ಸಿಎಂ ಬದಲಾವಣೆ: ಮಹತ್ವದ ವಿಚಾರ ಹಂಚಿಕೊಂಡ ಸಿಎಂ ಯಡಿಯೂರಪ್ಪ - Mahanayaka

ಸಿಎಂ ಬದಲಾವಣೆ: ಮಹತ್ವದ ವಿಚಾರ ಹಂಚಿಕೊಂಡ ಸಿಎಂ ಯಡಿಯೂರಪ್ಪ

yediyurappa
25/07/2021

ಬೆಳಗಾವಿ: ರಾಜ್ಯದಲ್ಲಿ ಇಂದು ಸಂಜೆಯೊಳಗೆ ಸಿಎಂ ಬದಲಾವಣೆ ಸಾಧ್ಯತೆ ಇದೆ ಎಂದು ಹೇಳಲಾಗಿದ್ದು, ಈ ಬಗ್ಗೆ ಹಾಲಿ ಮುಖ್ಯಮಂತ್ರಿ ಯಡಿಯೂರಪ್ಪನವರು ಪ್ರತಿಕ್ರಿಯಿಸಿದ್ದಾರೆ. ಹಲವು ತಿಂಗಳುಗಳಿಂದ ನಡೆಯುತ್ತಿದ್ದ ಮುಖ್ಯಮಂತ್ರಿ ಬದಲಾವಣೆಯ ಗುದ್ದಾಟಕ್ಕೆ ಇಂದು ಅಂತಿಮ ತೆರೆ ಬೀಳುವ ಸಾಧ್ಯತೆಗಳು ಕಾಣಿಸಿದೆ.

ಬೆಳಗಾವಿ ಮಳೆ ಹಾನಿ ಪ್ರದೇಶಕ್ಕೆ ಭೇಟಿ ನೀಡಲು ಇಂದು ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಮುಖ್ಯಮಂತ್ರಿ ಯಡಿಯೂರಪ್ಪ ಮಾಧ್ಯಮಗಳ ಜೊತೆಗೆ ಮುಖ್ಯಮಂತ್ರಿ ಬದಲಾವಣೆ ವಿಚಾರಕ್ಕೆ ಸಂಬಂಧಿಸಿದಂತೆ ಹಲವು ವಿಚಾರಗಳನ್ನು ಹಂಚಿಕೊಂಡರು.

ಇಂದು ಸಂಜೆಯೊಳಗೆ ಹೈಕಮಾಂಡ್ ನಿಂದ ಸಂದೇಶ ಬರಲಿದೆ. ಯಾವ ಸಂದೇಶ ಬರಲಿದೆ ಎನ್ನುವುದನ್ನು ನೋಡೋಣ, ಗೃಹ ಸಚಿವ ಅಮಿತ್ ಶಾ ಹಾಗೂ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರ ಮೇಲೆ ನನಗೆ ವಿಶ್ವಾವಿದೆ ಎಂದು ಮುಖ್ಯಮಂತ್ರಿ ತಿಳಿಸಿದರು.

ಇನ್ನೂ ಸ್ವಾಮೀಜಿಗಳ ಸಮಾವೇಶಕ್ಕೆ ಕುರಿತಂತೆ ಮಾತನಾಡಿದ ಅವರು, ಪಕ್ಷದ ವರಿಷ್ಠರ ಮೇಲೆ ನನಗೆ ವಿಶ್ವಾಸವಿದೆ. ಸ್ವಾಮೀಜಿಗಳು ಸಮಾವೇಶ ನಡೆಸುವ ಅಗತ್ಯವಿರಲಿಲ್ಲ ಎಂದು ತಿಳಿಸಿದರು. ಇನ್ನೂ ಬಿಜೆಪಿಯಿಂದ ದಲಿತ ಸಿಎಂ ಮಾಡುವ ವಿಚಾರಕ್ಕೆ ಸಂಬಂಧಿಸಿದಂತೆ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಅವರು, ದಲಿತ ಸಿಎಂ ಮಾಡುವವನು ನಾನಲ್ಲ, ಹೈಕಮಾಂಡ್. ಹೈಕಮಾಂಡ್ ನಿಂದ ಯಾವ ಸಂದೇಶ ಬರುತ್ತದೆ ನೋಡೋಣ ಎಂದು ಹೇಳಿದರು.

ಇನ್ನಷ್ಟು ಸುದ್ದಿಗಳು…

 

ಮುಖ್ಯಮಂತ್ರಿ ಬದಲಾವಣೆ: ರಾತ್ರೋ ರಾತ್ರಿ ಬಸವರಾಜ್ ಬೊಮ್ಮಾಯಿ, ಪ್ರಹ್ಲಾದ್ ಜೋಶಿ ನಡುವೆ ರಹಸ್ಯ ಚರ್ಚೆ!

ಭಾರೀ ಮಳೆಗೆ 138 ಮಂದಿ ಸಾವು, 89 ಮಂದಿಗೆ ಗಂಭೀರ ಗಾಯ ನಾಪತ್ತೆಯಾದವರೆಷ್ಟು ಗೊತ್ತಾ?

ನನ್ನ ಗಂಡ ಅಮಾಯಕ, ಅವರು ಮಾಡಿದ್ದು ಸೆಕ್ಸ್ ವಿಡಿಯೋ ಅಲ್ಲ ಕಾಮ ಪ್ರಚೋದಕ ವಿಡಿಯೋ | ಶಿಲ್ಪಾ ಶೆಟ್ಟಿ

ಅಂಬೇಡ್ಕರ್ ಅವರನ್ನು ಸೋಲಿಸಿದ್ದು ಕಾಂಗ್ರೆಸ್, ರಾಜ್ಯ ದಲಿತ ನಾಯಕರನ್ನೂ ಸೋಲಿಸಿದ್ದು ಕಾಂಗ್ರೆಸ್ | ಕಟೀಲ್ ತಿರುಗೇಟು

ಇತ್ತೀಚಿನ ಸುದ್ದಿ