ಭಾರೀ ಭೂಕುಸಿತ: ಮಣ್ಣಿನಡಿಯಲ್ಲಿ ಸಿಲುಕಿದ 40 ಪ್ರಯಾಣಿಕರಿದ್ದ ಬಸ್! - Mahanayaka
1:25 PM Thursday 12 - December 2024

ಭಾರೀ ಭೂಕುಸಿತ: ಮಣ್ಣಿನಡಿಯಲ್ಲಿ ಸಿಲುಕಿದ 40 ಪ್ರಯಾಣಿಕರಿದ್ದ ಬಸ್!

trapped shimla
11/08/2021

ಶಿಮ್ಲಾ:  ಹಿಮಾಚಲ ಪ್ರದೇಶದ ಕಿನ್ನೌರ್ ಜಿಲ್ಲೆಯಲ್ಲಿ ಭಾರೀ ಭೂಕುಸಿತದಿಂದಾಗಿ ಒಂದು ಟ್ರಕ್ ಹಾಗೂ ಪ್ರಯಾಣಿಕರನ್ನು ಹೊತ್ತು ಸಾಗುತ್ತಿದ್ದ ರಾಜ್ಯ ಸಾರಿಗೆ ಬಸ್ ಮಣ್ಣಿನಡಿಯಲ್ಲಿ ಸಿಲುಕಿದ್ದು, ಸದ್ಯ ರಕ್ಷಣಾ ಕಾರ್ಯಾಚರಣೆ ನಡೆಸಲಾಗುತ್ತಿದೆ.

ಬಸ್ ನಲ್ಲಿ ಸುಮಾರು 40 ಜನರು ಪ್ರಯಾಣಿಸುತ್ತಿದ್ದರು ಎಂದು ತಿಳಿದು ಬಂದಿದೆ. ಮಣ್ಣನಡಿಯಲ್ಲಿ ಸಿಲುಕಿರುವವರ ರಕ್ಷಣೆಗೆ ಇಂಡೋ ಟಿಬೆಟಿಯನ್ ಬಾರ್ಡರ್ ಪೊಲೀಸರ ತಂಡದ ನೇತೃತ್ವದಲ್ಲಿ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ.

ಕಿನ್ನೌರ್ ಜಿಲ್ಲೆಯ ರೆಕಾಂಗ್ ಪಿಯೋ-ಶಿಮ್ಲಾ ಹೆದ್ದಾರಿಯಲ್ಲಿ ಭೂ ಕುಸಿತ ಸಂಭವಿಸಿದೆ. ಭೂ ಕುಸಿತದ ಪರಿಣಾಮ ರಸ್ತೆಯಲ್ಲಿ ಸಾಗುತ್ತಿದ್ದ,  ಎಚ್ ಆರ್ ಟಿಸಿ ಬಸ್ ಮತ್ತು ಇತರ ವಾಹನಗಳು ಅವಶೇಷಗಳಡಿಯಲ್ಲಿ ಸಿಲುಕಿದೆ ಎಂದು ಕಿನ್ನೌರ್ ಎಸ್ ಪಿ ಸಾಜು ರಾಮರಾಣ ತಿಳಿಸಿದ್ದಾರೆ.

ಇನ್ನಷ್ಟು ಸುದ್ದಿಗಳು…

ಆರೆಸ್ಸೆಸ್, ಬಿಜೆಪಿ ಕಾರ್ಯಕರ್ತರ ಮೇಲಿನ ಪ್ರಕರಣ ವಾಪಸ್ ಪಡೆಯುತ್ತೇವೆ | ದಲಿತ ಸಿಎಂ ಮಾಡ್ತೇವೆ- ಸಚಿವ ಈಶ್ವರಪ್ಪ ಹೇಳಿಕೆ

ದಿಢೀರ್ ಬೆಳವಣಿಗೆ: ರಾಜೀನಾಮೆಗೆ ಮುಂದಾದ ಸಚಿವ ಆನಂದ್ ಸಿಂಗ್?

ನೀರಜ್ ಚೋಪ್ರಾರನ್ನು ಅನುಕರಿಸಿ ರೋಡಲ್ಲಿ ನಿಂತು ಈಟಿ ಎಸೆದ ರಾಖಿ ಸಾವಂತ್ | ಮುಂದೇನಾಯ್ತು?

ಎಸೆಸೆಲ್ಸಿ ಪರೀಕ್ಷೆಯಲ್ಲಿ ಫಸ್ಟ್ ಕ್ಲಾಸ್ ನಲ್ಲಿ ಪಾಸ್ ಆಗಿದ್ದ ವಿದ್ಯಾರ್ಥಿಯ ಮೃತದೇಹ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ!

ಮಾತುಬಾರದ, ಕಿವಿ ಕೇಳದ ಮಹಿಳೆಯ ಮೇಲೆ ಆಸ್ಪತ್ರೆಯಲ್ಲೇ ಅತ್ಯಾಚಾರ!

ಹೂಗುಚ್ಛ, ಹಾರ ಸಂಪ್ರದಾಯಕ್ಕೆ ಬ್ರೇಕ್ ಹಾಕಿದ ಸಿಎಂ ಬೊಮ್ಮಾಯಿ | ಕನ್ನಡ ಪುಸ್ತಕ ಕೊಡಲು ಆದೇಶ

ಇತ್ತೀಚಿನ ಸುದ್ದಿ