ವಿಚ್ಛೇದನದ ಬಳಿಕ ಜೊತೆಯಾಗಿ ಒಂದೇ ಮನೆಯಲ್ಲಿ ವಾಸಿಸುತ್ತಿದ್ದ ಸಹೋದರಿಯರ ಬರ್ಬರ ಹತ್ಯೆ!
ದಾವಣಗೆರೆ: ಸಹೋದರಿಯರಿಬ್ಬರ ಜೋಡಿ ಕೊಲೆ ನಡೆದ ಘಟನೆ ಇಲ್ಲಿನ ಆಂಜನೇಯ ಕಾಟನ್ ಮಿಲ್ ಬಡಾವಣೆಯಲ್ಲಿ ನಡೆದಿದ್ದು, ಮೃತ ಸಹೋದರಿಯರಿಬ್ಬರೂ ವಿವಾಹಿತರಾಗಿದ್ದು, ವಿವಾಹ ವಿಚ್ಛೇದನದ ಬಳಿಕ ಒಂದೇ ಮನೆಯಲ್ಲಿ ವಾಸಿಸುತ್ತಿದ್ದರು ಎಂದು ಹೇಳಲಾಗಿದೆ.
ವಿಚ್ಛೇದನದ ಬಳಿಕ ಸ್ಥಳೀಯವಾಗಿ ಕೂಲಿ ಕೆಲಸ ಮಾಡುತ್ತಾ ಜೀವನ ನಿರ್ವಹಣೆ ಮಾಡುತ್ತಿದ್ದರು ಎಂದು ಹೇಳಲಾಗಿದೆ. ಕಳೆದ ಎರಡು-ಮೂರು ದಿನಗಳಿಂದ ಕೆಲಸಕ್ಕೆ ಬಂದಿಲ್ಲವಾದುದರಿಂದ ಸ್ಥಳೀಯರಾದ ಚಂದ್ರಮ್ಮ ಎಂಬವರು ಕರೆ ಮಾಡಿದ್ದು, ಆದರೆ ಕರೆಯನ್ನು ಯಾರೂ ಸ್ವೀಕರಿಸಿರಲಿಲ್ಲ ಎಂದು ಹೇಳಲಾಗಿದೆ.
ಹೀಗಾಗಿ ಅನುಮಾನಗೊಂಡ ಅವರು, ಮನೆಯ ಬಳಿ ಹೋಗಿದ್ದು, ಮನೆಯೊಳಗಿನಿಂದ ಕೆಟ್ಟವಾಸನೆ ಬಂದಾಗ ಅನುಮಾನಗೊಂಡು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಘಟನಾ ಸ್ಥಳಕ್ಕೆ ಪೊಲೀಸರು ಆಗಮಿಸಿದ ವೇಳೆ ಇಬ್ಬರು ಸಹೋದರಿಯರು ಹತ್ಯೆಗೀಡಾಗಿರುವುದು ಬೆಳಕಿಗೆ ಬಂದಿದೆ. ಘಟನೆ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದು, ಆರೋಪಿಗಳ ಬಂಧನಕ್ಕೆ ಬಲೆ ಬೀಸಿದ್ದಾರೆ.
ಇನ್ನಷ್ಟು ಸುದ್ದಿಗಳು…
ನಡು ರಸ್ತೆಯಲ್ಲಿಯೇ ತಂಗಿಗೆ ಚಾಕುವಿನಿಂದ ಇರಿದು ಕೊಂದ ಅಣ್ಣಂದಿರು!
ಶಿಲ್ಪಾ ಶೆಟ್ಟಿ ಪತಿ ರಾಜ್ ಕುಂದ್ರಾನಿಂದ ನಟಿ ಶೆರ್ಲಿನ್ ಚೋಪ್ರಾಗೆ ಲೈಂಗಿಕ ಕಿರುಕುಳ!
ಮುಂದಿನ ಟಾರ್ಗೆಟ್ ಈಶ್ವರಪ್ಪ, ಜಗದೀಶ್ ಶೆಟ್ಟರ್? | ಯಡಿಯೂರಪ್ಪರ ಬಳಿಕ ನಿವೃತ್ತರಾಗುತ್ತಾರಾ ಹಿರಿಯ ನಾಯಕರು?
ಅಡುಗೆ ಮಾಡುವ ವಿಚಾರದಲ್ಲಿ ಪತಿಯೊಂದಿಗೆ ಜಗಳ: ನವವಿವಾಹಿತ ಮಹಿಳಾ ಪೊಲೀಸ್ ಕಾನ್ಸ್ ಟೇಬಲ್ ಆತ್ಮಹತ್ಯೆ
ಹಿಂದುತ್ವದ ಪರವಾಗಿ ಸರ್ಕಾರ ಇರಬೇಕು | ತೀವ್ರ ಮುಖಭಂಗದ ಬಳಿಕ ಯತ್ನಾಳ್ ಹೇಳಿಕೆ