ಭಗತ್ ಸಿಂಗ್ ನಾಟಕದ ದೃಶ್ಯ ಅಭ್ಯಾಸ ಮಾಡುತ್ತಿದ್ದ ಬಾಲಕ ನೇಣಿನಲ್ಲಿ ಸಿಕ್ಕಿ ಹಾಕಿಕೊಂಡು ಸಾವು!
ಬದೌನ್: ಸ್ವಾತಂತ್ರ್ಯ ದಿನಾಚರಣೆಗಾಗಿ ನಾಟಕ ಅಭ್ಯಾಸ ನಡೆಸುತ್ತಿದ್ದ ವೇಳೆ ಬಾಲಕನೋರ್ವ ನೇಣಿಗೆ ಸಿಲುಕಿ ಸಾವನ್ನಪ್ಪಿರುವ ಆಘಾತಕಾರ ಘಟನೆಯೊಂದು ಉತ್ತರ ಪ್ರದೇಶದ ಬಾಬತ್ ಗ್ರಾಮದಲ್ಲಿ ನಡೆದಿದ್ದು, ಸ್ಥಳೀಯರು ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ ಬಳಿಕ ಘಟನೆ ಬೆಳಕಿಗೆ ಬಂದಿದೆ.
ಜಿಲ್ಲೆಯ ಕುನರ್ ಗಾಂವ್ ಪೊಲೀಸ್ ಠಾಣೆ ವ್ಯಾಪ್ತಿಯ ಬಾಬತ್ ಗ್ರಾಮದ ನಿವಾಸಿ ಬೋರೆಸಿಂಗ್ ಅವರ 10 ವರ್ಷ ವಯಸ್ಸಿನ ಶಿವಂ ಮೃತಪಟ್ಟ ಬಾಲಕನಾಗಿದ್ದು, ಈತ ಇತರ ಮಕ್ಕಳೊಂದಿಗೆ ನಾಟಕ ಅಭ್ಯಾಸ ಮಾಡುತ್ತಿದ್ದ ವೇಳೆ ಈ ದುರಂತ ನಡೆದಿದೆ ಎಂದು ಹೇಳಲಾಗಿದೆ.
ನಾಟಕದಲ್ಲಿ ಭಗತ್ ಸಿಂಗ್ ನ್ನು ಗಲ್ಲಿಗೇರಿಸುವ ದೃಶ್ಯ ಅಭ್ಯಾಸ ಮಾಡುತ್ತಿದ್ದ ವೇಳೆ ಶಿವಂನ ಕುತ್ತಿಗೆಗೆ ಹಗ್ಗದ ಕುಣಿಕೆ ಹಾಕಿಕೊಂಡಿದ್ದು, ಈ ವೇಳೆ ಆತ ನಿಂತಿದ್ದ ಸ್ಟೂಲ್ ಜಾರಿ ಕೆಳಗೆ ಬಿದ್ದಿದ್ದಾನೆ ಎಂದು ತಿಳಿದು ಬಂದಿದೆ. ಈ ವೇಳೆ ಇತರ ಮಕ್ಕಳು ಗಾಬರಿಯಿಂದ ಸಹಾಯಕ್ಕಾಗಿ ಕಿರುಚಿಕೊಂಡಿದ್ದಾರೆ. ಈ ವೇಳೆ ಸ್ಥಳೀಯ ನಿವಾಸಿಗಳು ತಕ್ಷಣವೇ ಬಂದು ಕುಣಿಕೆಯನ್ನು ಕತ್ತರಿಸಿ ಕೆಳಗಿಳಿಸಿದ್ದಾರೆ. ಆದರೆ ಶಿವಂ ಅದಾಗಲೇ ಮೃತಪಟ್ಟಿದ್ದ ಎಂದು ತಿಳಿದು ಬಂದಿದೆ.
ಇನ್ನೂ ಈ ದುರಂತ ಸಾವು ನಡೆದ ಬಳಿಕ ಶಿವಂನ ಪೋಷಕರು ಪೊಲೀಸರಿಗೆ ಯಾವುದೇ ಮಾಹಿತಿಯನ್ನು ನೀಡದೇ ಅಂತ್ಯಸಂಸ್ಕಾರ ನೆರವೇರಿಸಿದ್ದಾರೆನ್ನಲಾಗಿದೆ. ಆದರೆ ಮಾಹಿತಿ ತಿಳಿದು ಪೊಲೀಸರು ಕುನ್ ರ ಗಾಂವ್ ಪೊಲೀಸ್ ಠಾಣೆಯ ಎಸ್ ಎಚ್ ಒ ನೇತೃತ್ವದಲ್ಲಿ ಶುಕ್ರವಾರ ಗ್ರಾಮಕ್ಕೆ ಭೇಟಿ ನೀಡಿದೆ. ಆದರೆ, ಬಾಲಕ ಹೇಗೆ ಸಾವಿಗೀಡಾಗಿದ್ದಾನೆ ಎನ್ನುವ ಮಾಹಿತಿಯನ್ನು ನೀಡಲು ಕುಟುಂಬಸ್ಥರು ನಿರಾಕರಿಸಿದ್ದಾರೆ ಎಂದು ಎಸ್ ಎಸ್ ಪಿ ಬದೌನ್, ಸಂಕಲ್ಪ್ ಶರ್ಮಾ ತಿಳಿಸಿದ್ದು, ಪ್ರಕರಣದ ತನಿಖೆ ನಡೆಸುತ್ತಿದ್ದಾರೆ.
ಇನ್ನಷ್ಟು ಸುದ್ದಿಗಳು…
ರಸ್ತೆಯಲ್ಲಿ ಅಡ್ಡನಿಂತು ಮಹಿಳೆಯರಿಗೆ ಲೈಂಗಿಕ ಕಿರುಕುಳ ನೀಡಲು ಯತ್ನಿಸಿದ ವ್ಯಕ್ತಿಗೆ ಧರ್ಮದೇಟು!
ಕುರಿ, ಕೋಳಿ, ಮೀನಿನ ಬದಲು ಗೋಮಾಂಸ ಸೇವಿಸಿ ಎಂದು ಕರೆ ನೀಡಿದ ಬಿಜೆಪಿ ಸಚಿವ!
ಕೋಣೆಗೆ ನುಗ್ಗಿದ ಪ್ರಿಯಕರ, ಪ್ರೇಯಸಿಗೆ ಗುಂಡು ಹಾರಿಸಿ ತಾನೂ ಆತ್ಮಹತ್ಯೆ ಮಾಡಿಕೊಂಡ!
ಹೊನ್ನಾಳಿ ಶಾಸಕ ಎಂ.ಪಿ.ರೇಣುಕಾಚಾರ್ಯಗೆ ಸಿಡಿ ಭೀತಿ!
46.1 ಲಕ್ಷ ಮೊಬೈಲ್ ಬಳಕೆದಾರರನ್ನು ಕಳೆದುಕೊಂಡ ಏರ್ ಟೆಲ್!
ಶಿಲ್ಪಾ ಶೆಟ್ಟಿ ಪತಿ ರಾಜ್ ಕುಂದ್ರಾನಿಂದ ನಟಿ ಶೆರ್ಲಿನ್ ಚೋಪ್ರಾಗೆ ಲೈಂಗಿಕ ಕಿರುಕುಳ!