿಲ್ಪಾ ಶೆಟ್ಟಿ ಪತಿಯ ಮತ್ತೊಂದು ಕರ್ಮಕಾಂಡ ಬಯಲು

puneeth cour
21/07/2021

ಮುಂಬೈ: ಶಿಲ್ಪಾ ಶೆಟ್ಟಿ ಪತಿ ರಾಜ್ ಕುಂದ್ರಾ ಬಂಧನದ ವಿಚಾರಕ್ಕೆ ಸಂಬಂಧಿಸಿದಂತೆ ಖ್ಯಾತ ಯೂಟ್ಯೂಬ್ ಸ್ಟಾರ್ ಪುನೀತ್ ಕೌರ್ ಅವರು ರಾಜ್ ಕುಂದ್ರ ವಿರುದ್ಧ ಕಿಡಿಕಾರಿದ್ದು, ಆತ ಜೈಲಿನಲ್ಲಿಯೇ ಕೊಳೆಯಲಿ ಎಂದು ಹಿಡಿಶಾಪ ಹಾಕಿದ್ದಾರೆ.

ಇನ್ ಸ್ಟಾಗ್ರಾಮ್ ನಲ್ಲಿ ಈ ಸಂಬಂಧ ಎರಡು ವಿಡಿಯೋಗಳನ್ನು ಹಂಚಿಕೊಂಡಿರುವ  ಪುನೀತ್ ಕೌರ್,  ರಾಜ್ ಕುಂದ್ರಾ ಅವರು ‘ಹಾಟ್ ಶಾಟ್’ (ಆ್ಯಪ್ )ಗಾಗಿ ನನ್ನನ್ನು ಸಂಪರ್ಕಿಸಿದ್ದರು. ವಿಡಿಯೋದಲ್ಲಿ ಬೆತ್ತಲಾಗುವಂತೆ ಆಮಿಷ ಒಡ್ಡಿದ್ದರು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮೊದಲು ನನಗೆ ಅವರಿಂದ ಸಂದೇಶ ಬಂದಾಗ ತಮಾಷೆ ಅಂದುಕೊಂಡಿದ್ದೆವು. ಆದರೆ, ಈ ಮನುಷ್ಯ ನಿಜವಾಗಿಯೂ ಜನರಿಗೆ ಬೆತ್ತಲಾಗಿ ಕಾಣಿಸಿಕೊಳ್ಳುವಂತೆ ಆಮಿಷ ಒಡ್ಡುತ್ತಿದ್ದ. ಅನು ಜೈಲಿನಲ್ಲಿಯೇ ಕೊಳೆಯಲಿ ಎಂದು ಹಿಡಿಶಾಪ ಹಾಕಿದ್ದಾರೆ.

ಅಶ್ಲೀಲ ಚಿತ್ರಗಳನ್ನು ತಯಾರಿಸಿ ಆ್ಯಪ್ ಗಳಲ್ಲಿ  ಬಿತ್ತರಿಸಿದ ಆರೋಪದ ಮೇಲೆ ಉದ್ಯಮಿ ರಾಜ್ ಕುಂದ್ರಾ ಅವರನ್ನು ಮುಂಬೈ ಪೊಲೀಸರು ಅರೆಸ್ಟ್ ಮಾಡಿದ ಬಳಿಕ ಅವರ ಮೇಲೆ ಇನ್ನಷ್ಟು ಆರೋಪಗಳು ಕೇಳಿ ಬರುತ್ತಿವೆ.

ಇನ್ನಷ್ಟು ಸುದ್ದಿಗಳು…

ಶಿಲ್ಪಾ ಶೆಟ್ಟಿ ಗಂಡ ಮಾಡುತ್ತಿದ್ದದ್ದು ನೀಲಿ ಚಿತ್ರ ಅಲ್ಲ, ಕಾಮೋದ್ರೇಕಕಾರಿ ವಿಡಿಯೋ | ಮಾಡೆಲ್ ಹೇಳಿದ್ದೇನು?

ಶಿಲ್ಪಾ ಶೆಟ್ಟಿಯ ಗಂಡ ಹಣ ಮಾಡಿದ್ದು ಹೇಗೆ? | ರಾಜ್ ಕುಂದ್ರಾ ಬಂಧನದ ಬೆನ್ನಲ್ಲೇ ವಿಡಿಯೋ ವೈರಲ್

ಅಶ್ಲೀಲ ಚಿತ್ರ ಪ್ರಸಾರ: ನಟಿ ಶಿಲ್ಪಾ ಶೆಟ್ಟಿ ಪತಿ ರಾಜ್ ಕುಂದ್ರಾ ಅರೆಸ್ಟ್

25-30 ಮಕ್ಕಳ ಮೇಲೆ ಬಾಣಸಿಗನಿಂದ ಲೈಂಗಿಕ ದೌರ್ಜನ್ಯ | ಕಿರುಕುಳದ ಬಳಿಕ ಈತ ಮಾಡುತ್ತಿದ್ದದ್ದೇನು ಗೊತ್ತಾ?

ಇತ್ತೀಚಿನ ಸುದ್ದಿ