ಸಿದ್ದರಾಮಯ್ಯನವರೇ, ನಿಮ್ಮ ಪುತ್ರ ರಾಕೇಶ್ ಕುಡಿದ ಮತ್ತಿನಲ್ಲಿ ಹಿರಿಯರ ಮೇಲೆ ದೌರ್ಜನ್ಯ ಎಸಗಿದ ಬಗ್ಗೆ ಸುದ್ದಿಯಾಗಿತ್ತು | ಬಿಜೆಪಿ ಟ್ವೀಟ್
ಬೆಂಗಳೂರು: ಬಸವರಾಜ್ ಬೊಮ್ಮಾಯಿ ಅವರಿಗೆ ತಮ್ಮ ತಂದೆಯ ಗುಣವೇ ಬರುತ್ತದೆ ಎಂದು ಹೇಳಲು ಸಾಧ್ಯವಿಲ್ಲ, ತಂದೆಯಂತೆ ಮಕ್ಕಳಿರುತ್ತಾರೆ ಎಂದು ಹೇಳಲು ಸಾಧ್ಯವಿಲ್ಲ ಎಂದು ನಿನ್ನೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿಕೆ ನೀಡಿದ್ದರು. ಇದಕ್ಕೆ ಇಂದು ಬಿಜೆಪಿಯ ಅಧಿಕೃತ ಟ್ಟಿಟ್ಟರ್ ನಲ್ಲಿ ಅತ್ಯಂತ ನಿಕೃಷ್ಟ ಪದಗಳಿಂದ ಪ್ರತಿಕ್ರಿಯಿಸಲಾಗಿದೆ.
ಸಿದ್ದರಾಮಯ್ಯನವರೇ, ನಿಮ್ಮ ಹಿರಿಯ ಪುತ್ರ ರಾಕೇಶ್ ವಿಪರೀತ ಕುಡಿಯುವ ಅಭ್ಯಾಸ ಹೊಂದಿದ್ದರೆಂದು ಮಾಧ್ಯಮಗಳಲ್ಲಿ ವರದಿಯಾಗಿತ್ತು. ಕುಡಿದ ಮತ್ತಿನಲ್ಲಿ ಹಿರಿಯರ ಮೇಲೂ ದೌರ್ಜನ್ಯ ಎಸಗಿದ ಬಗ್ಗೆ ಸುದ್ದಿಯಾಗಿತ್ತು. ಇದೆಲ್ಲ ಅಪ್ಪನ ಗುಣ ಎಂದು ಸಾಮಾನ್ಯೀಕರಿಸಲು ಸಾಧ್ಯವೇ? ಎಂದು ಸಿದ್ದರಾಮಯ್ಯನವರ ಪುತ್ರನ ಸಾವನ್ನು ಈ ವಿಚಾರಕ್ಕೆ ಎಳೆದು ತರಲಾಗಿದೆ.
ಪ್ರಾಮಾಣಿಕವಾಗಿ ಹೇಳಿ ಸಿದ್ದರಾಮಯ್ಯನವರೇ, ನಿಮ್ಮ ಪುತ್ರ, ಡಾ. ಯತೀಂದ್ರ ಅವರಿಗೆ ನಿಮ್ಮ ಗುಣ ಎಷ್ಟು ಬಂದಿದೆ? ಸಾಮಾನ್ಯವಾಗಿ ತಂದೆಯಿಂದ ಮಗನಿಗೆ ವಂಶವಾಹಿನಿ ರೂಪದಲ್ಲಿ ಬರುವುದು ಕಾಯಿಲೆ ಮಾತ್ರ. ಸಂಸ್ಕಾರ, ಗುಣ, ಸಾಮರ್ಥ್ಯ ಅವರವರ ಗಳಿಕೆ ಎಂಬುದನ್ನು ಅರ್ಥೈಸಿಕೊಳ್ಳಿ ಎಂದು ಬಿಜೆಪಿ ಟ್ವೀಟ್ ಮಾಡಿದೆ.
ಬಿಜೆಪಿ ಸಿದ್ದರಾಮಯ್ಯನವರ ಪುತ್ರ ರಾಕೇಶ್ ಸಾವನ್ನು ಪ್ರಸ್ತಾಪಿಸಿ ಟ್ವೀಟ್ ಮಾಡಿರುವುದಕ್ಕೆ ಕೆಲವರು ವಿರೋಧ ವ್ಯಕ್ತಪಡಿಸಿದ್ದಾರೆ. ಒಂದು ರಾಷ್ಟ್ರೀಯ ಪಕ್ಷದ ಟ್ವಿಟ್ಟರ್ ನಲ್ಲಿ ಇಂತಹ ಘನತೆ ಇಲ್ಲದ ಟ್ವೀಟ್ ಮಾಡಬಾರದು ಎಂದು ಬಿಜೆಪಿಯ ಈ ಟ್ವೀಟ್ ಗೆ ಪ್ರತಿಕ್ರಿಯೆಗಳು ಕಂಡು ಬಂದಿದೆ.
ಒಂದು ರಾಷ್ಟ್ರಿಯ ಪಕ್ಷ ಘನತೆಯಿಲ್ಲದ ಟ್ವೀಟ್ ಮಾಡಬಾರದು.
— sivanappa krishnappa (@SivanappaK) July 29, 2021
ಇನ್ನಷ್ಟು ಸುದ್ದಿಗಳು…
ನದಿ ಬಿದ್ದ ಬಾಲಕಿಯನ್ನು ರಕ್ಷಿಸಲು ಹೋದ ಅತ್ತೆಯೂ ನೀರುಪಾಲು | ನೀರು ಕುಡಿಯಲು ಹೋದ ವೇಳೆ ನಡೆದದ್ದೇನು?
ಮುಂದಿನ ಟಾರ್ಗೆಟ್ ಈಶ್ವರಪ್ಪ, ಜಗದೀಶ್ ಶೆಟ್ಟರ್? | ಯಡಿಯೂರಪ್ಪರ ಬಳಿಕ ನಿವೃತ್ತರಾಗುತ್ತಾರಾ ಹಿರಿಯ ನಾಯಕರು?
ಸೆಕ್ಸ್ ವಿಡಿಯೋ ತಯಾರಿಸುವುದು ಕೂಡ ಒಂದು ಉದ್ಯೋಗ | ಸಲ್ಮಾನ್ ಖಾನ್ ಮಾಜಿ ಪ್ರೇಯಸಿ ಸೋಮಿ ಅಲಿ
ಬಾಲಕಿಗೆ “ಮನೆಯಲ್ಲಿ ಒಬ್ಬನೇ ಇದ್ದೇನೆ ಬರ್ತಿಯಾ” ಎಂದ ಪೊಲೀಸ್ ಕಾನ್ಸ್ ಟೇಬಲ್ ಅರೆಸ್ಟ್