ಚಲನ ಚಿತ್ರನಟ ಹಿರಿಯ ನಿಧನ | ಗಣ್ಯರಿಂದ ಸಂತಾಪ
03/11/2020
ಬೆಂಗಳೂರು: ಕನ್ನಡ ರಂಗಭೂಮಿ, ಕಿರುತೆರೆ ಹಾಗೂ ಚಲನ ಚಿತ್ರರಂಗದ ಹಿರಿಯನಟ ಹೆಚ್.ಜಿ.ಸೋಮಶೇಖರ್(86) ಇಂದು ನಿಧನರಾಗಿದ್ದು, ಇವರ ನಿಧನಕ್ಕೆ ಗಣ್ಯರು ಸಂತಾಪ ಸೂಚಿಸಿದ್ದಾರೆ.
ವೃತ್ತಿಯಲ್ಲಿ ಬ್ಯಾಂಕ್ ಅಧಿಕಾರಿಯಾಗಿದ್ದ ಎಚ್.ಜಿ.ಸೋಮಶೇಖರ ಅವರು, ಸಾಹಿತ್ಯ, ರಂಗಭೂಮಿ, ಚಲನ ಚಿತ್ರ, ಕಿರುತೆರೆಗಳಲ್ಲಿ ವಿಶೇಷ ಆಸಕ್ತಿಯಿತ್ತು. 1981ರಲ್ಲಿ ಟಿಎಸ್ ರಂಗಾರವರ ನಿರ್ದೇಶನದ ಸಾವಿತ್ರಿ ಚಿತ್ರದ ಮೂಲಕ ಇವರು ಚಿತ್ರರಂಗಕ್ಕೆ ಪ್ರವೇಶಿಸಿದ್ದರು.
ಇವರ ಅಭಿನಯಕ್ಕಾಗಿ 1992 -93ನೇ ಸಾಲಿನ ರಾಜ್ಯ ಸರ್ಕಾರದ ಅತ್ಯುತ್ತಮ ಪೋಷಕ ನಟ ಪ್ರಶಸ್ತಿ ಲಭಿಸಿತು. ಚಲನ ಚಿತ್ರಕ್ಕಿಂತಲೂ ಇವರು ರಂಗಭೂಮಿಯನ್ನು ಹೆಚ್ಚು ಪ್ರೀತಿಸಿದ್ದರು.
ಮಹಾನಾಯಕ ಮಾಧ್ಯಮದ ಎಲ್ಲ ಸುದ್ದಿಗಳಿಗಾಗಿ ನಮ್ಮ ಗ್ರೂಪ್ ಗಳಿಗೆ ಜಾಯಿನ್ ಆಗಿ