ಪಾಕಿಸ್ತಾನದಲ್ಲಿ ಹಿಂದೂ ದೇವಸ್ಥಾನ ಧ್ವಂಸ: ಪೊಲೀಸರಿಗೆ ಛೀಮಾರಿ ಹಾಕಿದ ಸುಪ್ರೀಂ ಕೋರ್ಟ್ - Mahanayaka
10:12 PM Thursday 19 - September 2024

ಪಾಕಿಸ್ತಾನದಲ್ಲಿ ಹಿಂದೂ ದೇವಸ್ಥಾನ ಧ್ವಂಸ: ಪೊಲೀಸರಿಗೆ ಛೀಮಾರಿ ಹಾಕಿದ ಸುಪ್ರೀಂ ಕೋರ್ಟ್

hindu temple in pakistan news
07/08/2021

ಲಾಹೋರ್: ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ಭೋಂಗ್ ಪ್ರದೇಶದಲ್ಲಿದ್ದ ಸಿದ್ಧಿವಿನಾಯಕ ದೇವಸ್ಥಾನ ಧ್ವಂಸ ಪ್ರಕರಣಕ್ಕೆ ಸಂಬಂಧಿಸಿದಂತೆ 20 ಮಂದಿಯನ್ನು  ಪಾಕ್ ಪೊಲೀಸರು ಬಂಧಿಸಿದ್ದು,  150ಕ್ಕೂ ಅಧಿಕ ಮುಸ್ಲಿಮರ ವಿರುದ್ಧ ದೂರು ದಾಖಲಿಸಲಾಗಿದೆ.

ಕಳೆದ ಐದು, ಆರು ದಿನಗಳ ಹಿಂದೆ ದೇವಾಲಯಕ್ಕೆ ದಾಳಿ ನಡೆಸಿದ್ದ ಮುಸ್ಲಿಮ್ ಗುಂಪೊಂದು ಹಿಂದೂ ದೇವಸ್ಥಾನಕ್ಕೆ ದಾಳಿ ನಡೆಸಿದ್ದು, ವಿಗ್ರಹವನ್ನು ಸುಟ್ಟು ಹಾಕಿತ್ತು. ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋವೊಂದು ವೈರಲ್ ಆಗಿತ್ತು.

ದಾಳಿಗೊಳಗಾದ ಸಿದ್ಧಿವಿನಾಯಕ ದೇವಸ್ಥಾನಕ್ಕಿಂತ 590 ಕಿ.ಮೀ. ದೂರದಲ್ಲಿರುವ ಯಾರ್ ಖಾನ್ ಜಿಲ್ಲೆಯ ಭೋಂಗ್ ಎಂಬ ಊರಿನಲ್ಲಿ  ಮುಸ್ಲಿಮರ ಸೆಮಿನರಿಯಲ್ಲಿ 8 ವರ್ಷ ವಯಸ್ಸಿನ ಬಾಲಕನೋರ್ವ ಮೂತ್ರ ವಿಸರ್ಜನೆ ಮಾಡಿದ್ದ. ಆತನನ್ನು ಬಂಧಿಸಿದ್ದ ಪೊಲೀಸರು ಬಳಿಕ ಪುಟ್ಟ ಬಾಲಕ ತಿಳಿಯದೇ ಈ ಕೆಲಸ ಮಾಡಿದ್ದಾನೆ ಎಂದು ಬಿಡುಗಡೆ ಮಾಡಿದ್ದರು. ಆತನನ್ನು ಬಿಡುಗಡೆ ಮಾಡಿದ್ದನ್ನು ವಿರೋಧಿಸಿ ಸಿದ್ದವಿನಾಯಕ ದೇವಸ್ಥಾನದ ಮೇಲೆ ದುಷ್ಕರ್ಮಿಗಳು ದಾಳಿ ನಡೆಸಿದ್ದರು ಎಂದು ಹೇಳಲಾಗಿದೆ.


Provided by

ಇನ್ನೂ ಘಟನೆಗೆ ಸಂಬಂಧಿಸಿದಂತೆ ಪಾಕಿಸ್ತಾನದ ಸುಪ್ರೀಂ ಕೋರ್ಟ್ ಪಾಕಿಸ್ತಾನ ಪೊಲೀಸರಿಗೆ ಛೀಮಾರಿ ಹಾಕಿದ್ದು,  ಹಿಂದೂ ದೇವಸ್ಥಾನವನ್ನು ನಾಶ ಮಾಡಿರುವುದು ಪಾಕಿಸ್ತಾನಕ್ಕೆ ನಾಚಿಕೆ ತರುವ ವಿಚಾರವಾಗಿದೆ ಎಂದು ಹೇಳಿದೆ. ಘಟನೆ ನಡೆಯುವ ವೇಳೆ ಪೊಲೀಸರು ಮೂಕ ಪ್ರೇಕ್ಷಕರಾಗಿ ನಿಂತು ನೀಡಿರುವುದು ಇನ್ನಷ್ಟು ಹೀನ ಕೃತ್ಯವಾಗಿದೆ ಎಂದು ಪೊಲೀಸರಿಗೆ ನ್ಯಾಯಾಲಯ ಛೀಮಾರಿ ಹಾಕಿದೆ.

ಇನ್ನೂ ಹಿಂದೂ ದೇವಸ್ಥಾನವನ್ನು ನಾಶ ಮಾಡಿರುವ ವಿಚಾರ ಪಾಕಿಸ್ತಾನ ಪಾರ್ಲಿಮೆಂಟ್ ನಲ್ಲಿಯೂ ಸದ್ದು ಮಾಡಿದ್ದು, ದೇಗುಲದ ಮೇಲಿನ ದಾಳಿಯನ್ನು ಖಂಡಿಸಿದೆ. ಇದರ ಜೊತೆಗೆ ಪಾಕಿಸ್ತಾನ ಪ್ರಜೆಗಳಾದ ಹಿಂದೂಗಳ ರಕ್ಷಣೆಗೆ ಸರ್ಕಾರ ಮುಂದಾಗಬೇಕು ಎಂದು ಆಗ್ರಹಿಸಿದೆ. ಅಂದ ಹಾಗೆ ಪಾಕಿಸ್ತಾನದಲ್ಲಿ 75 ಲಕ್ಷ ಹಿಂದೂಗಳು ವಾಸಿಸುತ್ತಿದ್ದಾರೆ.

ಇನ್ನಷ್ಟು ಸುದ್ದಿಗಳು…

ಮತ್ತೋರ್ವ ನೂತನ ಸಚಿವಗೆ ಅತೃಪ್ತಿ: ಖಾತೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಎಂಟಿಬಿ ನಾಗರಾಜ್

ಕೊರೊನಾ ಸಂದರ್ಭದಲ್ಲಿ ಭಾರತ ಸರ್ಕಾರವು ಬಡವರಿಗೆ ಹೆಚ್ಚಿನ ಆದ್ಯತೆ ನೀಡಿದೆ | ಪ್ರಧಾನಿ ಮೋದಿ

3ನೇ ಅಲೆಗೆ ಸೆಡ್ಡು ಹೊಡೆಯಲು ಸಿಂಗಲ್ ಡೋಸ್ ಲಸಿಕೆಗೆ ಗ್ರೀನ್ ಸಿಗ್ನಲ್ ನೀಡಿದ ಕೇಂದ್ರ ಸರ್ಕಾರ

ಕೇಳಿದ ಖಾತೆ ಸಿಗಲಿಲ್ಲ ಎಂದಾದರೆ, ರಾಜೀನಾಮೆ ನೀಡಬೇಕಾಗುತ್ತದೆ | ಆನಂದ್ ಸಿಂಗ್

ಕಾಂಗ್ರೆಸ್ ನಲ್ಲಿ ಹಳ್ಳಿಯಿಂದ ಡೆಲ್ಲಿವರೆಗೆ ಬರೇ ಲೀಡರ್ ಗಳೇ ತುಂಬಿದ್ದಾರೆ | ಬಿಜೆಪಿ ಕಾರ್ಯಕರ್ತರನ್ನು ಹೊಗಳಿದ ಸಿಎಂ ಬೊಮ್ಮಾಯಿ

ತ್ರಿಪುರ ಸಿಎಂ ವಿಪ್ಲವ್ ಕುಮಾರ್ ದೇವ್ ಮೇಲೆ ಕಾರು ಹರಿಸಿ ಹತ್ಯೆಗೆ ಯತ್ನ: ಮೂವರ ಬಂಧನ

ಇತ್ತೀಚಿನ ಸುದ್ದಿ