ಕಾರ್ಯಕ್ರಮದ ವೇದಿಕೆಯಲ್ಲಿಯೇ ಬೈದಾಡಿಕೊಂಡು ಹೊಡೆದಾಟಕ್ಕೆ ನಿಂತ ಶಾಸಕ-ಸಂಸದ! - Mahanayaka
11:02 PM Wednesday 11 - December 2024

ಕಾರ್ಯಕ್ರಮದ ವೇದಿಕೆಯಲ್ಲಿಯೇ ಬೈದಾಡಿಕೊಂಡು ಹೊಡೆದಾಟಕ್ಕೆ ನಿಂತ ಶಾಸಕ-ಸಂಸದ!

basavaraju shreenivas
14/08/2021

ತುಮಕೂರು: ಬೆಸ್ಕಾಂ ಎಂಎಸ್‍ ಎಸ್ ಘಟಕ ಉದ್ಘಾಟನೆ ಆಗಮಿಸಿದ್ದ ಶಾಸಕ ಹಾಗೂ ಸಂಸದರು ಪರಸ್ಪರ ಏಕವಚನದಲ್ಲಿಯೇ ಬೈದಾಡಿಕೊಂಡು ಕೈಕೈ ಮಿಲಾಯಿಸಲು ಮುಂದಾದ ಘಟನೆ ನಡೆದಿದ್ದು, ಕೊನೆಗೆ ಸ್ಥಳೀಯರು ಇವರ ಜಗಳವನ್ನು ನಿಲ್ಲಿಸಿ, ಸಮಾಧಾನ ಪಡಿಸಿಕಳುಹಿಸಿದ ಘಟನೆ ನಡೆದಿದೆ.

 

ಗುಬ್ಬಿ ತಾಲ್ಲೂಕಿನ ಸಿ.ನಂದಿಹಳ್ಳಿ ಗ್ರಾಮದಲ್ಲಿ ಬೆಸ್ಕಾಂ ಎಂಎಸ್‍ ಎಸ್ ಘಟಕ ಉದ್ಘಾಟನೆ ಬಂದಿದ್ದ ಲೋಕಸಭಾ ಸದಸ್ಯ ಜಿ.ಎಸ್.ಬಸರಾಜು ಮತ್ತು ಗುಬ್ಬಿ ಶಾಸಕ ಎಸ್.ಆರ್.ಶ್ರೀನಿವಾಸ್ ಅವರ ನಡುವೆ ಏಕವಚನದಲ್ಲಿ ಜಟಾಜಟಿ ನಡೆದಿದ್ದು, ಸಾರ್ವಜನಿಕರ ಎದುರೇ ಪರಸ್ಪರ ಕಿತ್ತಾಡಿದ್ದಾರೆ,

 

ಚೇಳೂರು ಚೆಕ್‍ಡ್ಯಾಂ ನಿರ್ಮಾಣಕ್ಕಾಗಿ ಭೂ ಸ್ವಾಧೀನದಲ್ಲಿ ಜಮೀನು ಕಳೆದುಕೊಳ್ಳುವ ರೈತರಿಗೆ ಒಂದು ಕೋಟಿ ಪರಿಹಾರ ಕೊಡಿಸುವುದಾಗಿ ಸಂಸದರು ಹೇಳಿದ್ದರು ಎನ್ನಲಾಗಿದೆ. ಈ ವೇಳೆ ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿರುವ ಶಾಸಕ ಶ್ರೀನಿವಾಸ್ ಅವರು, ಯೋಜನೆಯೇ ಇಲ್ಲ, ಹಣವೇ ಇಲ್ಲ. ಪರಿಹಾರ ಎಲ್ಲಿಂದ ಕೊಡಿಸುವುದು, ರೈತರಿಗೆ ಸುಳ್ಳು ಹೇಳಬೇಡಿ. ಅವರು ನಮ್ಮ ಮನೆ ಬಾಗಿಲಿಗೆ ಬಂದು ಪರಿಹಾರ ಕೇಳಿದರೆ ಎಲ್ಲಿಂದ ತಂದುಕೊಡುವುದು ಎಂದು ತಿರುಗೇಟು ನೀಡಿದ್ದರು ಎಂದು ಹೇಳಲಾಗಿದೆ.

 

ಇದರಿಂದ ಕೋಪಗೊಂಡ ಸಂಸದ ಬಸವರಾಜು ಅವರು “ನಿನಗೆ ಏನು ಗೊತ್ತಿಲ್ಲ.ಸುಮ್ಮನಿರು” ಎಂದು ಆಕ್ಷೇಪಾರ್ಹ ಪದ ಬಳಕೆ ಮಾಡಿ ನಿಂದಿಸಿದರು ಎನ್ನಲಾಗಿದೆ. ಇದರಿಂದ ರೊಚ್ಚಿಗೆದ್ದ ಶ್ರೀನಿವಾಸ್ ಅವರು, ನಿನಗೆ ವಯಸ್ಸಾಗಿದೆ. ಯೋಗ್ಯತೆಗಿಷ್ಟು ಬೆಂಕಿ ಹಾಕ, ಸುಳ್ಳು ಹೇಳುವುದನ್ನು ನಿಲ್ಲಿಸು ಎಂದು ಏಕವಚನದಲ್ಲಿ ವಾಗ್ದಾಳಿ ನಡೆಸಿದ್ದಾರೆ.

 

ಈ ವೇಳೆ ಸಂಸದ ಬಸವರಾಜು ಅವರು ಕುರ್ಚಿಯಿಂದ ಎದ್ದು ಶ್ರೀನಿವಾಸ್ ಅವರ ಜೊತೆಗೆ ಕಾದಾಡಲು ಹೋಗಿದ್ದಾರೆ. ಇಬ್ಬರು ನಾಯಕರು ಪರಸ್ಪರ ಆಕ್ರಮಣಕಾರಿ ಮನೋಭಾವ ಪ್ರದರ್ಶಿಸಿದ್ದು, ಕೈ ಕೈ ಮಿಲಾಯಿಸುವ ಹಂತ ತಲುಪಿದ್ದಾರೆ. ಕೊನೆಗೆ ಸ್ಥಳದಲ್ಲಿ ಹಾಜರಿದ್ದ ಪ್ರಮುಖರು ಇಬ್ಬರನ್ನು ಸಮಾಧಾನ ಮಾಡುವ ಪ್ರಯತ್ನ ನಡೆಸಿದರು. ಇದರಿಂದ ಕೆಲಕಾಲ ಉದ್ರಿಕ್ತ ವಾತಾವರಣ ನಿರ್ಮಾಣವಾಯಿತು.

 

ಇನ್ನಷ್ಟು ಸುದ್ದಿಗಳು…

ವಾಜಪೇಯಿ ಮದ್ಯ, ಮಾಂಸ ಪ್ರಿಯರು, ಸಾರ್ವರ್ಕರ್ ಬಾರ್ ಎಂದು ಹೆಸರಿಡುತ್ತಾರೆಯೇ? | ಸಿ.ಟಿ.ರವಿಗೆ ಪ್ರಿಯಾಂಕ್ ಖರ್ಗೆ ತಿರುಗೇಟು

ಬಿಗ್ ಬಾಸ್ ಸೀಸನ್ 8 ಮುಗಿದ ಬೆನ್ನಲ್ಲೇ ಮತ್ತೆ 7 ದಿನಗಳವರೆಗೆ ನಡೆಯಲಿದೆ ಬಿಗ್ ಬಾಸ್ ಕಾರ್ಯಕ್ರಮ!

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವೀಕೆಂಡ್ ಕರ್ಫ್ಯೂ ಜಾರಿ: ಇನ್ನೆರಡು ದಿನ ಏನೇನು ಇರಲಿದೆ?

ರಾಹುಲ್ ಗಾಂಧಿ ಟ್ವಿಟ್ಟರ್ ಖಾತೆ ಸ್ಥಗಿತಗೊಂಡ ತಕ್ಷಣ ಪ್ರಿಯಾಂಕಾ ಗಾಂಧಿ ಮಾಡಿದ್ದೇನು ಗೊತ್ತಾ?

ಕೋಟ್ಯಂತರ ರೂ. ವಂಚನೆ ಪ್ರಕರಣ: ನಟಿ ಶಿಲ್ಪಾ ಶೆಟ್ಟಿಗೆ ಲಕ್ನೋ ಪೊಲೀಸರಿಂದ ನೋಟಿಸ್

ಇತ್ತೀಚಿನ ಸುದ್ದಿ