ಅಶ್ಲೀಲ ಚಿತ್ರ ನಿರ್ಮಾಣ: ಮಧ್ಯಂತರ ಜಾಮೀನು ಕೋರಿದ ಬಾಲಿವುಡ್ ನ ಮತ್ತೋರ್ವಳು ನಟಿ

ಸಿನಿಡೆಸ್ಕ್: ಶಿಲ್ಪಾ ಶೆಟ್ಟಿ ಪತಿ ರಾಜ್ ಕುಂದ್ರಾ ಅವರ ಅಶ್ಲೀಲ ಚಿತ್ರ ನಿರ್ಮಾಣ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಅಶ್ಲೀಲ ಚಿತ್ರಗಳಲ್ಲಿ ನಟಿಸಿದ್ದ ನಟಿಯರಿಗೂ ಇದೀಗ ಬಿಸಿ ಮುಟ್ಟಿದ್ದು, ಮತ್ತೋರ್ವ ಬಾಲಿವುಡ್ ನಟಿ, ಮಾಡೆಲ್ ಗೆ ಮುಂಬೈ ಪೊಲೀಸರು ಸಮನ್ಸ್ ನೀಡಿದ್ದಾರೆ.
ಇನ್ನೂ ರಾಜ್ ಕುಂದ್ರಾನನ್ನು ಅರೆಸ್ಟ್ ಮಾಡಿದ ಬಳಿಕ ಬಾಲಿವುಡ್ ನಟಿ ಶೆರ್ಲಿನ್ ಚೋಪ್ರಾ ಇನ್ ಸ್ಟಾಗ್ರಾಮ್ ನಲ್ಲಿ ಈ ಬಗ್ಗೆ ಪೋಸ್ಟ್ ಮಾಡಿದ್ದು, ರಾಜ್ ಕುಂದ್ರಾನ ಅರೆಸ್ಟ್ ಆದ ಬಳಿಕ ತನಗೆ ಮೆಸೇಜ್, ವಾಟ್ಸ್ಯಾಪ್ ಚಾಟ್, ಇಮೇಲ್ ಗಂ ಮೂಲಕ ಪ್ರಶ್ನೆಗಳು ಬರುತ್ತಿದ್ದು, ಈ ಪ್ರಕರಣದಲ್ಲಿ ನಿಮ್ಮ ಪಾತ್ರ ಇದೆಯಾ? ಎಂದು ಪ್ರಶ್ನಿಸುತ್ತಿದ್ದಾರೆ ಎಂದು ಹೇಳಿದ್ದರು.
ಇನ್ನೂ ಮುಂಬೈ ಪೊಲೀಸರು ನಟಿ ಶೆರ್ಲಿನ್ ಚೋಪ್ರಾ ಅವರಿಗೆ ನೋಟಿಸ್ ಕಳಿಸುತ್ತಿದ್ದಂತೆಯೇ ಅವರು, ಮುಂಬೈ ಕೋರ್ಟ್ ಮೊರೆ ಹೋಗಿದ್ದು, ಮಧ್ಯಂತರ ಜಾಮೀನು ಕೋರಿದ್ದಾರೆ. ಇನ್ನು ವಿಚಾರಣೆಗೆ ಹಾಜರಾಗಲು ಅವರು ಹಿಂದೇಟು ಹಾಕಿದ್ದಾರೆ ಎಂದು ಹೇಳಲಾಗಿದೆ.
ಇನ್ನೂ ರಾಜ್ ಕುಂದ್ರಾ ಅಶ್ಲೀಲ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಕೆಲವರನ್ನು ವಶಕ್ಕೆ ಪಡೆದು ಮುಂಬೈ ಕ್ರೈಂ ಬ್ರಾಂಚ್ ಪೊಲೀಸರು ವಿಚಾರಣೆ ನಡೆಸಿದ್ದಾರೆ. ಈ ನಡುವೆ ರಾಜ್ ಕುಂದ್ರಾ ಪತಿ ಶಿಲ್ಪಾ ಶೆಟ್ಟಿ ಹಾಗೂ ಇನ್ನಿತರರು ರಾಜ್ ಕುಂದ್ರಾ ತಪ್ಪು ಮಾಡಿಲ್ಲ, ಅವರು ಮಾಡುತ್ತಿದ್ದದ್ದು ಅಶ್ಲೀಲ ಚಿತ್ರ ಅಲ್ಲ, ಅವರು ಕಾಮೋದ್ರೇಕದ ವಿಡಿಯೋ ಮಾಡುತ್ತಿದ್ದರು ಎಂದು ವಾದಿಸಿದ್ದಾರೆ. ಅಶ್ಲೀಲ ಚಿತ್ರಕ್ಕೂ ಕಾಮೋದ್ರೇಕದ ವಿಡಿಯೋಗಳಿಗೂ ವ್ಯತ್ಯಾಸ ಇದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಇನ್ನಷ್ಟು ಸುದ್ದಿಗಳು…
ಅತ್ತೆಯನ್ನು ಪ್ರಿಯಕರನ ಜೊತೆ ಸೇರಿ ಮುಗಿಸಿದ ಸೊಸೆ | ಸಿನಿಮೀಯ ಶೈಲಿಯಲ್ಲಿ ಹತ್ಯೆ ನಡೆಸಿದ್ದ ಆರೋಪಿಗಳು
ಸಣ್ಣ ನಟಿಯರಿಗೆ ಆಮಿಷ ಒಡ್ಡಿ ಕಾಮಪ್ರಚೋದಕ ವಿಡಿಯೋದಲ್ಲಿ ನಟಿಸುತ್ತಿದ್ದ ರಾಜ್ ಕುಂದ್ರಾ
ರಾಜ್ ಕುಂದ್ರಾ 20-25 ನಿಮಿಷದ ಸಾಫ್ಟ್ ಅಶ್ಲೀಲ ಚಿತ್ರ ಮಾಡುತ್ತಿದ್ದರು: ತನ್ವೀರ್ ಹಶ್ಮಿ
ಮತದಾರರ ಗುರುತಿನ ಚೀಟಿ ಕಳೆದು ಹೋದರೆ ಏನು ಮಾಡಬೇಕು?
ಯುವಕನ ಲಾಕಪ್ ಡೆತ್ ವಿರೋಧಿಸಿ ಪೊಲೀಸ್ ಠಾಣೆಗೆ ನುಗ್ಗಿದ ಗ್ರಾಮಸ್ಥರು | ಮಹಿಳಾ ಪೇದೆ ಸ್ಥಳದಲ್ಲಿಯೇ ಸಾವು