ಕೂದಲು ಉದುರುವಿಕೆಗೆ ಅತ್ಯಂತ ಸುಲಭ ಪರಿಹಾರ ಏನು ಗೊತ್ತಾ?
ಕೂದಲು ಉದುರುವಿಕೆ ಈಗಿನ ಕಾಲದಲ್ಲಂತೂ ಅತೀ ಹೆಚ್ಚು ಜನರಲ್ಲಿ ಕಂಡು ಬರುವ ಸಾಮಾನ್ಯ ಸಮಸ್ಯೆಗಳಲ್ಲಿ ಒಂದಾಗಿದೆ. ಕೂದಲು ಉದುರುತ್ತಿದೆ ಎಂದು ಕೈಗೆ ಸಿಕ್ಕಿದ ಶ್ಯಾಂಪುಗಳನ್ನು ತಲೆಗೆ ಹಚ್ಚಿ ಇರುವ ಸ್ವಲ್ಪ ಕೂದಲುಗಳನ್ನು ಕಳೆದು ಕೊಂಡವರ ಪಾಡು ಹೇಳತೀರದು.
ಕೂದಲು ಉದುರುವ ಸಮಸ್ಯೆಗೆ ಕೆಲವೇ ನಿಮಿಷಗಳಲ್ಲಿ ಪರಿಹಾರ ಸಿಗಬೇಕು ಅಂದುಕೊಳ್ಳಬೇಡಿ. ಯಾಕೆಂದರೆ, ಒಂದೇ ಬಾರಿಗೆ ಯಾವುದೇ ಅನಾರೋಗ್ಯ ಸಮಸ್ಯೆಗಳು ಗುಣವಾಗಲು ಹೇಗೆ ಸಾಧ್ಯವಿಲ್ಲವೋ ಹಾಗೆಯೇ ಕೂದಲು ಉದುರುವಿಕೆ ಕೂಡ ಹಾಗೆಯೇ ಒಂದೇ ಬಾರಿಗೆ ಗುಣವಾಗುವುದಿಲ್ಲ. ಒಂದೇ ಬಾರಿಗೆ ಕೂದಲು ಬೆಳೆಯುವ ಜಾಹೀರಾತುಗಳನ್ನು ನಂಬಲು ಹೋಗದಿರಿ.
ರಾಸಾಯನಿಕಗಳನ್ನು ಬಳಸಿ ತಯಾರಿಸುವ ಯಾವುದೇ ಉತ್ಪನ್ನದಿಂದ ಕೂದಲು ಉದುರುವಿಕೆಯನ್ನು ತಡೆಯಲು ಸಾಧ್ಯವಿಲ್ಲ. ಕೂದಲಿನ ಆರೋಗ್ಯವು ನೈಸರ್ಗಿಕವಾಗಿ ವೃದ್ಧಿಯಾಗಬೇಕು. ಹಾಗಾಗಿಯೇ ನೀವು ಈ ಕೆಳಗೆ ನೀಡಿರುವ ನೈಸರ್ಗಿಕ ವಿಧಾನಗಳನ್ನು ಬಳಸಬಹುದಾಗಿದೆ. ಕೇರಳದಲ್ಲಿ ಅತೀ ಹೆಚ್ಚು ಜನರು ಕೂದಲಿನ ಆರೋಗ್ಯಕ್ಕಾಗಿ ಈ ಕ್ರಮವನ್ನೇ ಅನುಸರಿಸುತ್ತಾರೆ. ಹಾಗಾಗಿ ಕೇರಳದಲ್ಲಿ ಪುರುಷರು ಹಾಗೂ ಮಹಿಳೆಯರು ತಲೆಗೂದಲು ಆಕರ್ಷಕವಾಗಿ ಕಾಣುತ್ತದೆ.
ಕೊಬ್ಬರಿ ಎಣ್ಣೆಯನ್ನು ಬಿಸಿ ಮಾಡಿ ಹದ ಬಿಸಿ ಇರುವಾಗ ತಲೆಗೆ ಹಚ್ಚಿ ಪ್ರತಿದಿನ ಮಸಾಜ್ ಮಾಡುವುದರಿಂದ ಕೂದಲಿನ ಬೇರು ಗಟ್ಟಿಯಾಗುತ್ತದೆ. ತಲೆ ನೋವಿನಿಂದ ಕೂಡ ಮುಕ್ತಿಯಾಗಲು ಇದು ಉತ್ತಮವಾಗಿದೆ. ಜೊತೆಗೆ ಕೂದಲಿನ ಬಣ್ಣ ಕಪ್ಪಾಗಲು ಇದು ಸಹಕಾರಿಯಾಗಿದೆ.
ಹಸಿ ಮೊಟ್ಟೆಯ ಬಿಳಿಭಾಗವನ್ನು ಬೇರ್ಪಡಿಸಿ ತೆಗೆದುಕೊಂಡು ತಲೆಗೆ ಹಚ್ಚಿಕೊಂಡು 5 ನಿಮಿಷದ ಬಳಿಕ ಚೆನ್ನಾಗಿ ತೊಳೆಯುವುದರಿಂದ ಕೂದಲು ಉದುರುವಿಕೆ ಕಡಿಮೆಯಾಗುತ್ತದೆ. ಹೊಸ ಕೂದಲು ಬರಕು ಕೂಡ ಇದು ಉತ್ತೇಜಕವಾಗಿದೆ.
ಇನ್ನೊಂದು ಮುಖ್ಯ ವಿಚಾರ ಏನೆಂದರೆ, ಕೂದಲು ಉದುರುವಿಕೆ ಸಮಸ್ಯೆ ಇದ್ದವರು ಕೂದಲಿಗೆ ಬಣ್ಣ ಹಚ್ಚಲು(ಹೇರ್ ಡೈ) ಮಾಡಲು ಹೋಗಲೇ ಬೇಡಿ. ಯಾಕೆಂದರೆ, ಕೂದಲಿಗೆ ಡೈ ಮಾಡುವುದರಿಂದ ಕೂದಲು ಉದುರುವ ಸಮಸ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಹೋಗುತ್ತದೆ.
ಇನ್ನೂ ನೆಲ್ಲಿ ರಸ ಮತ್ತು ನಿಂಬೆ ರಸವನ್ನು ಮಿಶ್ರಣ ಮಾಡಿಕೊಂಡು ತಲೆಗೆ ಹಚ್ಚುವುದರಿಂದಲೂ ಕೂದಲು ಉದುರುವಿಕೆ ಸಮಸ್ಯೆಯನ್ನು ನಿಲ್ಲಿಸಬಹುದಾಗಿದೆ. ನಿಮಗೆ ಯಾವ ಕ್ರಮವನ್ನು ಅನುಸರಿಸಬಹುದೋ ಅದನ್ನು ಅನುಸರಿಸಬಹುದು. ಆದರೆ ಯಾವುದೇ ಒಂದು ಮದ್ದನ್ನು ನೀವು ತಲೆಗೆ ಪ್ರಯೋಗಿಸುತ್ತೀರೋ, ಎರಡು ದಿನದೊಳಗೆ ಯಾವುದೇ ಸಮಸ್ಯೆಗಳು ಪರಿಹಾರವಾಗುವುದಿಲ್ಲ. ಪ್ರತೀ ದಿನ ತಾಳ್ಮೆಯಿಂದ ಈ ಕ್ರಮಗಳನ್ನು ಅನುಸರಿಸಿದರೆ, ಖಂಡಿತವಾಗಿಯೂ ಕೂದಲು ಉದುರುವಿಕೆಯಿಂದ ನೀವು ಪಾರಾಗಬಹುದಾಗಿದೆ.
ಇನ್ನಷ್ಟು ಸುದ್ದಿಗಳು…
ಜಿಯೋ ಫೋನ್ ಸ್ಫೋಟ: ಪ್ಯಾಂಟ್ ನ ಜೇಬಿನಲ್ಲಿದ್ದಾಗಲೇ ಏಕಾಏಕಿ ಸಿಡಿದ ಮೊಬೈಲ್
ತಾಯಿಯ ಕಣ್ಣೆದುರೇ ಇಬ್ಬರು ಹೆಣ್ಣು ಮಕ್ಕಳ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿ ಹತ್ಯೆ ಮಾಡಿದ ದುಷ್ಟರು!
ರಾಹುಲ್ ಗಾಂಧಿ ಟ್ವಿಟ್ಟರ್ ಖಾತೆ ಸ್ಥಗಿತಗೊಂಡ ತಕ್ಷಣ ಪ್ರಿಯಾಂಕಾ ಗಾಂಧಿ ಮಾಡಿದ್ದೇನು ಗೊತ್ತಾ?
ವ್ಯಾಪಾರ ಮಾಡಲು ಬಂದ ಖಾಸಗಿ ಸಂಸ್ಥೆಗಳು ರಾಜಕೀಯ ನಿರ್ಧರಿಸುತ್ತಿವೆ | ಟ್ವಿಟ್ಟರ್ ವಿರುದ್ಧ ರಾಹುಲ್ ಗಾಂಧಿ ಅಸಮಾಧಾನ