ಬಿಗ್ ಬ್ರೇಕಿಂಗ್ ನ್ಯೂಸ್: ಮುಂದಿನ ಮುಖ್ಯಮಂತ್ರಿಯಾಗಿ ಬಸವರಾಜ್ ಬೊಮ್ಮಾಯಿ ಅಧಿಕೃತ ಹೆಸರು ಘೋಷಣೆ
ಬೆಂಗಳೂರು: ರಾಜ್ಯದಲ್ಲಿ ಬಿ.ಎಸ್.ಯಡಿಯೂರಪ್ಪನವರು ತಮ್ಮ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ ಬಳಿಕ ಮುಂದಿನ ಸಿಎಂ ಯಾರು ಎನ್ನುವ ಕುತೂಹಲಕ್ಕೆ ತೆರೆ ಬಿದ್ದಿದ್ದು ಅಂತಿಮವಾಗಿ ಬಸವರಾಜ್ ಬೊಮ್ಮಾಯಿ ಅವರನ್ನು ಮುಖ್ಯಮಂತ್ರಿಯಾಗಿ ಬಿಜೆಪಿ ಘೋಷಿಸಿದೆ.
ಇಂದು ಬೆಂಗಳೂರಿನ ಖಾಸಗಿ ಹೊಟೇಲ್ ನಲ್ಲಿ ನಡೆದ ಶಾಸಕಾಂಗ ಪಕ್ಷದ ಸಭೆಯಲ್ಲಿ ಬಸವರಾಜ್ ಬೊಮ್ಮಾಯಿ ಅವರನ್ನು ಸಿಎಂ ಆಗಿ ಅಧಿಕೃತವಾಗಿ ಘೋಷಿಸಲಾಗಿದ್ದು, ಈ ಮೂಲಕ ಸಿಎಂ ಬದಲಾವಣೆ ಹಾಗೂ ಮುಂದಿನ ಸಿಎಂ ಎಂಬ ಹಲವು ತಿಂಗಳುಗಳ ಚರ್ಚೆಗೆ ಅಂತಿಮವಾಗಿ ತೆರೆ ಬಿದ್ದಿದೆ.
ದೆಹಲಿಯಿಂದ ಆಗಮಿಸಿದ್ದ ವೀಕ್ಷಕರು, ನಿರ್ಗಮಿತ ಸಿಎಂ ಯಡಿಯೂರಪ್ಪನವರನ್ನು ಅವರ ಅಧಿಕೃತ ನಿವಾಸ ಕಾವೇರಿ ಭೇಟಿ ನೀಡಿ ಅಲ್ಲಿಂದ ಸಭೆ ನಡೆಯುತ್ತಿರುವ ಕ್ಯಾಪಿಟಲ್ ಹೊಟೇಲ್ ಗೆ ಕರೆ ತಂದರು. ಕೊನೆಯ ಕ್ಷಣಗಳ ವರೆಗೂ ಯಾರು ಮುಖ್ಯಮಂತ್ರಿಯಾಗಲಿದ್ದಾರೆ ಎನ್ನುವ ಕುತೂಹಲ ಸೃಷ್ಟಿಯಾಗಿತ್ತು.
ಸಭೆಯಲ್ಲಿ 90ಕ್ಕೂ ಹೆಚ್ಚು ಬಿಜೆಪಿ ಶಾಸಕರು ಭಾಗವಹಿಸಿದ್ದರು. ಇನ್ನೂ ನಿರ್ಗಮಿತ ಸಿಎಂ ಬಿ.ಎಸ್.ಯಡಿಯೂರಪ್ಪನವರು ಸಭೆಗೆ ಆಗಮಿಸಿದ ಸಂದರ್ಭದಲ್ಲಿ ವಿಕ್ಟರ್ ಸಿಂಬಲ್ ತೋರಿಸಿ, ಬಲವಂತದ ನಗುವೊಂದನ್ನು ಮಾಧ್ಯಮಗಳಿಗೆ ನೀಡಿದರು.
ಇನ್ನಷ್ಟು ಸುದ್ದಿಗಳು…
ಪತ್ನಿಯ ಜೊತೆಗೆ ದೈಹಿಕ ಸಂಬಂಧ ಹೊಂದಿದ್ದ ಯುವಕನ ಖಾಸಗಿ ಅಂಗಕ್ಕೆ ಗುಂಡು ಹಾರಿಸಿದ ಪತಿ!
ವಿಲನ್ ಗಳಾದರು ಹೈಕಮಾಂಡ್! | ಲಿಂಗಾಯತ ನಾಯಕನನ್ನು ಅವಮಾನಿಸಿ ಕೆಳಗಿಳಿಸಿದ್ಯಾಕೆ?
ಅಶ್ಲೀಲ ಚಿತ್ರ ನಿರ್ಮಾಣ: ಮಧ್ಯಂತರ ಜಾಮೀನು ಕೋರಿದ ಬಾಲಿವುಡ್ ನ ಮತ್ತೋರ್ವಳು ನಟಿ
ತನ್ನ ಸಹಚರರ ಜೊತೆ ಸೇರಿ ಪತ್ನಿಯನ್ನೇ ಮುಗಿಸಿದ ಇನ್ಸ್ ಪೆಕ್ಟರ್!
ಯಡಿಯೂರಪ್ಪ ಕಣ್ಣೀರು ನೋಡಲು ಸಾಧ್ಯವಾಗದೇ ಆತ್ಮಹತ್ಯೆಗೆ ಶರಣಾದ ರಾಜಾಹುಲಿ!