ಅಡುಗೆ ಮಾಡುವ ವಿಚಾರದಲ್ಲಿ ಪತಿಯೊಂದಿಗೆ ಜಗಳ: ನವವಿವಾಹಿತ ಮಹಿಳಾ ಪೊಲೀಸ್ ಕಾನ್ಸ್ ಟೇಬಲ್ ಆತ್ಮಹತ್ಯೆ - Mahanayaka
9:37 AM Wednesday 5 - February 2025

ಅಡುಗೆ ಮಾಡುವ ವಿಚಾರದಲ್ಲಿ ಪತಿಯೊಂದಿಗೆ ಜಗಳ: ನವವಿವಾಹಿತ ಮಹಿಳಾ ಪೊಲೀಸ್ ಕಾನ್ಸ್ ಟೇಬಲ್ ಆತ್ಮಹತ್ಯೆ

manjunath nethra
28/07/2021

ಬೆಂಗಳೂರು:  ನವ ವಿವಾಹಿತ ಮಹಿಳಾ ಪೊಲೀಸ್ ಕಾನ್ಸ್ ಟೇಬಲ್ ವೋರ್ವರ್ ನೇಣು ಬಿಗಿದು ಆತ್ಮಹತ್ಯೆಗೆ ಶರಣಾಗಿರುವ ಘಟನ ಬೆಂಗಳೂರು ಉತ್ತರ ತಾಲೂಕಿನ ಚಿಕ್ಕಗೊಲ್ಲರಹಟ್ಟಿಯಲ್ಲಿ ನಡೆದಿದ್ದು, ಪತಿಯೊಂದಿಗಿನ ಮನಸ್ತಾಪದಿಂದ ನೊಂದು ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಹೇಳಲಾಗಿದೆ.

27 ವರ್ಷ ವಯಸ್ಸಿನ ನೇತ್ರಾ ಎಂಬವರು ಆತ್ಮಹತ್ಯೆ ಮಾಡಿಕೊಂಡವರಾಗಿದ್ದು, ತಿಂಗಳ ಹಿಂದೆಯಷ್ಟೇ ಪೀಣ್ಯ ಸಂಚಾರಿ ಠಾಣೆಯಲ್ಲಿ ಕಾನ್ಸ್ ಟೇಬಲ್ ಆಗಿ ಕೆಲಸ ಮಾಡುತ್ತಿದ್ದ ಮಂಜುನಾಥ್ ಎಂಬವರ ಜೊತೆಗೆ ಇವರು ವಿವಾಹವಾಗಿದ್ದರು ಎಂದು ತಿಳಿದು ಬಂದಿದೆ.

ಮಂಜುನಾಥ್ ಮತ್ತು ನೇತ್ರಾ ಇಬ್ಬರು ಕೂಡ ತುಮಕೂರು ಜಿಲ್ಲೆಯವರಾಗಿದ್ದು, ಪರಸ್ಪರ ಪ್ರೀತಿ, ಮನೆಯವರ ಒಪ್ಪಿಗೆ ಪಡೆದುಕೊಂಡೇ ವಿವಾಹವಾಗಿದ್ದರು. ಆದರೆ, ಕೇವಲ ಅಡುಗೆ ಮಾಡುವ ವಿಚಾರಕ್ಕೆ ನಡೆದ ಜಗಳದಿಂದ ನೊಂದು ನೇತ್ರಾ ಅವರು ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಹೇಳಲಾಗಿದೆ.

ಪತಿ ಪತ್ನಿಯ ನಡುವಿನ ಜಗಳ ಆತ್ಮಹತ್ಯೆಗೆ ಕಾರಣವಾಗಿದೆ ಎಂದು ಹೇಳಲಾಗಿದ್ದರೂ, ಇದು ನಿಖರ ಮಾಹಿತಿ ಎಂದು ಇನ್ನೂ ಸ್ಪಷ್ಟವಾಗಿಲ್ಲ. ಘಟನೆ ಸಂಬಂಧ ಸದ್ಯ ಮಾದನಾಯಕನಹಳ್ಳಿ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ನಡೆಸುತ್ತಿದ್ದಾರೆ. ತನಿಖೆಯ ಬಳಿಕ ಸ್ಪಷ್ಟ ಮಾಹಿತಿಯ ದೊರೆಯಬೇಕಿದೆ.

ಇನ್ನಷ್ಟು ಸುದ್ದಿಗಳು…

ಏರ್ಟೆಲ್ ಗ್ರಾಹಕರಿಗೆ ಶಾಕಿಂಗ್ ನ್ಯೂಸ್ | ನಾಳೆಯಿಂದ ಹೊಸ ಬದಲಾವಣೆ

ನಿರ್ಜನ ಪ್ರದೇಶದಲ್ಲಿ ಮಹಿಳೆಯ ಮೇಲೆ ಕಾರಿನಲ್ಲೇ ಅತ್ಯಾಚಾರ | ಬಾಡಿಗೆ ಮನೆ ಮಾಲಿಕನಿಂದ ಕೃತ್ಯ

ಮಗುಚಿ ಬಿದ್ದ ಆಟೋ ರಿಕ್ಷಾ: ವೃದ್ಧ ಸ್ಥಳದಲ್ಲಿಯೇ ಸಾವು, ಇಬ್ಬರ ಸ್ಥಿತಿ ಗಂಭೀರ

ಒಂದೇ ದಿನ ಹೃದಯಾಘಾತಕ್ಕೊಳಗಾಗಿ ಸಾವನ್ನಪ್ಪಿದ ಅಣ್ಣ-ತಂಗಿ!

ಟ್ರಕ್-ಬಸ್ ನಡುವೆ ಭೀಕರ ಅಪಘಾತ: 18 ಮಂದಿ ಸ್ಥಳದಲ್ಲಿಯೇ ಸಾವು

ಹಿಂದುತ್ವದ ಪರವಾಗಿ ಸರ್ಕಾರ ಇರಬೇಕು | ತೀವ್ರ ಮುಖಭಂಗದ ಬಳಿಕ ಯತ್ನಾಳ್ ಹೇಳಿಕೆ

ಇತ್ತೀಚಿನ ಸುದ್ದಿ