“ಮಾತಾಡಿ ಪ್ರಧಾನಿಗಳೇ ಮಾತನಾಡಿ” | ಆ.10ರಿಂದ 15ರವರೆಗೆ ಆನ್ ಲೈನ್ ಅಭಿಯಾನ
ಬೆಂಗಳೂರು: ಈ ಬಾರಿಯ ಸ್ವಾತಂತ್ರ್ಯೋತ್ಸವ ಭಾಷಣ ಮಾಡಲು ಪ್ರಧಾನಿ ನರೇಂದ್ರ ಮೋದಿ ಅವರು ಸಲಹೆ ಕೇಳಿದ್ದಾರೆ. ಆದರೆ ನಲುಗುತ್ತಿರುವ ಜನಸಮುದಾಯಗಳ ಬಗ್ಗೆ, ನಾಡು ತಲುಪುತ್ತಿರುವ ದುರ್ಗತಿಯ ಬಗ್ಗೆಯೂ ಮಾತನಾಡುವಂತೆ ಒತ್ತಾಯಿಸಲು ಆಗಸ್ಟ್ 10ರಿಂದ 15ರವರೆಗೆ ‘ಮಾತಾಡಿ ಪ್ರಧಾನಿಗಳೇ ಮಾತನಾಡಿ’ ಎಂಬ ಆನ್ ಲೈನ್ ಅಭಿಯಾನ ನಡೆಯಲಿದೆ.
ಸಾಮಾಜಿಕ ಜಾಲತಾಣಗಳಲ್ಲಿ ಈ ರೀತಿಯಾಗಿರುವ ಪೋಸ್ಟರ್ ವೊಂದು ಸದ್ದು ಮಾಡುತ್ತಿದ್ದು, ಆಗಸ್ಟ್ 10ರಿಂದ 15ರವರೆಗೆ ‘ಮಾತಾಡಿ ಪ್ರಧಾನಿಗಳೇ ಮಾತನಾಡಿ’ ಎಂಬ ಅಭಿಯಾನದ ಮೂಲಕ ದೇಶದ ಜ್ವಾಲಂತ ಸಮಸ್ಯೆಗಳನ್ನು ಮಾತನಾಡುವಂತೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಒತ್ತಾಯಿಸಲು ನಿರ್ಧರಿಸಲಾಗಿದೆ. ಈ ಅಭಿಯಾನವನ್ನು ಯಾವ ಸಂಘಟನೆ ಮಾಡುತ್ತಿದೆ ಎಂಬ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಸಂಘಟನಾ ರಹಿತವಾಗಿ ಈ ಅಭಿಯಾನ ನಡೆಯಲಿದೆ ಎಂದು ಹೇಳಲಾಗುತ್ತಿದೆ.
‘ಈ ಬಾರಿಯ ಸ್ವಾತಂತ್ರ್ಯ ಭಾಷಣಕ್ಕೆ ಪ್ರಧಾನಿಗಳು ಸಲಹೆ ಕೇಳಿದ್ದಾರೆ. ಆಯ್ತು ಅದನ್ನೂ ಮಾಡೋಣ. ನಲುಗುತ್ತಿರುವ ಜನಸಮುದಾಯಗಳ ಬಗ್ಗೆ, ನಾಡು ತಲುಪುತ್ತಿರುವ ದುರ್ಗತಿಯ ಬಗ್ಗೆ ಮಾತನಾಡುವಂತೆ ಪ್ರಧಾನಿಯನ್ನು ಒತ್ತಾಯಿಸೋಣ. ಮೌನ ಸಾಕು, ಮಾತನಾಡಿ ಎಂದ ಆಗ್ರಹಿಸೋಣ’ ಎಂದು ಸದ್ಯ ವೈರಲ್ ಆಗುತ್ತಿರುವ ಪೋಸ್ಟರ್ ನಲ್ಲಿ ಬರೆಯಲಾಗಿದೆ.
ಇನ್ನಷ್ಟು ಸುದ್ದಿಗಳು…
ಕೊರೊನಾ ಸಂದರ್ಭದಲ್ಲಿ ಭಾರತ ಸರ್ಕಾರವು ಬಡವರಿಗೆ ಹೆಚ್ಚಿನ ಆದ್ಯತೆ ನೀಡಿದೆ | ಪ್ರಧಾನಿ ಮೋದಿ
ಮೊದಲು ಕ್ರೀಡಾಂಗಣಕ್ಕೆ ಇಟ್ಟಿರುವ ಮೋದಿ ಹೆಸರನ್ನು ಬದಲಾವಣೆ ಮಾಡಲಿ | ಸಿ.ಟಿ.ರವಿಗೆ ಸಿದ್ದರಾಮಯ್ಯ ಸವಾಲು
11 ಬಾರಿ ಮೆದುಳಿನ ಶಸ್ತ್ರ ಚಿಕಿತ್ಸೆಗೊಳಪಟ್ಟಿದ್ದ ಖ್ಯಾತ ನಟಿಯನ್ನು ಬಲಿ ಪಡೆದ ಕೊವಿಡ್ 19
“ಲವ್ ಯೂ ರಚ್ಚು” ಚಿತ್ರದ ಶೂಟಿಂಗ್ ವೇಳೆ ಅವಘಡ | ಓರ್ವ ಸಾವು, ಇನ್ನೋರ್ವನಿಗೆ ಗಾಯ | ನಟ ಅಜಯ್ ರಾವ್ ಆಕ್ರೋಶ
ಎಟಿಎಂ ಒಡೆಯುತ್ತಿದ್ದ ವೇಳೆ ಎಟಿಎಂನಲ್ಲಿ ಸಿಕ್ಕಿಹಾಕಿಕೊಂಡ ಕಳ್ಳ! | ಮುಂದೆ ನಡೆದದ್ದೇನು ಗೊತ್ತಾ?
ತಾಯಾಣೆ ನಾನು ಅಷ್ಟೊಂದು ಹಣವನ್ನು ಎಂದಿಗೂ ನೋಡೇ ಇಲ್ಲ | ಬಿಗ್ ಬಾಸ್ ವಿನ್ನರ್ ಮಂಜು ಪಾವಗಡ