ಒಂದಕ್ಕೆ ಎರಡು ತೆಗೆದು ಬಿಡಿ ಅನ್ನೋವಷ್ಟು ಬಿಜೆಪಿ ಬೆಳೆದಿದೆ |  ಸಚಿವ ಕೆ.ಎಸ್.ಈಶ್ವರಪ್ಪ - Mahanayaka
6:31 AM Wednesday 5 - February 2025

ಒಂದಕ್ಕೆ ಎರಡು ತೆಗೆದು ಬಿಡಿ ಅನ್ನೋವಷ್ಟು ಬಿಜೆಪಿ ಬೆಳೆದಿದೆ |  ಸಚಿವ ಕೆ.ಎಸ್.ಈಶ್ವರಪ್ಪ

eshwarappa
08/08/2021

ಶಿವಮೊಗ್ಗ: ಹಿಂದೆ ನಮ್ಮ ಕಾರ್ಯಕರ್ತರಿಗೆ ಯಾರಾದರೂ ಹೊಡೆದರೆ ವಾಪಸ್ ಹೊಡೆಯೋಕೆ ನಮಗೆ ಶಕ್ತಿ ಇರಲಿಲ್ಲ. ಈಗ ಯಾರಾದರೂ ಮೈಮುಟ್ಟಿದರೆ, ಯಾವುದರಲ್ಲಿ ಹೊಡಿತಾರೋ ಅದರಲ್ಲಿಯೇ ಹೊಡೆದು, ಒಂದಕ್ಕೆ ಎರಡು ತೆಗೆದು ಬಿಡಿ ಎನ್ನುವಷ್ಟರ ಮಟ್ಟಿಗೆ ಬಿಜೆಪಿ ಪಕ್ಷ ಬೆಳೆದಿದೆ ಎಂದು ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದ್ದಾರೆ.

ಶಿವಮೊಗ್ಗ ನಗರದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಬಿಜೆಪಿ ಕಾರ್ಯಕಾರಣಿಯಲ್ಲಿ ಮಾತನಾಡಿದ ಅವರು,  ಲಕ್ಷಾಂತರ ಜನರು ಬಿಜೆಪಿ ಪರವಾಗಿದ್ದಾರೆ. ಹಿಂದೂ ಸಂಘಟನೆಗಳ ಮೆರವಣಿಗೆ ಎಂದರೆ ಕಲ್ಪನೆ ಮಾಡದಷ್ಟು ಜನರು ಸೇರುತ್ತಾರೆ ಎಂದು ಹೇಳಿದರು.

ನಮ್ಮ ಹಿರಿಯರು ಬಿ ಕಾಮ್ ಅಟ್ ಕಾಸ್ಟ್ ಎಂದು ಹೇಳುತ್ತಿದ್ದರು. ಎಂತಹ ಸಂದರ್ಭ ಬಂದರೂ ಶಾಂತವಾಗಿರಿ ಅನ್ನುತ್ತಿದ್ದರು. ಏಕೆಂದರೆ, ಆಗ ನಮ್ಮ ಬಳಿ ಶಕ್ತಿ ಇರಲಿಲ್ಲ. ಇಂದು ಇಡೀ ಪ್ರಪಂಚದಲ್ಲಿ ಬಿಜೆಪಿ ಬೆಳೆದಿದೆ. ನಮ್ಮ ಕಾರ್ಯಕರ್ತನ ಮೈ ಮುಟ್ಟಿದರೆ, ಫೇಸ್ ವಿತ್ ದಿ ಸೇಮ್ ಸ್ಟಿಕ್ ಅಂದರೆ,  ಯಾವುದರಲ್ಲಿ ಹೊಡೆಯುತ್ತಾರೋ ಅದರಲ್ಲಿಯೇ ಹೊಡೆದು ಒಂದಕ್ಕೆ ಎರಡು ತೆಗೆದು ಬಿಡಿ ಎನ್ನುತ್ತಿದ್ದಾರೆ. ಹಾಗಾಗಿ ನಮ್ಮ ಸುದ್ದಿಗೆ ಯಾರೂ ಬರುತ್ತಿಲ್ಲ ಎಂದು ಅವರು ಹೇಳಿದರು.

 ಇನ್ನಷ್ಟು ಸುದ್ದಿಗಳು…

 

ಹಿಂದುತ್ವದ ಹಿತಾಸಕ್ತಿಯೂ ಜಾತಿಯ ಅನಿವಾರ್ಯತೆಯೂ | ನಾ ದಿವಾಕರ

ಪ್ರಾಜೆಕ್ಟ್ ವರ್ಕ್ ನೆಪದಲ್ಲಿ ಮನೆಗೆ ಕರೆಸಿ ವಿದ್ಯಾರ್ಥಿನಿಯ ಮೇಲೆ ಶಿಕ್ಷಕನಿಂದ ಅತ್ಯಾಚಾರ, ಬ್ಲ್ಯಾಕ್ ಮೇಲ್

BIG NEWS: ಸಂಪುಟ ದರ್ಜೆ ಸ್ಥಾನ ಮಾನವನ್ನು ತಿರಸ್ಕರಿಸಿದ ಮಾಜಿ ಸಿಎಂ ಯಡಿಯೂರಪ್ಪ

ಭಾರತ ನಿರ್ಮಾಣದ ಕಲ್ಪನೆ ಸಕಾರಗೊಳಿಸುವಲ್ಲಿ ನೆಹರೂ ಮಹತ್ವದ ಪಾತ್ರವಹಿಸಿದ್ದಾರೆ: ಸಿಎಂ ಬಸವರಾಜ್ ಬೊಮ್ಮಾಯಿ

ಮಲಯಾಳಂ ಖ್ಯಾತನಟ ಮಮ್ಮುಟ್ಟಿ ಸಹಿತ 300 ಮಂದಿಯ ವಿರುದ್ಧ ಪ್ರಕರಣ ದಾಖಲು!

ಇಂದಿರಾ ಇಲ್ಲದಿರುತ್ತಿದ್ದರೆ, ಸಿ.ಟಿ.ರವಿ ಹರಿದ ಚಡ್ಡಿ ಹಾಕಿಕೊಂಡು ಯಾರದ್ದೋ ಮನೆಯ ಸೆಗಣಿ ಬಾಚುತ್ತಿರುತ್ತಿದ್ದರು | ಕಾಂಗ್ರೆಸ್

3ನೇ ಅಲೆಗೆ ಸೆಡ್ಡು ಹೊಡೆಯಲು ಸಿಂಗಲ್ ಡೋಸ್ ಲಸಿಕೆಗೆ ಗ್ರೀನ್ ಸಿಗ್ನಲ್ ನೀಡಿದ ಕೇಂದ್ರ ಸರ್ಕಾರ

ಇತ್ತೀಚಿನ ಸುದ್ದಿ