ಎಲ್ಲಾ ಜಾತಿಯವರೂ ಅರ್ಚಕ ಹುದ್ದೆ ಪಡೆಯಲು ಅರ್ಹರು: ಕ್ರಾಂತಿಕಾರಿ ಹೆಜ್ಜೆಯಿಟ್ಟ ಎಂ.ಕೆ.ಸ್ಟ್ಯಾಲಿನ್ - Mahanayaka
4:34 PM Wednesday 11 - December 2024

ಎಲ್ಲಾ ಜಾತಿಯವರೂ ಅರ್ಚಕ ಹುದ್ದೆ ಪಡೆಯಲು ಅರ್ಹರು: ಕ್ರಾಂತಿಕಾರಿ ಹೆಜ್ಜೆಯಿಟ್ಟ ಎಂ.ಕೆ.ಸ್ಟ್ಯಾಲಿನ್

tamil nadu cm stalin
14/08/2021

ಚೆನ್ನೈ: ಎಲ್ಲಾ ಜಾತಿಯವರನ್ನು ಸರ್ಕಾರದ ಅಡಿಯಲ್ಲಿ ಕಾರ್ಯಾಚರಿಸುತ್ತಿರುವ ದೇವಸ್ಥಾನಗಳಲ್ಲಿ ಅರ್ಚಕರಾಗಿ ನೇಮಿಸುವ ಬಗ್ಗೆ  ಚುನಾವಣಾ ಪ್ರಣಾಳಿಕೆಯಲ್ಲಿ ಘೋಷಿಸಿದ್ದ ಡಿಎಂಕೆ ಸರ್ಕಾರವು ಶನಿವಾರ ವಿವಿಧ ಸಮುದಾಯಗಳ 24 ತರಬೇತಿ ಪಡೆದ ‘ಅರ್ಚಕರನ್ನು’ ದೇವಾಲಯಗಳಲ್ಲಿ ಅರ್ಚಕರನ್ನಾಗಿ ನೇಮಿಸಿದೆ.

ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು, ಹಿಂದೂ ಧಾರ್ಮಿಕ ಮತ್ತು ದತ್ತಿ ಇಲಾಖೆಯ ನೇಮಕಾತಿ ಆದೇಶಗಳನ್ನು 75 ಜನರಿಗೆ ನೀಡಿದ್ದು, ವಿವಿಧ ವರ್ಗಗಳ ಅಡಿಯಲ್ಲಿ 208 ಹುದ್ದೆಗಳಿಗೆ ನೇಮಕಾತಿ ಮಾಡಿದ್ದಾರೆ. ನೇಮಕಾತಿಯಲ್ಲಿ ಔಪಚಾರಿಕವಾಗಿ ತರಬೇತಿ ಪೂರ್ಣಗೊಳಿಸಿದ ವಿವಿಧ ಜಾತಿಯ 24 ಅರ್ಚಕರೂ ಸೇರಿದ್ದಾರೆ.

24 ಮಂದಿ ಆಕಾಂಕ್ಷಿಗಳು ಹಿಂದೂ ದೇವಾಲಯಗಳಲ್ಲಿ ಅರ್ಚಕರಾಗಲು ತರಬೇತಿ ಪಡೆದಿದ್ದಾರೆ, ಇತರ 34 ಮಂದಿ ಇತರ ‘ಪಾಠ ಶಾಲೆಗಳಲ್ಲಿ’ ಅರ್ಚಕ ತರಬೇತಿ ಪೂರ್ಣಗೊಳಿಸಿದ್ದಾರೆ. 208 ನೇಮಕಾತಿಗಳಲ್ಲಿ ಭಟ್ಟಾಚಾರ್ಯರು, ಒಡುವರು, ಪೂಜಾರಿಗಳು, ತಾಂತ್ರಿಕರು ಮತ್ತು ಕಚೇರಿ ಸಹಾಯಕರು ಸೇರಿದ್ದು, ಸೂಕ್ತ ನೇಮಕಾತಿ ಪ್ರಕ್ರಿಯೆಯ ನಂತರ ನೇಮಕಗೊಂಡಿದ್ದಾರೆ ಎಂದು ಸರ್ಕಾರ ಹೇಳಿದೆ.

ಇನ್ನೂ ತಮಿಳುನಾಡಿನಲ್ಲಿ ಅಧಿಕಾರ ವಹಿಸಿಕೊಂಡಿರುವ ಎಂ.ಕೆ.ಸ್ಟಾಲಿನ್ ಕ್ರಾಂತಿಕಾರಿ ಹೆಜ್ಜೆಯನ್ನಿಟ್ಟಿದ್ದು, ಜನರ ದುಡ್ಡಿನಿಂದ ನಡೆಯುವ ದೇವಸ್ಥಾನಗಳಲ್ಲಿ ಅರ್ಚಕರ ಹುದ್ದೆಗೆ ಒಂದೇ ಜಾತಿಯವರನ್ನು ನೇಮಿಸಬೇಕು ಎನ್ನುವ ಸಾಮಾಜಿಕ ಕಟ್ಟಲೆಯನ್ನು ಮುರಿದು, ಎಲ್ಲ ಜಾತಿಯವರೂ ಸಮಾನರಾಗಿದ್ದು ಹಾಗಾಗಿ ಎಲ್ಲ ಜಾತಿಯವರನ್ನು ಅರ್ಚಕ ಹುದ್ದೆಗೆ ನೇಮಿಸುವ ಮಹತ್ವದ ಮಾದರಿ ಹೆಜ್ಜೆಯನ್ನಿಟ್ಟಿದೆ.

ಇನ್ನಷ್ಟು ಸುದ್ದಿಗಳು…

“ಬಿಜೆಪಿಯು ದಲಿತರ ಪರವಾಗಿದೆ ಅನ್ನಿಸುತ್ತಿದೆ” | “ಸದಾಶಿವ ಆಯೋಗ ವರದಿ ಜಾರಿ ಮಾಡಿ”

ಹಿಂದಿನ ನಿಯಮಗಳೇ ಮುಂದುವರಿಕೆ: ಪಾಸಿವಿಟಿ ಕಡಿಮೆ ಇರುವ ಜಿಲ್ಲೆಗಳಲ್ಲಿ ಶಾಲೆ ತೆರೆಯಲು ನಿರ್ಧಾರ | ಸಿಎಂ ಬೊಮ್ಮಾಯಿ

ಭೇಟಿಗೆ ಅವಕಾಶ ನೀಡಿರಲಿಲ್ಲ ಅದಕ್ಕಾಗಿ ಶಾಸಕ ಸತೀಶ್ ರೆಡ್ಡಿ ಕಾರಿಗೆ ಬೆಂಕಿ ಹಚ್ಚಿದೆವು ಎಂದ ಆರೋಪಿಗಳು

ಮಕ್ಕಳಾಗುತ್ತಿಲ್ಲ, ಪರಿಹಾರ ತಿಳಿಸಿ ಎಂದು ಬಂದ ಮಹಿಳೆಯನ್ನು ಮಂಚಕ್ಕೆ ಕರೆದ ಮಾಟಗಾರ!

ಬಿಜೆಪಿ ಕಾರ್ಯಕರ್ತ ಸೇರಿದಂತೆ ಇಬ್ಬರಿಂದ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ!

ಇತ್ತೀಚಿನ ಸುದ್ದಿ