ಬಾಡಿ ಸ್ಪ್ರೇ ಬಳಸದೇ ಬೆವರಿನ ವಾಸನೆಯಿಂದ ಮುಕ್ತಿ ಪಡೆಯುವುದು ಹೇಗೆ? - Mahanayaka
12:23 AM Sunday 22 - December 2024

ಬಾಡಿ ಸ್ಪ್ರೇ ಬಳಸದೇ ಬೆವರಿನ ವಾಸನೆಯಿಂದ ಮುಕ್ತಿ ಪಡೆಯುವುದು ಹೇಗೆ?

tips for reducing body odor
14/08/2021

ಕೆಲವರಿಗೆ ಎಷ್ಟು ಸ್ನಾನ ಮಾಡಿದರೂ ವಿಪರೀತವಾಗಿ ಬೆವರುತ್ತದೆ. ಬೆವರಿದರೆ ದೇಹ ದುರ್ನಾತ ಬೀರುವುದು ಸಹಜವಾಗಿದೆ. ಇದರಿಂದಾಗಿ ಸಾರ್ವಜನಿಕ ಪ್ರದೇಶಗಳಲ್ಲಿ ಬಹಳಷ್ಟು ಬಾರಿ ಮುಜುಗರಕ್ಕೊಳಗಾದ ಪರಿಸ್ಥಿತಿಗಳು ಕೂಡ ಬರುತ್ತವೆ. ಹಾಗಾಗಿ ಬಹಳಷ್ಟು ಜನರು ಬಾಡಿ ಸ್ಪ್ರೇಗಳ ಮೊರೆ ಹೋಗುತ್ತಾರೆ. ಇದಕ್ಕಾಗಿ ಪ್ರತಿ ವಾರ ನೂರಾರು ಸಾವಿರಾರು ರೂಪಾಯಿಗಳನ್ನು ಖರ್ಚು ಮಾಡುವವರು ಕೂಡ ಇದ್ದಾರೆ. ಆದರೆ ಬಾಡಿ ಸ್ಪ್ರೇಗಳನ್ನು ಬಳಸದೆಯೇ ಬೆವರು ವಾಸನೆಯನ್ನು ತಡೆಯಲು ಸಾಧ್ಯವಿದೆ.

ಬೆವರು ವಾಸನೆಗೆ ಬಾಡಿ ಸ್ಪ್ರೇ ಬಳಸುವವರ ಸಂಖ್ಯೆ ಇತ್ತೀಚಿನ ದಿನಗಳಲ್ಲಿ ಹೆಚ್ಚಳವಾಗಿದೆ. ಟಿವಿಗಳಲ್ಲಿ ಬರುವ ಅತಿರೇಕದ ಜಾಹೀರಾತುಗಳನ್ನು ನೋಡಿ ಬಹಳಷ್ಟು ಜನರು ಮೋಸ ಹೋಗುವುದು ಕೂಡ ಇದೆ. ಬಾಡಿ ಸ್ಪ್ರೇ ಹಾಕಿದ ತಕ್ಷಣವೇ ಯುವಕರ ಸುತ್ತ ಯುವತಿಯರು ಸುತ್ತುವ ಧಾರಾವಾಹಿಗಳು, ಯುವಕರನ್ನು ಸೆಳೆಯುತ್ತವೆ. ಆದರೆ ಬಾಡಿ ಸ್ಪ್ರೇಯನ್ನು ಯಾವುದರಿಂದ ತಯಾರಿಸುತ್ತಾರೆ ಎನ್ನುವುದನ್ನು ಕೂಡ ಯುವ ಜನರು ಗಮನಿಸುವುದಿಲ್ಲ. ಬಾಡಿ ಸ್ಪ್ರೇಗಳಿಂದ ಬಹಳಷ್ಟು ಬಾರಿ ಚರ್ಮದ ರೋಗಗಳಿಗೀಡಾಗುವ ಸಾಧ್ಯತೆಗಳು ಕೂಡ ಇವೆ ಎನ್ನುವ ಅಭಿಪ್ರಾಯಗಳಿವೆ. ಹಾಗಿದ್ದರೆ ದೇಹದ ಬೆವರಿನ ವಾಸನೆಯಿಂದ ನೈಸರ್ಗಿಕವಾಗಿ ಹೇಗೆ ಮುಕ್ತಿ ಪಡೆಯುವುದು? ಅದಕ್ಕೆ ಇಲ್ಲಿ ಸರಳ ಪರಿಹಾರೋಪಾಯಗಳಿವೆ.

ನಾಲ್ಕು ಚಮಚ ರೋಸ್ ವಾಟರ್ ಹಾಗೂ ನಾಲ್ಕು ಚಮಚ ಲಿಂಬೆ ರಸವನ್ನು ಬೆರೆಸಿಕೊಂಡು, ಚಿಕ್ಕದಾದ ಸ್ಪ್ರೇ ಬಾಟಲಿಗೆ ತುಂಬಿಸಬೇಕು. ಬಳಿಕ ನಿಮಗೆ ಹೆಚ್ಚಾಗಿ ಯಾವ ಭಾಗಗಳಲ್ಲಿ ಬೆವರುತ್ತದೋ ಆ ಭಾಗಗಳಿಗೆ ಸ್ಪ್ರೇ ಮಾಡಬೇಕು. ಕಂಕುಳ ಸೇರಿದಂತೆ ಮುಚ್ಚುವಂತಹ ದೇಹದ ಭಾಗಗಳಲ್ಲಿ ಹೆಚ್ಚಾಗಿ ಬೆವರು ವಾಸನೆ ಬರುವುದರಿಂದ ಆ ಭಾಗಗಳಿಗೆ ಸ್ಪ್ರೇ ಮಾಡಬೇಕು. ಅದು ಒಣಗಿದ ಬಳಿಕ ಶರ್ಟ್ ಧರಿಸಬೇಕು. ಇದು ನಿಮ್ಮ ದೇಹವನ್ನು ಬೆವರು ವಾಸನೆಯಿಂದ ಬಹಳಷ್ಟು ಕಾಲಗಳವರೆಗೆ ಮುಕ್ತವಾಗಿಸುತ್ತದೆ.

ಇನ್ನೊಂದು ಬಹಳ ಸುಲಭವಾದ ಪ್ರಯೋಗವನ್ನು ಕೂಡ ಮಾಡಬಹುದಾಗಿದ್ದು,  ಲಿಂಬೆ ಹಣ್ಣಿನ ಒಂದು ಭಾಗವನ್ನು ಕತ್ತರಿಕೊಂಡು ಅದಕ್ಕೆ ಸ್ವಲ್ಪ ಬೇಕಿಂಗ್ ಸೋಡಾವನ್ನು ಹಾಕಿಕೊಳ್ಳಬೇಕು ಬಳಿಕ ಕಂಕುಳ ಭಾಗ ಸೇರಿದಂತೆ ಹೆಚ್ಚಾಗಿ ಬೆವರುವ ಜಾಗಗಳಿಗೆ ಹಚ್ಚಿಕೊಳ್ಳಬೇಕು. ಇದರಿಂದ ಬೆವರಿನ ವಾಸನೆಯಿಂದ ನೀವು ಮುಕ್ತರಾಗಬಹುದು.

ಕೆಲವೊಂದು ಜನರ ಬೆವರಿನ ವಾಸನೆ ಸಹಿಸಲಾರದಷ್ಟು ಹಿಂಸೆ ಸೃಷ್ಟಿಸುತ್ತದೆ. ಅತಿಯಾದ ಬೆವರು ವಾಸನೆ ಇರುವವರು ಚೆನ್ನಾಗಿ ನೀರು ಕುಡಿಯಬೇಕು. ದಿನದಲ್ಲಿ ಕನಿಷ್ಠ ಎರಡು ಬಾರಿ ಸ್ನಾನ ಮಾಡಬೇಕು. ದೇಹವನ್ನು ನೈರ್ಮಲ್ಯವಾಗಿಟ್ಟುಕೊಳ್ಳಬೇಕು. ಯಾವುದೇ ಬಾಡಿ ಸ್ಪ್ರೇಗಳು ಬೆವರು ವಾಸನೆಗೆ ಪರಿಹಾರವಲ್ಲ.

ಇನ್ನಷ್ಟು ಸುದ್ದಿಗಳು…

ಎಲ್ಲಾ ಜಾತಿಯವರೂ ಅರ್ಚಕ ಹುದ್ದೆ ಪಡೆಯಲು ಅರ್ಹರು: ಕ್ರಾಂತಿಕಾರಿ ಹೆಜ್ಜೆಯಿಟ್ಟ ಎಂ.ಕೆ.ಸ್ಟ್ಯಾಲಿನ್

ಮಕ್ಕಳಾಗುತ್ತಿಲ್ಲ, ಪರಿಹಾರ ತಿಳಿಸಿ ಎಂದು ಬಂದ ಮಹಿಳೆಯನ್ನು ಮಂಚಕ್ಕೆ ಕರೆದ ಮಾಟಗಾರ!

ಬಿಗ್ ಬಾಸ್ ಸೀಸನ್ 8 ಮುಗಿದ ಬೆನ್ನಲ್ಲೇ ಮತ್ತೆ 7 ದಿನಗಳವರೆಗೆ ನಡೆಯಲಿದೆ ಬಿಗ್ ಬಾಸ್ ಕಾರ್ಯಕ್ರಮ!

ಪೇರಳೆ ಹಣ್ಣನ್ನು ಹೆಚ್ಚಾಗಿ ಸೇವಿಸುವುದರಿಂದ ಏನಾಗುತ್ತೆ ಗೊತ್ತಾ?

 

ಇತ್ತೀಚಿನ ಸುದ್ದಿ