ಕೇರಳದಲ್ಲಿ ಆತಂಕ ಸೃಷ್ಟಿಸಿದ ವಿಚಿತ್ರ ಮಳೆ: ಅಲ್ಪ ಸಮಯದಲ್ಲಿ ತೀವ್ರ ಹಾನಿ ಮಾಡುತ್ತಿದೆ ಸುಳಿಗಾಳಿ ಸಹಿತ ಮಳೆ - Mahanayaka
4:14 PM Friday 20 - September 2024

ಕೇರಳದಲ್ಲಿ ಆತಂಕ ಸೃಷ್ಟಿಸಿದ ವಿಚಿತ್ರ ಮಳೆ: ಅಲ್ಪ ಸಮಯದಲ್ಲಿ ತೀವ್ರ ಹಾನಿ ಮಾಡುತ್ತಿದೆ ಸುಳಿಗಾಳಿ ಸಹಿತ ಮಳೆ

mini tornado
25/07/2021

ತಿರುವನಂತಪುರಂ: ಕೇರಳದಲ್ಲಿ ಸುಳಿಗಾಳಿ ಸಹಿತ ಭಾರೀ ಮಳೆ, ಸಿಡಿಲುಗಳ ವಿಚಿತ್ರ ಮಳೆಯಾಗುತ್ತಿದ್ದು, ಅಲ್ಪ ಸಮಯದಲ್ಲಿಯೇ ಅತೀ ಹೆಚ್ಚು ಅನಾಹುತಗಳನ್ನು ಈ ಮಳೆ ಸೃಷ್ಟಿಸುತ್ತಿದೆ ಎಂದು ವರದಿಯಾಗಿದೆ.

 

ಈ ವಿಚಿತ್ರ ಗಾಳಿ ಮಳೆಯನ್ನು ಎದುರಿಸಲು ಮುನ್ನೆಚ್ಚರಿಕೆ ಕ್ರಮಗಳನ್ನು ವಹಿಸಲು ಸರಿಯಾದ ತಾಂತ್ರಿಕ ವ್ಯವಸ್ಥೆಗಳಿಲ್ಲದ ಹಿನ್ನೆಲೆಯಲ್ಲಿ ಈ ಸಮಸ್ಯೆಯನ್ನು ನಿರ್ವಹಿಸಲು ತೊಡಕುಂಟಾಗಿದೆ ಎಂದು ತಿಳಿದು ಬಂದಿದೆ.


Provided by

 

ಎರ್ನಾಕುಲಂ, ಇಡುಕ್ಕಿ, ತ್ರಿಶ್ಶೂರ್ ಜಿಲ್ಲೆಗಳಲ್ಲಿ ಕಳೆದ ಕೆಲವು ದಿನಗಳಿಂದ ಈ ಮಿನಿ ಸುಳಿಗಾಳಿ(Mini Tornado) ವ್ಯಾಪಕ ಹಾನಿಯನ್ನುಂಟು ಮಾಡುತ್ತಿದ್ದು, 10 ನಿಮಿಷಗಳಿಂದ ಅರ್ಧಗಂಟೆಗಳ ವರೆಗೆ ಮಳೆ ಸುರಿಯುತ್ತಿದ್ದು, ಈ ನಡುವೆ ಈ ಸುಳಿಗಾಳಿ ಬೀಸುತ್ತಿದೆ. ಇದರಿಂದಾಗಿ ಭಾರೀ ಮರಗಳು ನೆಲಕ್ಕುರುಳಿವೆ, ಭೂಕುಸಿತಗಳು ಏರ್ಪಟ್ಟಿವೆ. ಈ ವಿಚಿತ್ರ ಗಾಳಿ ಮಳೆ ಕೇರಳದಲ್ಲಿ ಅತೀ ಕಡಿಮೆ ಅವಧಿಯಲ್ಲಿ ಹೆಚ್ಚಿನ ಹಾನಿಯನ್ನುಂಟು ಮಾಡಿದೆ.

 

ಕೋಯಿಕ್ಕೋಡ್, ತ್ರಿಶ್ಶೂರ್, ಎರ್ನಾಕುಲಂ, ಇಡುಕ್ಕಿ, ಪತ್ತನತಿಟ್ಟಂ ಜಿಲ್ಲೆಗಳಿಂದ ಈ ಕಿರು ಮೇಘಾ ವಿಸ್ಪೋಟ ಸಂಭವಿಸಿದ ಬಗ್ಗೆ ವರದಿಯಾಗಿದೆ. ಅಸಾಧಾರಣ ಗುಡುಗು ಸಹಿತ ಮಿಂಚು ಸಹಿತ ಭಾರೀ ಮಳೆ ಸುರಿದು 5 ನಿಮಿಷಗಳಲ್ಲಿ ಈ ಸುಳಿಗಾಳಿ ಆರಂಭವಾಗುತ್ತಿದ್ದು, ಈ ಗಾಳಿ ಬೀಸಿದ ಬೆನ್ನಲ್ಲೇ ಭೂಕುಸಿತ, ಮರಗಳು ಧರೆಗುರುಳುವುದು ಮೊದಲಾದ ವಿಚಿತ್ರ ಸನ್ನಿವೇಶಗಳು ಸೃಷ್ಟಿಯಾಗುತ್ತಿವೆ. ಅತ್ಯಂತ ಕಡಿಮೆ ಅವಧಿಯಲ್ಲಿ ಅತ್ಯಂತ ಅಧಿಕ ನಷ್ಟವನ್ನು ಈ ಗಾಳಿ ಮಳೆ ಉಂಟು ಮಾಡುತ್ತಿದೆ.

 

ಸಣ್ಣ ಭೂಪ್ರದೇಶಗಳ ಮೇಲೆ ಇದರ ಪರಿಣಾಮ ಹೆಚ್ಚಾಗಿ ಕಂಡು ಬಂದಿದ್ದು, ಮರಗಳ ರೆಂಬೆಗಳು ಮುರಿದು ಬೀಳುವುದು ಇಲ್ಲವೇ ಮರವನ್ನು ಬೇರು ಸಹಿತ ಈ ಗಾಳಿ ಕಿತ್ತು ಹಾಕುತ್ತಿದೆ. ನೂರಾರು ಮರಗಳು ಏಕಾಏಕಿ ಬೀಸಿ ಬರುವ ಗಾಳಿಗೆ ನೆಲಕ್ಕೆ ಉರುಳಿತ್ತಿವೆ. ಕೃಷಿ, ಕಟ್ಟಡಗಳು, ವಿದ್ಯುತ್ ಕಂಬಗಳು, ಅಂಗಡಿಯ ಬೋರ್ಡ್ ಗಳು ಗಾಳಿಯ ತೀವ್ರತೆಗೆ ಹಾನಿಗೊಳಗಾಗಿವೆ ಎಂದು ವರದಿಯಾಗಿದೆ.

 

ಅಂತರಿಕ್ಷದಲ್ಲಿ ಸಂಭವಿಸುವ ಬದಲಾವಣೆಗಳಿಂದಾಗಿ ಈ ರೀತಿಯ ಬದಲಾವಣೆಗಳು ವಾತಾವರಣಗಳಲ್ಲಿ ಸೃಷ್ಟಿಯಾಗಿತ್ತವೆ. ಇದನ್ನು ಪತ್ತೆ ಹಚ್ಚಬೇಕಾದರೆ, ಅದಕ್ಕೆ ಬೇಕಾದ ರಾಡರ್ ಉಪಕರಣಗಳು ಕೇರಳ ರಾಜ್ಯದಲ್ಲಿ ಇಲ್ಲವಾದ ಕಾರಣ, ಇದನ್ನು ಪತ್ತೆ ಹಚ್ಚಿ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವುದು ಕಷ್ಟಕರವಾದ ಸಂಗತಿಯಾಗಿದೆ. ಇನ್ನೂ ಈ ಸುಳಿಗಾಳಿ ಮಳೆ ಪಕ್ಕದ ಜಿಲ್ಲೆಗಳಿಗೆ, ರಾಜ್ಯಗಳಿಗೆ ವ್ಯಾಪಿಸುವ ಸಾಧ್ಯತೆಗಳು ಕೂಡ ಇವೆ ಎಂದು ಹೇಳಲಾಗಿದೆ.

 

ಇನ್ನಷ್ಟು ಸುದ್ದಿಗಳು…

ಮುಂದಿನ 5 ದಿನಗಳವರೆಗೆ ರಾಜ್ಯದಲ್ಲಿ ಮಳೆಯ ಅಬ್ಬರ ಮುಂದುವರಿಲಿದೆ!

ಸಿಎಂ ಬದಲಾವಣೆ: ಮಹತ್ವದ ವಿಚಾರ ಹಂಚಿಕೊಂಡ ಸಿಎಂ ಯಡಿಯೂರಪ್ಪ

ಬೆಚ್ಚಿ ಬೀಳಿಸಿದ ಘಟನೆ: ಬಹಿರ್ದೆಸೆಗೆ ತೆರಳಿದ್ದ ಬಾಲಕಿಯ ಮೇಲೆ ಅತ್ಯಾಚಾರ ಎಸಗಿ ಹತ್ಯೆ!

ಯುವಕನ ಲಾಕಪ್ ಡೆತ್ ವಿರೋಧಿಸಿ ಪೊಲೀಸ್ ಠಾಣೆಗೆ ನುಗ್ಗಿದ ಗ್ರಾಮಸ್ಥರು | ಮಹಿಳಾ ಪೇದೆ ಸ್ಥಳದಲ್ಲಿಯೇ ಸಾವು

ಭಾರೀ ಮಳೆಗೆ 138 ಮಂದಿ ಸಾವು, 89 ಮಂದಿಗೆ ಗಂಭೀರ ಗಾಯ ನಾಪತ್ತೆಯಾದವರೆಷ್ಟು ಗೊತ್ತಾ?

“BSP ಗೆದ್ದು ಬಂದ ನೆಲದಲ್ಲಿ ರಾಮಮಂದಿರ ನಿರ್ಮಾಣವಾಗುತ್ತದೆ” | ಬಿಎಸ್ ಪಿಯಿಂದ ಅಚ್ಚರಿಯ ಹೇಳಿಕೆ

ಆಟವಾಡುತ್ತಿದ್ದ ವೇಳೆ ಗಣೇಶನ ಮೂರ್ತಿಯನ್ನು ನುಂಗಿದ ಬಾಲಕ !

ಇತ್ತೀಚಿನ ಸುದ್ದಿ