ನಾಳೆಯೇ ಪ್ರಮಾಣ ವಚನ ಸ್ವೀಕರಿಸಲಿರುವ ಬಸವರಾಜ್ ಬೊಮ್ಮಾಯಿ | ಹೇಗೆ ನಡೆಯಿತು ಆಯ್ಕೆ ಪ್ರಕ್ರಿಯೆ? - Mahanayaka
11:50 AM Thursday 12 - December 2024

ನಾಳೆಯೇ ಪ್ರಮಾಣ ವಚನ ಸ್ವೀಕರಿಸಲಿರುವ ಬಸವರಾಜ್ ಬೊಮ್ಮಾಯಿ | ಹೇಗೆ ನಡೆಯಿತು ಆಯ್ಕೆ ಪ್ರಕ್ರಿಯೆ?

basavaraj bommai
27/07/2021

ಬೆಂಗಳೂರು: ಹಲವು ರಾಜಕೀಯ ವಿದ್ಯಮಾನಗಳ ಬಳಿಕ ಇಂದು ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಬಸವರಾಜ್ ಬೊಮ್ಮಾಯಿ ಅವರ ಹೆಸರನ್ನು ಅಧಿಕೃತವಾಗಿ ಘೋಷಿಸಲಾಗಿದ್ದು, ಈ ಮೂಲಕ ಹಲವು ತಿಂಗಳುಗಳಿಂದ ನಡೆಯುತ್ತಿದ್ದ ಮುಖ್ಯಮಂತ್ರಿ ಬದಲಾವಣೆ ಕಸರತ್ತಿಗೆ ಕೊನೆಗೂ ತೆರೆ ಬಿದ್ದಿದೆ.

ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರು ಬಸವರಾಜ್ ಬೊಮ್ಮಾಯಿ ಅವರ ಹೆಸರನ್ನು ಘೋಷಿಸಿದರು. ಈ ವೇಳೆ ಮಾಜಿ ಡಿಸಿಎಂ ಗೋವಿಂದ ಕಾರಜೋಳ ಅವರು ಅನುಮೋದಿಸಿದರು. ಬಸವರಾಜ್ ಅವರ ಹೆಸರನ್ನು ಯಡಿಯೂರಪ್ಪನವರು ಘೋಷಿಸುತ್ತಿದ್ದಂತೆಯೇ ಬಸವರಾಜ್ ಬೊಮ್ಮಾಯಿ ಅವರು ಯಡಿಯೂರಪ್ಪವರ ಕಾಲಿಗೆ ನಮಸ್ಕರಿಸಿದರು.

ಇದೀಗ ಬಂದಿರುವ ಮಾಹಿತಿಯ ಪ್ರಕಾರ ನೂತನ ಸಿಎಂ ಬಸವರಾಜ್ ಬೊಮ್ಮಾಯಿ ನಾಳೆ 3:30ಕ್ಕೆ ಅಧಿಕೃತವಾಗಿ ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಈ ಮೂಲಕ ನಾಳೆಯಿಂದ ಬಸವರಾಜ್ ಬೊಮ್ಮಾಯಿ ಅವರು ಅಧಿಕೃತವಾಗಿ ಸಿಎಂ ಆಗಿ  ಅಧಿಕಾರ ಸ್ವೀಕರಿಸಲಿದ್ದಾರೆ.

ಇನ್ನಷ್ಟು ಸುದ್ದಿಗಳು…

 

ಯಡಿಯೂರಪ್ಪಗೆ ವಯಸ್ಸಾಗಿಲ್ಲ, ಮದುವೆ ಮಾಡಿಸಿದ್ರೆ ಮಕ್ಕಳಾಗ್ತವೆ | ಸಿ.ಎಂ.ಇಬ್ರಾಹಿಂ

ಬಿ.ಎಲ್.ಸಂತೋಷ್ ಗೆ ಸಿಎಂ ಸ್ಥಾನ ಇಲ್ಲ? | ಸಿಎಂ ಸ್ಥಾನ ಕೈತಪ್ಪಲು ಜವಾಬ್ದಾರಿಗಳೇ ಕಾರಣವಾಗುತ್ತಾ?

ಪತ್ನಿಯ ಜೊತೆಗೆ ದೈಹಿಕ ಸಂಬಂಧ ಹೊಂದಿದ್ದ ಯುವಕನ ಖಾಸಗಿ ಅಂಗಕ್ಕೆ ಗುಂಡು ಹಾರಿಸಿದ ಪತಿ!

ಬಸವಣ್ಣಗೆ ಮಾಡಿದ ಅನ್ಯಾಯ ಯಡಿಯೂರಪ್ಪಗೂ ಆಯಿತು | ಕಣ್ಣೀರು ಹಾಕಿಸಿ ಅಧಿಕಾರದಿಂದ ಕೆಳಗಿಳಿಸಲಾಗಿದೆ | ಸತೀಶ್ ಜಾರಕಿಹೊಳಿ

ಇತ್ತೀಚಿನ ಸುದ್ದಿ