ಮೇಕೆದಾಟಿಸಲಾಗದೇ ನೆಹರೂ, ಇಂದಿರಾ ಗಾಂಧಿ ಹೆಸರು ಎಳೆದು ತಂದರೇ ಸಿ.ಟಿ.ರವಿ?
ಬೆಂಗಳೂರು: ರಾಜ್ಯ ಸರ್ಕಾರವು ಮೇಕೆದಾಟು ಯೋಜನೆಗೆ ಸಂಬಂಧಿಸಿದಂತೆ ಇದೀಗ ಅಡ್ಡಕತ್ತರಿಯಲ್ಲಿ ಸಿಲುಕಿದ್ದು, ಹೀಗಾಗಿ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹಾಗೂ ಕೆಲವು ನಾಯಕರು ಮೇಕೆದಾಟು ಯೋಜನೆಯ ಕಡೆಯಿಂದ ಜನರ ಗಮನ ಬೇರೆಡೆಗೆ ಸೆಳೆಯಲು ಇಂದಿರಾ-ನೆಹರೂ ವಿಚಾರದಲ್ಲಿ ಅನಗತ್ಯ ಹೇಳಿಕೆಗಳನ್ನು ಕೊಡುತ್ತಿದ್ದಾರೆ ಎನ್ನುವ ಚರ್ಚೆಗಳು ಸಾಮಾಜಿಕ ಜಾಲತಾಣಗಳಲ್ಲಿ ಆರಂಭವಾಗಿದೆ.
ಮೇಕೆದಾಡು ವಿಚಾರದಲ್ಲಿ ಕೇಂದ್ರ ಸರ್ಕಾರವು ತಮಿಳುನಾಡಿನ ಪರವಾಗಿದೆ ಎನ್ನಲಾಗುತ್ತಿದೆ. ಈ ಬಗ್ಗೆ ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ ಕೆ. ಅಣ್ಣಾಮಲೈ ಅವರು ಬಹಿರಂಗವಾಗಿ ಹೇಳಿಕೆ ನೀಡಿದ್ದು, ನಮ್ಮ ಅನುಮತಿ ಇಲ್ಲದೇ ಕರ್ನಾಟಕ ಮೇಕೆದಾಟು ಯೋಜನೆ ನಡೆಸಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ. ತಮ್ಮ ಉಪವಾಸ ಸತ್ಯಾಗ್ರಹಕ್ಕೆ ಫಲದೊರೆತಿದೆ ಎಂದು ಕೂಡ ಅಣ್ಣಾಮಲೈ ಹೇಳಿದ್ದಾರೆ. ತಮಿಳುನಾಡಿನಲ್ಲಿ ಬಿಜೆಪಿ ಬೆಳವಣಿಗೆಯಾಗಬೇಕಾದರೆ, ತಮಿಳಿಗರನ್ನು ಓಲೈಸುವುದು ಬಿಜೆಪಿಗೆ ಅನಿವಾರ್ಯವಾಗಿದೆ. ಹಾಗಾಗಿ ಕರ್ನಾಟಕದ ಯಾವುದೇ ಮನವಿಗೆ ಕೇಂದ್ರ ಸರ್ಕಾರ ಸ್ಪಂದಿಸುತ್ತಿಲ್ಲ ಎನ್ನುವ ಚರ್ಚೆಗಳು ಇದೀಗ ಕೇಳಿ ಬಂದಿದೆ.
ಇನ್ನೂ ಕನ್ನಡಿಗರಾಗಿದ್ದರೂ ತಮಿಳುನಾಡಿನಲ್ಲಿ ಬಿಜೆಪಿ ಬೆಳವಣಿಗೆಗೆ ದುಡಿಯುತ್ತಿರುವ ಸಿ.ಟಿ.ರವಿ ಅವರಿಗೆ ಇದೀಗ ಕರ್ನಾಟಕ ಹಾಗೂ ತಮಿಳುನಾಡು ಎರಡು ರಾಜ್ಯಗಳ ಪೈಕಿ ಯಾವ ರಾಜ್ಯವನ್ನೂ ಸಮರ್ಥಿಸಲು ಸಾಧ್ಯವಾಗುತ್ತಿಲ್ಲ. ಎರಡು ರಾಜ್ಯಗಳಲ್ಲಿ ಒಂದು ರಾಜ್ಯದ ಪರವಾಗಿ ನಿಂತರೂ, ಅವರು ಟೀಕೆಗೆ ಗುರಿಯಾಗುತ್ತಾರೆ. ಹೀಗಾಗಿ ಮೇಕೆದಾಟು ವಿಚಾರವಾಗಿ ನಾನು ಭಾರತದ ಪರ ಎಂದು ಅವರು ಹೇಳಿದ್ದಾರೆ ಎನ್ನುವ ಅಭಿಪ್ರಾಯಗಳು ಕೇಳಿ ಬಂದಿದೆ.
ಇನ್ನೂ ಮೇಕೆದಾಟು ವಿಚಾರ ರಾಜ್ಯದಲ್ಲಿ ಇನ್ನಷ್ಟು ತೀವ್ರತೆಗೊಳ್ಳುವ ಸಾಧ್ಯತೆಗಳಿವೆ. ಹೀಗಾಗಿ ಈ ಚರ್ಚೆಯನ್ನು ಬೇರೆಡೆಗೆ ಸೆಳೆಯಲು ಇಂದಿರಾ ಕ್ಯಾಂಟೀನ್, ನೆಹರೂ ಹುಕ್ಕಾ ಬಾರ್ ಮೊದಲಾದ ಹೇಳಿಕೆಗಳನ್ನು ಸಿ.ಟಿ,ರವಿ ನೀಡುತ್ತಿದ್ದಾರೆ ಎನ್ನುವ ಆರೋಪಗಳು ಕೂಡ ಕೇಳಿ ಬಂದಿವೆ.
ಇನ್ನಷ್ಟು ಸುದ್ದಿಗಳು…
ಎನ್.ಮಹೇಶ್ ಗೆ ಬಿಎಸ್ ಪಿಯಿಂದ ಅನ್ಯಾಯ ಆಗಿಲ್ಲ | ಬಿಎಸ್ ಪಿ ರಾಜ್ಯಾಧ್ಯಕ್ಷ ಎಂ.ಕೃಷ್ಣಮೂರ್ತಿ
ಮರಣ ಪ್ರಮಾಣ ಪತ್ರಗಳಲ್ಲಿಯೂ ಮೋದಿ ಫೋಟೋ ಹಾಕಿಸಿ | ಪ್ರಧಾನಿ ಮೋದಿ ವಿರುದ್ಧ ಮಮತಾ ಆಕ್ರೋಶ
“ನನ್ನ ಜಾತಿ ನಿಂದನೆ ಮಾಡುತ್ತಿದ್ದಾರೆ” ಎಂದು ಆತ್ಮಹತ್ಯೆಗೆ ಯತ್ನಿಸಿದ ಬಿಲ್ ಕಲೆಕ್ಟರ್!
ವ್ಯಾಪಾರ ಮಾಡಲು ಬಂದ ಖಾಸಗಿ ಸಂಸ್ಥೆಗಳು ರಾಜಕೀಯ ನಿರ್ಧರಿಸುತ್ತಿವೆ | ಟ್ವಿಟ್ಟರ್ ವಿರುದ್ಧ ರಾಹುಲ್ ಗಾಂಧಿ ಅಸಮಾಧಾನ
ನಾಗರ ಪಂಚಮಿ: ಕೊವಿಡ್ ಹಿನ್ನೆಲೆಯಲ್ಲಿ ದೇವಸ್ಥಾನಗಳಲ್ಲಿ ಭಕ್ತರ ಸಂಖ್ಯೆ ಕಡಿಮೆ