ನಟ ವಿಜಯ್ ಗೆ ದಂಡ ಆದೇಶಕ್ಕೆ ತಡೆಯಾಜ್ಞೆ ನೀಡಿದ ಮದ್ರಾಸ್ ಹೈಕೋರ್ಟ್ | ಕಾರಣ ಏನು? - Mahanayaka
8:24 AM Thursday 12 - December 2024

ನಟ ವಿಜಯ್ ಗೆ ದಂಡ ಆದೇಶಕ್ಕೆ ತಡೆಯಾಜ್ಞೆ ನೀಡಿದ ಮದ್ರಾಸ್ ಹೈಕೋರ್ಟ್ | ಕಾರಣ ಏನು?

vijay
27/07/2021

ಚೆನ್ನೈ: ಇಳೆಯದಳಪತಿ ವಿಜಯ್ ಅವರ ಐಶಾರಾಮಿ ಕಾರಿಗೆ ಹೆಚ್ಚು ಪ್ರವೇಶ ತೆರಿಗೆ ವಿಧಿಸಲಾಗಿದೆ ಎಂದು ಆರೋಪಿಸಿ ವಿಜಯ್‌ ರಿಟ್‌ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯನ್ನು ವಿಚಾರಣೆಗೊಳಪಡಿಸಿದ್ದ ಏಕ ಸದಸ್ಯ ಪೀಠ ವ್ಯತಿರಿಕ್ತ ಹೇಳಿಕೆ ನೀಡಿ 1 ಲಕ್ಷ ರೂ. ದಂಡ ವಿಧಿಸಿತ್ತು. ಈ ಆದೇಶಕ್ಕೆ ಇದೀಗ ಮದ್ರಾಸ್ ಹೈಕೋರ್ಟ್ ಮಧ್ಯಂತರ ತಡೆ ಆದೇಶ ನೀಡಿದೆ.

 

2012ರಲ್ಲಿ ಇಂಗ್ಲೆಂಡ್‌ನಿಂದ ರೋಲ್ಸ್ ರಾಯ್ಸ್ ಘೋಸ್ಟ್ ಕಾರ್ ಅನ್ನು ಆಮದು ಮಾಡಿಕೊಳ್ಳಲು ವಿಧಿಸಿದ್ದ ಶೇ 80ರಷ್ಟು ಪ್ರವೇಶ ತೆರಿಗೆಯಲ್ಲಿ ಬಾಕಿ ಇರುವ ಮೊತ್ತವನ್ನು ಪಾವತಿಸುವಂತೆ ವಿಜಯ್ ಅವರಿಗೆ ನಿರ್ದೇಶನ ನೀಡಿತು. ಕಾರಿಗೆ ವಿಧಿಸಿರುವ ಪ್ರವೇಶ ತೆರಿಗೆಯಿಂದ ವಿನಾಯಿತಿ ನೀಡಬೇಕೆಂದು ಕೋರಿ ಜುಲೈ 13 ರಂದು, ವಿಜಯ್‌ ರಿಟ್‌ ಅರ್ಜಿ ಸಲ್ಲಿಸಿದ್ದರು. ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಸ್‌.ಎಂ.ಸುಬ್ರಮಣಿಯನ್‌ ಅವರು ಇದ್ದ ಏಕ ಸದಸ್ಯಪೀಠ ಅರ್ಜಿ ವಜಾಗೊಳಿಸಿ, ರೂ. 1 ಲಕ್ಷ ದಂಡವನ್ನೂ ವಿಧಿಸಿತ್ತು. ಆ ದಂಡದ ಮೊತ್ತವನ್ನು ಎರಡು ವಾರಗಳಲ್ಲಿ ಮುಖ್ಯಮಂತ್ರಿಗಳ ಕೋವಿಡ್‌ ಪರಿಹಾರ ನಿಧಿಗೆ ಸಲ್ಲಿಸಬೇಕು ಎಂದು ಆದೇಶಿಸಿತ್ತು.

 

ಏಕ ಸದಸ್ಯ ಪೀಠದ ಆದೇಶಕ್ಕೆ ಅಸಮಾಧಾನ ವ್ಯಕ್ತಪಡಿಸಿದ ನಟ ವಿಜಯ್ ಅವರು, ಪೀಠದ ಈ ವ್ಯತಿರಿಕ್ತ ಹೇಳಿಕೆಯನ್ನು ಪ್ರಶ್ನಿಸಿ, ವಿಭಾಗೀಯ ಪೀಠದಲ್ಲಿ ಮೇಲ್ಮನವಿ ಸಲ್ಲಿಸಿದ್ದರು. ಈ ಮನವಿಯನ್ನು ಪುರಸ್ಕರಿಸಿರುವ ಏಕ ಸದಸ್ಯ ಪೀಠದ ಆದೇಶಕ್ಕೆ ಮದ್ರಾಸ್ ಹೈಕೋರ್ಟ್ ತಡೆಯಾಜ್ಞೆ ನೀಡಿದೆ.

 

ಇನ್ನಷ್ಟು ಸುದ್ದಿಗಳು…

 

ಮತದಾರರ ಗುರುತಿನ ಚೀಟಿ ಕಳೆದು ಹೋದರೆ ಏನು ಮಾಡಬೇಕು?

ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡು ಒಂದೇ ಮನೆಯ 9 ಮಂದಿ ದುರಂತ ಸಾವು!

ನಿದ್ದೆಯಿಂದ ಎಚ್ಚೆತ್ತು ನದಿಯ ಬದಿಗೆ ಹೋದ ಮಗುವಿನ ದುರಂತ ಸಾವು

ಅಶ್ಲೀಲ ಚಿತ್ರ ನಿರ್ಮಾಣ: ಮಧ್ಯಂತರ ಜಾಮೀನು ಕೋರಿದ ಬಾಲಿವುಡ್ ನ ಮತ್ತೋರ್ವಳು ನಟಿ

ಯಡಿಯೂರಪ್ಪ ಕಣ್ಣೀರು ನೋಡಲು ಸಾಧ್ಯವಾಗದೇ ಆತ್ಮಹತ್ಯೆಗೆ ಶರಣಾದ ರಾಜಾಹುಲಿ!

ಇತ್ತೀಚಿನ ಸುದ್ದಿ