ಬಾಲಕಿಗೆ “ಮನೆಯಲ್ಲಿ ಒಬ್ಬನೇ ಇದ್ದೇನೆ ಬರ್ತಿಯಾ” ಎಂದ ಪೊಲೀಸ್ ಕಾನ್ಸ್ ಟೇಬಲ್ ಅರೆಸ್ಟ್ - Mahanayaka
12:28 PM Friday 20 - September 2024

ಬಾಲಕಿಗೆ “ಮನೆಯಲ್ಲಿ ಒಬ್ಬನೇ ಇದ್ದೇನೆ ಬರ್ತಿಯಾ” ಎಂದ ಪೊಲೀಸ್ ಕಾನ್ಸ್ ಟೇಬಲ್ ಅರೆಸ್ಟ್

police arrested
29/07/2021

ಮಂಗಳೂರು: ದೂರು ನೀಡಲು ಬಂದಿದ್ದ ಬಾಲಕಿಗೆ ಕಿರುಕುಳ ನೀಡಿದ ಆರೋಪದಲ್ಲಿ  ಹೆಡ್ ಕಾನ್ ಸ್ಟೇಬಲ್ ವೋರ್ವನನ್ನು ಪೊಲೀಸರು ಬಂಧಿಸಿದ್ದು, ದೂರು ಕೊಡಲು ಬಂದಿದ್ದ ಬಾಲಕಿಯ ನಂಬರ್ ಪಡೆದು ಆಕೆಗೆ ಆಕ್ಷೇಪಾರ್ಹ ಮೆಸೇಜ್ ಮಾಡಿದ್ದಾನೆ ಎಂದು ಆರೋಪಿಸಲಾಗಿದೆ.

ಜನವರಿಯಲ್ಲಿ ಆಟೋ ಚಾಲಕನೋರ್ವ ಕಿರುಕುಳ ನೀಡುತ್ತಿದ್ದಾನೆ ಎಂದು ದೂರು ನೀಡಲು ಬಾಲಕಿ ತನ್ನ ಪೋಷಕರ ಜೊತೆಗೆ ಪೊಲೀಸ್ ಠಾಣೆಗೆ ಆಗಮಿಸಿದ್ದಳು. ಈ ವೇಳೆ ಪೊಲೀಸ್ ಹೆಡ್ ಕಾನ್ಟ್ ಸ್ಟೇಬಲ್ ಬಾಲಕಿಯ ನಂಬರ್ ಪಡೆದುಕೊಂಡಿದ್ದ  ಎಂದು ಹೇಳಲಾಗಿದೆ.

ಇದಾದ ಬಳಿಕ ಬಾಲಕಿಯ ಜೊತೆಗೆ ಮೆಸೆಜ್ ಮಾಡಿದ್ದ ಆರೋಪಿ, ಎಲ್ಲಿದ್ದಿಯಾ? ನಿನ್ನನ್ನು ಭೇಟಿ ಮಾಡಬೇಕು, ಮನೆಯಲ್ಲಿ ಒಬ್ಬನೇ ಇದ್ದೇನೆ ಬರ್ತಿಯಾ ಎಂದು ಮೆಸೇಜ್ ಮಾಡುವ ಮೂಲಕ ಅನುಚಿತವಾಗಿ ವರ್ತಿಸಿದ್ದಾನೆ ಎಂದು ದೂರಿರುವ ಬಾಲಕಿಯ ಪೋಷಕರು ವೆಲ್ಫೇರ್ ಕಮಿಟಿ ಸದಸ್ಯರನ್ನು ಭೇಟಿಯಾಗಿ ಮಹಿಳಾ ಠಾಣೆಯಲ್ಲಿ ದೂರು ನೀಡಿದ್ದಾರೆ.


Provided by

ಇನ್ನೂ ದೂರು ದಾಖಲಾಗುತ್ತಿದ್ದಂತೆಯೇ ಮಹಿಳಾ ಠಾಣಾ ಪೊಲೀಸರು ಆರೋಪಿ ಕಾನ್ಸ್ ಟೇಬಲ್ ನ್ನು ಬಂಧಿಸಿ, ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು,  ದೂರಿಗೆ ಸಂಬಂಧಿಸಿದ ಸಾಕ್ಷ್ಯಾಧಾರಗಳನ್ನು ಪರಿಗಣಿಸಿ ತಕ್ಷಣವೇ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

ಇನ್ನಷ್ಟು ಸುದ್ದಿಗಳು…

ಸೆಕ್ಸ್ ವಿಡಿಯೋ ತಯಾರಿಸುವುದು ಕೂಡ ಒಂದು ಉದ್ಯೋಗ | ಸಲ್ಮಾನ್ ಖಾನ್ ಮಾಜಿ ಪ್ರೇಯಸಿ ಸೋಮಿ ಅಲಿ

ಅಶ್ಲೀಲ ಚಿತ್ರ ವಿಚಾರ: ಶಿಲ್ಪಾ ಶೆಟ್ಟಿ-ರಾಜ್ ಕುಂದ್ರಾ ನಡುವೆ ಅವರ ಮನೆಯಲ್ಲಿಯೇ ಜಟಾಪಟಿ

ನದಿ ಬಿದ್ದ ಬಾಲಕಿಯನ್ನು ರಕ್ಷಿಸಲು ಹೋದ ಅತ್ತೆಯೂ ನೀರುಪಾಲು | ನೀರು ಕುಡಿಯಲು ಹೋದ ವೇಳೆ ನಡೆದದ್ದೇನು?

ನಿರ್ಜನ ಪ್ರದೇಶದಲ್ಲಿ ಮಹಿಳೆಯ ಮೇಲೆ ಕಾರಿನಲ್ಲೇ ಅತ್ಯಾಚಾರ | ಬಾಡಿಗೆ ಮನೆ ಮಾಲಿಕನಿಂದ ಕೃತ್ಯ

ಇತ್ತೀಚಿನ ಸುದ್ದಿ