ಅಶ್ಲೀಲ ಚಿತ್ರಗಳ ವ್ಯಾಪಾರದಿಂದ ರಾಜ್ ಕುಂದ್ರಾಗೆ ದಿನವೊಂದಕ್ಕೆ ಬರುತ್ತಿದ್ದ ಆದಾಯ ಎಷ್ಟು ಲಕ್ಷ ಗೊತ್ತಾ? - Mahanayaka
2:40 PM Friday 20 - September 2024

ಅಶ್ಲೀಲ ಚಿತ್ರಗಳ ವ್ಯಾಪಾರದಿಂದ ರಾಜ್ ಕುಂದ್ರಾಗೆ ದಿನವೊಂದಕ್ಕೆ ಬರುತ್ತಿದ್ದ ಆದಾಯ ಎಷ್ಟು ಲಕ್ಷ ಗೊತ್ತಾ?

raj kundra
22/07/2021

ಮುಂಬೈ: ಉದ್ಯಮಿ ರಾಜ್ ಕುಂದ್ರಾ ಅಶ್ಲೀಲ ಚಿತ್ರಗಳ ವ್ಯಾಪಾರದಿಂದ ದಿನವೊಂದಕ್ಕೆ ಬರೋಬ್ಬರಿ 7 ಲಕ್ಷ ರೂಪಾಯಿಗಳನ್ನು ಗಳಿಸುತ್ತಿದ್ದರು ಎಂಬ ವಿಚಾರ ಇದೀಗ ಬೆಳಕಿಗೆ ಬಂದಿದ್ದು, ಈ ವ್ಯಾಪಾರಕ್ಕೆ ಕೈ ಹಾಕಿ ಕೆಲವೇ ಸಮಯಗಳಲ್ಲಿ ಭಾರೀ ಲಾಭ ಗಳಿಸಿದ್ದರು.

ರಾಜ್ ಕುಂದ್ರಾ 18 ತಿಂಗಳ ಹಿಂದೆ ಅಶ್ಲೀಲ ಚಿತ್ರಗಳ ನಿರ್ಮಾಣಕ್ಕೆ ಕೈ ಹಾಕಿದ್ದರು.  ಇವರ ವ್ಯಾಪಾರ ಲಾಕ್ ಡೌನ್ ಸಂದರ್ಭದಲ್ಲಿ ದೊಡ್ಡ ಮಟ್ಟಕ್ಕೆ ಬೆಳೆದಿದ್ದು, ದಿನವೊಂದಕ್ಕೆ 7ರಿಂದ 8 ಲಕ್ಷ ರೂ. ಲಾಭ ಗಳಿಸುತ್ತಿದ್ದರು ಎಂದು ಮುಂಬೈನ ಸಹಾಯಕ ಪೊಲೀಸ್ ಆಯುಕ್ತ ಮಿಲಿಂದ್ ಭ್ರರಾಂಬೆ ತಿಳಿಸಿದ್ದಾರೆ ಎಂದು ವರದಿಯಾಗಿದೆ.

ಕುಂದ್ರಾ ಲಂಡನ್ ನಲ್ಲಿರುವ ಕೆನ್ರಿನ್ ಎಂಬ ಕಂಪೆನಿಯೊಂದಕ್ಕೆ ಅಶ್ಲೀಲ ಚಿತ್ರಗಳನ್ನು ತಯಾರಿಸುತ್ತಿದ್ದರು.  ಕೆನ್ರಿಕ್ ಕಂಪೆನಿಯ ಮಾಲಿಕ ಪ್ರದೀಪ್ ಭಕ್ಷಿ ಕುಂದ್ರಾನ ಭಾವ ಎಂದು ತಿಳಿದು ಬಂದಿದೆ. ಕ್ರೆನಿಕ್ ಸಂಸ್ಥೆ ಹಾಟ್ ಶಾಟ್ಸ್ ಎಂಬ ಆ್ಯಪ್ ನ್ನು ಹೊಂದಿದ್ದು,  ಕುಂದ್ರಾ ತಯಾರಿಸುತ್ತಿದ್ದ ವಿಡಿಯೋಗಳು ಈ ಆ್ಯಪ್ ಸಹಿತ ಹಲವು ಆ್ಯಪ್ ಗಳ ಮೂಲಕ ಪ್ರಸಾರವಾಗುತ್ತಿತ್ತು.


Provided by

ಇನ್ನೂ ಘಟನೆಗೆ ಸಂಬಂಧಿಸಿದಂತೆ ಪೊಲೀಸರು ತನಿಖೆ ಬಿರುಸುಗೊಳಿಸಿದ್ದು, ವಾಟ್ಸಾಪ್ ಸಂಭಾಷಣೆ, ಹಣಕಾಸುಗಳ ವಿನಿಮಯ ದಾಖಲೆಗಳನ್ನು ವಶಪಡಿಸಿಕೊಂಡಿದ್ದು, ಕುಂದ್ರಾಗೆ ಸಂಬಂಧಿಸಿದ ಸುಮಾರು 7.31 ಕೋಟಿ ರೂಪಾಯಿಗಳನ್ನು ಜಪ್ತಿ ಮಾಡಿದ್ದಾರೆ.

ಇನ್ನಷ್ಟು ಸುದ್ದಿ ಓದಿ…

ವಿಡಿಯೋದಲ್ಲಿ ಬೆತ್ತಲಾಗಲು ರಾಜ್ ಕುಂದ್ರಾ  ಹೇಳಿದ್ದರು ಎಂದ ಯೂಟ್ಯೂಬ್ ಸ್ಟಾರ್ | ಶಿಲ್ಪಾ ಶೆಟ್ಟಿ ಪತಿಯ ಮತ್ತೊಂದು ಕರ್ಮಕಾಂಡ ಬಯಲು

25-30 ಮಕ್ಕಳ ಮೇಲೆ ಬಾಣಸಿಗನಿಂದ ಲೈಂಗಿಕ ದೌರ್ಜನ್ಯ | ಕಿರುಕುಳದ ಬಳಿಕ ಈತ ಮಾಡುತ್ತಿದ್ದದ್ದೇನು ಗೊತ್ತಾ?

ಶಿಲ್ಪಾ ಶೆಟ್ಟಿ ಗಂಡ ಮಾಡುತ್ತಿದ್ದದ್ದು ನೀಲಿ ಚಿತ್ರ ಅಲ್ಲ, ಕಾಮೋದ್ರೇಕಕಾರಿ ವಿಡಿಯೋ | ಮಾಡೆಲ್ ಹೇಳಿದ್ದೇನು?

ರಾಜ್ ಕುಂದ್ರಾ ತಯಾರಿಸುತ್ತಿದ್ದ ನೀಲಿ ಚಿತ್ರ ಯಾವ ಆ್ಯಪ್ ನಲ್ಲಿ ಬಿಡುಗಡೆಯಾಗುತ್ತಿತ್ತು? | ಪೊಲೀಸರು ನೀಡಿದ ಆ ಮಾಹಿತಿ ಏನು?

ಇತ್ತೀಚಿನ ಸುದ್ದಿ