ಒಂದು ಬಾರಿ ಅವನು ನನ್ನ ಜೊತೆಗೆ ಲಿಮಿಟ್ ಮೀರಿ ವರ್ತಿಸಿದ್ದ: ಕಹಿ ನೆನಪು ಹಂಚಿಕೊಂಡ ಶಮಿತಾ ಶೆಟ್ಟಿ
ಸಿನಿಡೆಸ್ಕ್: ನಟಿ ಶಿಲ್ವಾ ಶಿಟ್ಟಿಯ ತಂಗಿ ಶಮಿತಾ ಶೆಟ್ಟಿ ಓಟಿಟಿ ಫ್ಲ್ಯಾಟ್ ಫಾರ್ಮ್ ನಲ್ಲಿ ಮಾತ್ರವೇ ಪ್ರಸಾರವಾಗುತ್ತಿರುವ ವಿವಾದಾತ್ಮಕ ಕಾರ್ಯಕ್ರಮ ಬಿಗ್ ಬಾಸ್ ನಲ್ಲಿ ಸ್ಪರ್ಧಿಸಿದ್ದಾರೆ. ಅಶ್ಲೀಲ ಚಿತ್ರಗಳ ತಯಾರಿಕೆ ಹಿನ್ನೆಲೆಯಲ್ಲಿ ರಾಜ್ ಕುಂದ್ರಾ ಅರೆಸ್ಟ್ ಆಗಿದ್ದು, ಇದೇ ಸಂದರ್ಭದಲ್ಲಿ ಶಮಿತಾ ಈ ಕಾರ್ಯಕ್ರಮದಲ್ಲಿ ಭಾಗವಹಿಸಿರುವುದು ಹಲವು ಚರ್ಚೆಗಳಿಗೆ ಕಾರಣವಾಗಿದೆ. ಹೀಗಾಗಿ ಶಮಿತಾ ಶೆಟ್ಟಿ ಇದೀಗ ಪ್ರತೀ ದಿನ ಸುದ್ದಿಯಾಗುತ್ತಿದ್ದಾರೆ.
ವೂಟ್ ಆ್ಯಪ್ ಮೂಲಕ ಮಾತ್ರವೇ ಈ ಕಾರ್ಯಕ್ರಮ ಪ್ರಸಾರವಾಗುತ್ತಿದೆ. ಈ ಕಾರ್ಯಕ್ರಮವನ್ನು ಕರಣ್ ಜೋಹರ್ ನಡೆಸಿಕೊಡುತ್ತಿದ್ದಾರೆ. ಈ ಕಾರ್ಯಕ್ರಮದಲ್ಲಿ ಕೊರಿಯೋಗ್ರಾಫರ್ ನಿಶಾಂತ್ ಭಟ್ ಕೂಡ ಭಾಗವಹಿಸಿದ್ದಾರೆ. ಆದರೆ ನಿಶಾಂತ್ ಭಟ್ ನಿಂದ ಶಮಿತಾ ಶೆಟ್ಟಿ ಅಂತರ ಕಾಯ್ದುಕೊಳ್ಳುವ ಮೂಲಕ ಇದೀಗ ಅವರು ದೊಡ್ಡ ಸುದ್ದಿಯಾಗಿದ್ದಾರೆ.
ಇನ್ನೂ ನಿಶಾಂತ್ ಭಟ್ ನಿಂದ ಅಂತರ ಕಾಯ್ದುಕೊಂಡಿರುವ ವಿಚಾರವಾಗಿ ಸ್ಪರ್ಧಿ ದಿವ್ಯಾ ಅಗರ್ ವಾಲ್ ಜೊತೆಗೆ ಮಾತನಾಡಿದ ಶಮಿತಾ ಶೆಟ್ಟಿ, ಶೋವೊಂದರಲ್ಲಿ ಕೆಲಸ ಮಾಡುತ್ತಿದ್ದ ಸಂದರ್ಭದಲ್ಲಿ ನಿಶಾಂತ್ ಭಟ್ ನನ್ನೊಂದಿಗೆ ಲಿಮಿಟ್ ಕ್ರಾಸ್ ಮಾಡಿದ್ದ. ಅದು ನನಗೆ ಕಿರಿಕಿರಿ ಉಂಟು ಮಾಡಿತ್ತು. ಆ ಬಳಿಕ ನಾನು ಆತನಿಂದ ಅಂತರ ಕಾಯ್ದುಕೊಂಡೆ ಎಂದು ಅವರು ಹೇಳಿದ್ದಾರೆ.
ನಿಶಾಂತ್ ಭಟ್ ನನ್ನ ಜೊತೆಗೆ ಲಿಮಿಟ್ ಬಿಟ್ಟು ವರ್ತಿಸಿದ್ದ. ಅದು ನನಗೆ ಇಷ್ಟವಾಗಿರಲಿಲ್ಲ. ಆ ಘಟನೆಯ ಬಳಿಕ ನನ್ನೊಂದಿಗೆ ಅವನು ಮಾತನಾಡುತ್ತಿರಲಿಲ್ಲ. ಅದನ್ನು ಮತ್ತೆ ನೆನಪಿಸಲು ನನಗೂ ಇಷ್ಟ ಇಲ್ಲ ಎಂದು ಶಮಿತಾ ಶೆಟ್ಟಿ ಹೇಳಿದ್ದಾರೆ.
ಇನ್ನಷ್ಟು ಸುದ್ದಿಗಳು…
ಕಾಂಗ್ರೆಸ್ ನವರು ಬೇಕಿದ್ದರೆ ‘ನೆಹರೂ ಹುಕ್ಕಾ ಬಾರ್’ ತೆರೆಯಲಿ: ಸಿ.ಟಿ.ರವಿ ಹೇಳಿಕೆ
ಅಧಿಕಾರಕ್ಕೆ ಬಂದ ತಕ್ಷಣವೇ ಜಾತಿಗಣತಿ ವರದಿ ಚರ್ಚೆಗಿಡುತ್ತೇನೆ | ಸಿದ್ದರಾಮಯ್ಯ ಹೇಳಿಕೆ
ಪೊಲೀಸರ ನಡುವೆಯೇ ಘರ್ಷಣೆ: ಹೆಡ್ ಕಾನ್ಸ್ ಟೇಬಲ್ ಗೆ ಗುಂಡು ಹಾರಿಸಿ ಹತ್ಯೆ ಮಾಡಿದ ಕಾನ್ಸ್ ಟೇಬಲ್
ಖ್ಯಾತ ಕ್ರಿಕೆಟಿಗನ ಆರೋಗ್ಯ ಸ್ಥಿತಿ ಗಂಭೀರ | ಜೀವ ರಕ್ಷಕ ಸಾಧನ ಅಳವಡಿಕೆ
ಪೊಲೀಸರ ನಡುವೆಯೇ ಘರ್ಷಣೆ: ಹೆಡ್ ಕಾನ್ಸ್ ಟೇಬಲ್ ಗೆ ಗುಂಡು ಹಾರಿಸಿ ಹತ್ಯೆ ಮಾಡಿದ ಕಾನ್ಸ್ ಟೇಬಲ್