ಐಷಾರಾಮಿ ಮದುವೆಗೆ ಬಂದ ಪೊಲೀಸರು ಮದುವೆಯನ್ನು ನಿಲ್ಲಿಸಿದರು! - Mahanayaka
6:17 PM Friday 20 - September 2024

ಐಷಾರಾಮಿ ಮದುವೆಗೆ ಬಂದ ಪೊಲೀಸರು ಮದುವೆಯನ್ನು ನಿಲ್ಲಿಸಿದರು!

kerala marriage story
24/07/2021

ಕಾಸರಗೋಡು: ಕರ್ನಾಟಕದಲ್ಲಿ ಲಾಕ್ ಡೌನ್ ತೆರವುಗೊಳಿಸಲಾಗಿದ್ದರೂ ಕೇರಳದಲ್ಲಿ ಇನ್ನೂ ಲಾಕ್ ಡೌನ್ ಸಡಿಲಿಕೆ ಆಗಿಲ್ಲ. ಕಾಸರಗೋಡಿನಲ್ಲಿ ಕೊವಿಡ್ ನಿಯಮಗಳನ್ನು ಉಲ್ಲಂಘಿಸಿ ಐಷಾರಾಮಿ ಮದುವೆಗೆ ಕೇರಳ ಪೊಲೀಸರು ದಾಳಿ ನಡೆಸಿದ್ದು, ಮದುವೆಯಲ್ಲಿ ಭಾಗವಹಿಸಿದವರ ಮೇಲೆ ಕೇಸು ಜಡಿದಿದ್ದಾರೆ.

ಇಲ್ಲಿನ ಮಾಧುರ್ ಕೊಲ್ಲಂಕಣಂನ ನಕ್ಷತ್ರ ರೆಸಾರ್ಟ್ ನಲ್ಲಿ ನಿನ್ನೆ ಮದುವೆ ಆಯೋಜಿಸಲಾಗಿತ್ತು. ಮದುವೆಯಲ್ಲಿ ಸಾವಿರಾರು ಮಂದಿ ಭಾಗವಹಿಸಲು ವಿವಿಧ ಸ್ಥಳಗಳಿಂದ ಆಗಮಿಸಿದ್ದರು. ಈ ವೇಳೆ  ದಾಳಿ ನಡೆಸಿದ ಕಾಸರಗೋಡು ಪೊಲೀಸರು, ಮದುವೆಗೆ ಹಾಕಲಾಗಿದ್ದ ಚಪ್ಪರ ಮೊದಲಾದ ಐಷಾರಾಮಿ ಡೆಕೊರೇಶನ್ ಗಳನ್ನು ತೆಗೆದು ಹಾಕಿದ್ದಾರೆ.

ಮದುವೆಗೆ ಎರ್ನಾಕುಲಂ, ಕೋಝಿಕ್ಕೋಡ್, ಕಣ್ಣೂರು ಹಾಗೂ ಮಂಗಳೂರಿನಿಂದ ವಾಹನಗಳ ಮೂಲಕ ಜನರು ಆಗಮಿಸಿದ್ದಾರೆ. ಕೊವಿಡ್ ನಿಯಮಗಳನ್ನು ಮೀರಿ ಮದುವೆಯಲ್ಲಿ ಪಾಲ್ಗೊಂಡಿರುವುದಕ್ಕೆ ವಾಹನದ ಮಾಲಿಕರ ಮೇಲೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.


Provided by

ಇನ್ನೂ ಐಷಾರಾಮಿ ಮದುವೆ ನಡೆಸಲು ಮುಂದಾಗಿರುವುದಕ್ಕೆ ಸಂಬಂಧಿಸಿದಂತೆ ರೆಸಾರ್ಟ್ ನ ಮಾಲಿಕರ ಹಾಗೂ ವಿವಾಹ ಆಯೋಜಿಸಿದವರ ಮೇಲೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಸರಳ ವಿವಾಹಕ್ಕೆ ಪೊಲೀಸರು ಅನುಮತಿ ನೀಡಿದ್ದರು. ಕೇವಲ ಮೂರು ವಾಹನಗಳಿಗೆ ಮಾತ್ರವೇ ಅವಕಾಶ ನೀಡಲಾಗಿತ್ತು. ಮದುವೆಗೆ ವಧು-ವರರ ಕುಟುಂಬಸ್ಥರಿಗೆ ಮಾತ್ರವೇ ಅವಕಾಶವನ್ನು ನೀಡಲಾಗಿತ್ತು. ಆದರೆ ಕೊವಿಡ್ ಮಾನದಂಡಗಳನ್ನು ನಿರ್ಲಕ್ಷಿಸಿ ಮದುವೆ ಮಾಡಿರುವ ಹಿನ್ನೆಲೆಯಲ್ಲಿ ಮದುವೆ ಸಂಭ್ರಮದಲ್ಲಿದ್ದವರಿಗೆ ಪೊಲೀಸರು ಶಾಕ್ ನೀಡಿದ್ದಾರೆ. ಇನ್ನೂ ಸಾವಿರಾರು ಜನರಿಗೆ ಮದುವೆ ಆಮಂತ್ರಣ ನೀಡಲಾಗಿತ್ತು. ಇದರಿಂದಾಗಿ ಭರ್ಜರಿ ಭೋಜನವನ್ನು ಕೂಡ ತಯಾರಿಸಲಾಗಿತ್ತು. ಪೊಲೀಸರ ದಾಳಿಯಿಂದಾಗಿ ಆಹಾರಗಳೆಲ್ಲವೂ ಹಾಳಾಗಿ ಹೋಗಿದೆ ಎಂದು ತಿಳಿದು ಬಂದಿದೆ.

ಇನ್ನಷ್ಟು ಸುದ್ದಿಗಳು…

ನನ್ನ ಗಂಡ ಅಮಾಯಕ, ಅವರು ಮಾಡಿದ್ದು ಸೆಕ್ಸ್ ವಿಡಿಯೋ ಅಲ್ಲ ಕಾಮ ಪ್ರಚೋದಕ ವಿಡಿಯೋ | ಶಿಲ್ಪಾ ಶೆಟ್ಟಿ

ಬೆಚ್ಚಿ ಬೀಳಿಸಿದ ಘಟನೆ: ಬಹಿರ್ದೆಸೆಗೆ ತೆರಳಿದ್ದ ಬಾಲಕಿಯ ಮೇಲೆ ಅತ್ಯಾಚಾರ ಎಸಗಿ ಹತ್ಯೆ!

ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡು ಒಂದೇ ಮನೆಯ 9 ಮಂದಿ ದುರಂತ ಸಾವು!

121 ಅಶ್ಲೀಲ ವಿಡಿಯೋಗಳನ್ನು 12 ಲಕ್ಷ ರೂ. ಮಾರಾಟ ಮಾಡಲು ಮುಂದಾಗಿದ್ದ ರಾಜ್ ಕುಂದ್ರಾ!

 

ಇತ್ತೀಚಿನ ಸುದ್ದಿ