ತಂದೆ ಆತ್ಮಹತ್ಯೆ ಮಾಡಿಕೊಂಡ ನಡುವೆಯೇ ಎಸೆಸೆಲ್ಸಿ ಪರೀಕ್ಷೆ ಬರೆದ ಬಾಲಕಿ!
ಯಾದಗಿರಿ: ತಂದೆ ಆತ್ಮಹತ್ಯೆ ಮಾಡಿಕೊಂಡ ನಡುವೆಯೇ ವಿದ್ಯಾರ್ಥಿನಿ ಎಸೆಸೆಲ್ಸಿ ಪರೀಕ್ಷೆ ಬರೆದ ಘಟನೆ ಇಲ್ಲಿನ ಕೆಂಬಾವಿಯ ನಗನೂರ ಗ್ರಾಮದಲ್ಲಿ ನಡೆದಿದ್ದು, ಬುಧವಾರ ಸಂಜೆ ತಂದೆ ಕಾಲುವೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದರೆ, ಗುರುವಾರ ಬೆಳಗ್ಗೆ ವಿದ್ಯಾರ್ಥಿನಿ ಪರೀಕ್ಷೆ ಬರೆದಿದ್ದಾಳೆ.
ನಗನೂರ ಗ್ರಾಮದ ರೈತ 38 ವರ್ಷ ವಯಸ್ಸಿನ ನಿರ್ಮಲರೆಡ್ಡಿ ದೇಶಪಾಂಡೆ ಅವರು ಸಾಲಗಾರರ ಬಾಧೆ ತಾಳಲಾರದೇ ಬುಧವಾರ ಎಡದಂಡೆ ಕಾಲುವೆಗೆ ಹಾರಿ ಆತ್ಮಹತ್ಯೆಗೆ ಶರಣಾಗಿದ್ದರು. ತಂದೆ ಸಾವಿಗೀಡಾದ ಮರುದಿನ ಬೆಳಗ್ಗೆಯೇ ಮಗಳು ಬಿಂದು ದೇಶಪಾಂಡೆ ಎಸೆಸೆಲ್ಸಿ ಪರೀಕ್ಷೆ ಬರೆದಿದ್ದಾರೆ.
ಗುರುವಾರ ಬೆಳಿಗ್ಗೆ ಬಿಂದು ಕೆಂಭಾವಿ ಪಟ್ಟಣದ ವಿದ್ಯಾಲಕ್ಷ್ಮಿ ಶಾಲೆಯ ಪರೀಕ್ಷಾ ಕೇಂದ್ರಕ್ಕೆ ತೆರಳಿ ಬಿಂದು ಪರೀಕ್ಷೆ ಬರೆದರು. ಪರೀಕ್ಷೆ ಮುಗಿಯುವ ವೇಳೆಗೆ ಕಾಲುವೆಯಲ್ಲಿ ತಂದೆಯ ಮೃತದೇಹ ಪತ್ತೆಯಾಗಿತ್ತು.
ಇನ್ನಷ್ಟು ಸುದ್ದಿಗಳು…
ಜೀನ್ಸ್ ಪ್ಯಾಂಟ್ ಧರಿಸಿದ್ದಕ್ಕೆ 16 ವರ್ಷದ ಬಾಲಕಿಯನ್ನು ಕೊಂದರು!
ಪ್ರೇಯಸಿ ಕೊವಿಡ್ ಗೆ ಬಲಿಯಾದ ಸುದ್ದಿ ತಿಳಿದು ನೇಣು ಬಿಗಿದು ಆತ್ಮಹತ್ಯೆಗೆ ಶರಣಾದ ಪ್ರಿಯಕರ
ಚೈತ್ರಾ ಕೋಟೂರ್ ಸನ್ಯಾಸಿನಿ ಆಗಿದ್ದು ನಿಜವೇ? | ಅಸಲಿಗೆ ನಡೆದದ್ದೇನು?
ಭಾರೀ ಮಳೆಗೆ ಕುಸಿದ ಗೋಡೆ: 15 ಮಂದಿ ದಾರುಣ ಸಾವು, 17 ಮಂದಿಗೆ ಗಂಭೀರ ಗಾಯ
ಶಿಲ್ಪಾ ಶೆಟ್ಟಿಯ ಗಂಡ ಹಣ ಮಾಡಿದ್ದು ಹೇಗೆ? | ರಾಜ್ ಕುಂದ್ರಾ ಬಂಧನದ ಬೆನ್ನಲ್ಲೇ ವಿಡಿಯೋ ವೈರಲ್