ಬಿಜೆಪಿಗೆ ಅಧಿಕಾರ ಮಾತ್ರ ಬೇಕು, ಜನರ ಯೋಗ ಕ್ಷೇಮ ಬೇಡ | ಸತೀಶ್ ಜಾರಕಿಹೊಳಿ
ಬೆಳಗಾವಿ: ಕಳೆದ ಬಾರಿ ಆಗಿರುವ ನೆರೆ ಪರಿಹಾರವೇ ಜನರಿಗೆ ಸಿಕ್ಕಿಲ್ಲ. ಸರ್ಕಾರದ ಆಂತರಿಕ ಕಿತ್ತಾಟದಲ್ಲಿ ಜನರು ಬಲಿಪಶುಗಳಾಗುತ್ತಿದ್ದಾರೆ. ಅವರಿಗೆ ಅಧಿಕಾರ ಬೇಕಾಗಿದೆಯೇ ಹೊರತು, ಜನರ ಯೋಗಕ್ಷೇಮ ಬೇಡ ಎಂದು ರಾಜ್ಯ ಸರ್ಕಾರದ ವಿರುದ್ಧ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಗೊಳಿ ವಾಗ್ದಾಳಿ ನಡೆಸಿದರು.
ನಗರದಲ್ಲಿಂದು ಮಹಿಳಾ ಕಾಂಗ್ರೆಸ್ ಸಮಾರಂಭದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನೆರೆ ಹಾನಿಯ ಬಗ್ಗೆ ಅಧ್ಯಯನ ಮಾಡುತ್ತಿದ್ದೇವೆ. ಸಿ.ಎಲ್.ಪಿ. ಟೀಮ್ ನಿಂದ ಈಗಾಗಲೇ ಎಲ್ಲೆಲ್ಲಿ ಹಾನಿಯಾಗಿದೆಯೋ ಅಲ್ಲಿ ಪರಿಹಾರ ನೀಡುವಂತೆ ಜಿಲ್ಲಾಡಳಿತದ ಗಮನಕ್ಕೆ ತರಲಾಗುತ್ತದೆ ಎಂದು ಅವರು ಹೇಳಿದರು.
ಚುನಾವಣೆಗೆ ಇನ್ನೂ ಅಭ್ಯರ್ಥಿಗಳನ್ನು ನಾವು ಇನ್ನೂ ನಿಶ್ಚಯ ಮಾಡಿಲ್ಲ. ಕಾಂಗ್ರೆಸ್ ಬೇರೆ, ಜೆಡಿಎಸ್ ಬೇರೆ. ನಮ್ಮ ಕಾರ್ಯವೈಖರಿಯೇ ಭಿನ್ನವಾಗಿದೆ. ಬಿಜೆಪಿಯವರು ಸುಮಾರು 2 ವರ್ಷಗಳಿಂದ ಕಿತ್ತಾಟ ನಡೆಸುತ್ತಿದ್ದಾರೆ. ಅವರಿಗೆ ಅಧಿಕಾರ ಬೇಕೇ ಹೊರತು ಜನರ ಯೋಗ ಕ್ಷೇಮ ಬೇಕಿಲ್ಲ ಎಂದು ಅವರು ಹೇಳಿದರು.
ಇನ್ನಷ್ಟು ಸುದ್ದಿಗಳು…
ಕೋಣೆಗೆ ನುಗ್ಗಿದ ಪ್ರಿಯಕರ, ಪ್ರೇಯಸಿಗೆ ಗುಂಡು ಹಾರಿಸಿ ತಾನೂ ಆತ್ಮಹತ್ಯೆ ಮಾಡಿಕೊಂಡ!
ಹೊನ್ನಾಳಿ ಶಾಸಕ ಎಂ.ಪಿ.ರೇಣುಕಾಚಾರ್ಯಗೆ ಸಿಡಿ ಭೀತಿ!
ಆನ್ ಲೈನ್ ಗೇಮ್ ನಲ್ಲಿ ಹಣ ಕಳೆದುಕೊಂಡ ಬಾಲಕ ಆತ್ಮಹತ್ಯೆಗೆ ಶರಣು
ಕರ್ನಾಟಕ ಸರ್ಕಾರದ ವಿರುದ್ಧ ತಮಿಳುನಾಡು ಬಿಜೆಪಿ ಅಧ್ಯಕ್ಷ ಕೆ.ಅಣ್ಣಾಮಲೈ ಉಪವಾಸ ಸತ್ಯಾಗ್ರಹ!
ನಡು ರಸ್ತೆಯಲ್ಲಿಯೇ ತಂಗಿಗೆ ಚಾಕುವಿನಿಂದ ಇರಿದು ಕೊಂದ ಅಣ್ಣಂದಿರು!
ನ್ಯಾಯಾಧೀಶರನ್ನು ರಸ್ತೆಯಲ್ಲಿಯೇ ಭೀಕರ ಹತ್ಯೆ: ಸಿಸಿ ಕ್ಯಾಮರದಲ್ಲಿ ಸೆರೆಯಾಯ್ತು ಭಯಾನಕ ದೃಶ್ಯ
ಹಿಂದುತ್ವದ ಪರವಾಗಿ ಸರ್ಕಾರ ಇರಬೇಕು | ತೀವ್ರ ಮುಖಭಂಗದ ಬಳಿಕ ಯತ್ನಾಳ್ ಹೇಳಿಕೆ