ರಾಜ್ ಕುಂದ್ರಾ 20-25 ನಿಮಿಷದ ಸಾಫ್ಟ್ ಅಶ್ಲೀಲ ಚಿತ್ರ ಮಾಡುತ್ತಿದ್ದರು: ತನ್ವೀರ್ ಹಶ್ಮಿ - Mahanayaka
1:13 PM Thursday 12 - December 2024

ರಾಜ್ ಕುಂದ್ರಾ 20-25 ನಿಮಿಷದ ಸಾಫ್ಟ್ ಅಶ್ಲೀಲ ಚಿತ್ರ ಮಾಡುತ್ತಿದ್ದರು: ತನ್ವೀರ್ ಹಶ್ಮಿ

raj kundra
26/07/2021

ಮುಂಬೈ: ಅಶ್ಲೀಲ ವಿಡಿಯೋ ತಯಾರಿಕೆ ಸೇರಿದಂತೆ ಹಲವು ಆರೋಪಗಳಲ್ಲಿ ಬಂಧಿತನಾಗಿರುವ ಶಿಲ್ಪಾ ಶೆಟ್ಟಿಯ ಪತಿ ರಾಜ್ ಕುಂದ್ರಾನ ಮಾಜಿ ಉದ್ಯೋಗಿ, ಕಂಟೆಂಟ್ ಕ್ರಿಯೇಟರ್ ತನ್ವೀರ್ ಹಶ್ಮಿ, ರಾಜ್ ಕುಂದ್ರಾ ಪ್ರಕರಣಕ್ಕೆ ಸಂಬಂಧಿಸಿದಂತೆ  ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾನೆ.

ರಾಜ್ ಕುಂದ್ರಾ ಮಾಡುತ್ತಿದ್ದ ವಿಡಿಯೋ ಅಶ್ಲೀಲ ವಿಡಿಯೋ ಅಲ್ಲ, ಅದು ಸಾಫ್ಟ್ ಅಶ್ಲೀಲ ವಿಡಿಯೋ ಎಂದು ಹೇಳಿದ್ದು, ರಾಜ್ ಕುಂದ್ರಾ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ನನ್ನಿಂದ ಹೇಳಿಕೆ ಪಡೆದುಕೊಂಡಿದ್ದಾರೆ ಎಂದು ಹೇಳಿದ್ದಾನೆ.

ತನ್ವೀರ್ ಹಶ್ಮಿ ಕೂಡ ಈ ಹಿಂದೆ ಅಶ್ಲೀಲ ಚಿತ್ರ ಪ್ರಕರಣಗಳಿಗೆ ಸಂಬಂಧಿಸಿದಂತೆ ಬಂಧನಕ್ಕೊಳಗಾಗಿ ಬಳಿಕ ಜಾಮೀನು ಪಡೆದುಕೊಂಡು ಹೊರ ಬಂದಿದ್ದ. ಇದೀಗ ರಾಜ್ ಕುಂದ್ರಾನನ್ನು ಪರೋಕ್ಷವಾಗಿ ಬೆಂಬಲಿಸಿದ್ದಾನೆ ಎನ್ನಲಾಗಿದೆ. ಇದೀಗ ರಾಜ್ ಕುಂದ್ರಾನ ಪ್ರಕರಣಕ್ಕೆ ಸಂಬಂಧಿಸಿದಂತೆ ಕ್ರೈಂ ಬ್ರ್ಯಾಂಚ್ ಪೊಲೀಸರು ಹಲವು ಪ್ರಶ್ನೆಗಳನ್ನು ಕೇಳಿದ್ದು, ಅದಕ್ಕೆ ಉತ್ತರಿಸಿದ್ದೇನೆ ಎಂದು ತನ್ವೀರ್ ಹೇಳಿದ್ದಾನೆ.

ರಾಜ್ ಕುಂದ್ರಾನ ಪರಿಚಯವಾಗಿದ್ದು ಯಾವಾಗ? ಇಬ್ಬರ ನಡುವೆ ಏನು ವ್ಯವಹಾರಗಳಿತ್ತು? ಮೊದಲಾದ ಪ್ರಶ್ನೆಗಳನ್ನು  ಪೊಲೀಸರು ನನಗೆ ಕೇಳಿದರು. ಆದರೆ, ನಾನು ಒಮ್ಮೆಯೂ ರಾಜ್ ಕುಂದ್ರಾ ಅವರನ್ನು ಭೇಟಿಯಾಗಿಲ್ಲ ಎಂದು ಹೇಳಿದ್ದೇನೆ ಎಂದು ತನ್ವೀರ್ ಹೇಳಿದ್ದಾನೆ.

ನಾನು ರಾಜ್ ಕುಂದ್ರಾ ಒಡೆತನದ ಆ್ಯಪ್ ಗೆ ಸಂಬಂಧಿಸಿದಂತೆ ಕಂಟೆಂಟ್ ಗಳನ್ನು ಸಿದ್ಧಪಡಿಸುವ ಕೆಲಸ ಮಾಡಿದ್ದೇನೆ. ನಾನು ರಾಜ್ ಕುಂದ್ರಾ ಕಂಪೆನಿ ಉದ್ಯೋಗಿ ಅಲ್ಲ. ಸುಮಾರು 20ರಿಂದ 25 ನಿಮಿಷದ ಕಿರುಚಿತ್ರಗಳನ್ನು ನಾವು ಮಾಡಿದ್ದೇವೆ. ಆದ್ರೆ ಅದ್ಯಾವುದೂ ಅಶ್ಲೀಲ ಚಿತ್ರಗಳಲ್ಲ. ನಾವು ಅದನ್ನು ಸಾಫ್ಟ್ ಪೋರ್ನ್ ಎಂದು ಕರೆಯುತ್ತೇವೆ ಎಂದು ತನ್ವೀರ್ ಹಶ್ಮಿ ಹೇಳಿದ್ದಾನೆ.

ಇನ್ನಷ್ಟು ಸುದ್ದಿಗಳು…

ಫೋಟೋ ಶೇರ್ ಮಾಡಿದ ಕೆಲವೇ ನಿಮಿಷಗಳಲ್ಲಿ ಸಾವನ್ನಪ್ಪಿದ ಆಯುರ್ವೇದ ವೈದ್ಯೆ!

ಮತದಾರರ ಗುರುತಿನ ಚೀಟಿ ಕಳೆದು ಹೋದರೆ ಏನು ಮಾಡಬೇಕು?

ಬೆಳಗ್ಗೆ ಅಕ್ಕನ ಯೋಗದ ಭಂಗಿ, ಭಾವನಿಂದ ರಾತ್ರಿಯ ಭಂಗಿ | ಶಿಲ್ಪಾ ಶೆಟ್ಟಿಯ ತಂಗಿ ವಿರುದ್ಧ ಟ್ರೋಲ್

ಬೆಟ್ಟದಿಂದ ಉರುಳಿದ ಬೃಹತ್ ಬಂಡೆಗಳು: 9 ಮಂದಿ ಸಾವು | ಭಯಾನಕ ವಿಡಿಯೋ ವೈರಲ್

ಪತಿಯ ಜೊತೆಗೆ ಜಗಳವಾಡಿ, ತನ್ನ ನಾಲ್ವರು ಮಕ್ಕಳನ್ನು ಬಾವಿಗೆ ತಳ್ಳಿದ ಪಾಪಿ ತಾಯಿ

ಇತ್ತೀಚಿನ ಸುದ್ದಿ