ಅಫ್ಘಾನಿಸ್ತಾನ ತಾಲಿಬಾನ್ ಉಗ್ರರ ವಶಕ್ಕೆ | ಕಾಬುಲ್ ಗೆ ಪ್ರವೇಶಿಸಿ ವಶಕ್ಕೆ ಪಡೆದುಕೊಂಡ ಉಗ್ರರು
ಕಾಬುಲ್: ತಾಲಿಬಾನ್ ಉಗ್ರರು ಭಾನುವಾರ ಅಫ್ಘಾನಿಸ್ತಾನದ ರಾಜಧಾನಿ ಕಾಬುಲ್ ನ್ನು ಪ್ರವೇಶಿಸಿದ್ದು, ಅಫ್ಘಾನಿಸ್ತಾನವನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಇದೀಗ ಅಫ್ಘಾನಿಸ್ತಾನ ತಾಲಿಬಾನ್ ಉಗ್ರರ ವಶದಲ್ಲಿದ್ದು, ಸದ್ಯ ತಾಲಿಬಾನ್ ಹಾಗೂ ಅಫ್ಘಾನ್ ಅಧಿಕಾರಿಗಳ ಜೊತೆಗೆ ಮಾತುಕತೆ ನಡೆಯುತ್ತಿದ್ದು, ಅಧಿಕಾರ ಹಸ್ತಾಂತರದ ಬಗ್ಗೆ ಮಾತುಕತೆಗಳು ನಡೆಯುತ್ತಿವೆ.
ಅಫ್ಘಾನಿಸ್ತಾನದ ಅಧ್ಯಕ್ಷರ ಪ್ಯಾಲೇಸ್ ಗೆ ಉಗ್ರರು ಲಗ್ಗೆ ಹಾಕಿ ಕಾಬೂಲ್ ತಾಲಿಬಾನ್ ವಶಕ್ಕೆ ಒಳಪಟ್ಟರಿಂದ ರಕ್ತಪಾತವನ್ನು ತಡೆಯುವ ನಿಟ್ಟಿನಲ್ಲಿ ದೇಶ ತೊರೆದಿದ್ದಾಗಿ ಅಫ್ಘಾನಿಸ್ತಾನದ ಅಧ್ಯಕ್ಷ ಅಶ್ರಫ್ ಘನಿ ಹೇಳಿದ್ದಾರೆ. ಅಫ್ಘಾನಿಸ್ತಾನದಿಂದ ಪಲಾಯನ ನಂತರ ಫೇಸ್ ಬುಕ್ ಫೋಸ್ಟ್ ವೊಂದರಲ್ಲಿ ಮೊದಲ ಬಾರಿಗೆ ಪ್ರತಿಕ್ರಿಯಿಸಿರುವ ಅಶ್ರಫ್ ಘನಿ, ಇಂದಿನಿಂದ ಅಫ್ಘಾನಿಸ್ತಾನದ ಜನರ ರಕ್ಷಣೆ, ಗೌರವ ಮತ್ತು ಸಂಪತ್ತಿನ ಹೊಣೆಯನ್ನು ತಾಲಿಬಾನ್ ಹೊರಲಿದೆ ಎಂದು ಹೇಳಿದ್ದಾರೆ.
ರಕ್ತಪಾತ ತಡೆಯುವ ನಿಟ್ಟಿನಲ್ಲಿ ದೇಶ ತೊರೆಯುವುದು ಉತ್ತಮ ಎಂದು ಯೋಚಿಸಿದೆ, ತಾಲಿಬಾನ್‌ಗಳು ಖಡ್ಗ ಮತ್ತು ಬಂದೂಕುಗಳ ತೀರ್ಪನ್ನು ಗೆದ್ದಿದ್ದು, ಈಗ ಅವರು ದೇಶವಾಸಿಗಳ ಗೌರವ, ಸಂಪತ್ತು ಮತ್ತು ಸ್ವಾಭಿಮಾನವನ್ನು ರಕ್ಷಿಸುವ ಹೊಣೆ ಹೊತ್ತಿದ್ದಾರೆ. ಇತಿಹಾಸದಲ್ಲಿ ಎಂದಿಗೂ ಒಣ ಅಧಿಕಾರವನ್ನು ಬೇರೆ ಯಾರಿಗೂ ನ್ಯಾಯಸಮ್ಮತವಾಗಿ ನೀಡಿಲ್ಲ, ಅದನ್ನು ತಾಲಿಬಾನ್ ಗಳಿಗೆ ನೀಡುವುದಿಲ್ಲ ಎಂದು ಘನಿ ಹೇಳಿದ್ದಾರೆ.
ಇನ್ನಷ್ಟು ಸುದ್ದಿಗಳು…
ಸ್ವಾತಂತ್ರ್ಯ ರಥ ತಡೆದು ಪ್ರತಿಭಟಿಸಿದ ಎಸ್ ಡಿಪಿಐ ಕಾರ್ಯಕರ್ತರು | ಸಾರ್ವರ್ಕರ್ ಫೋಟೋಗೆ ಬಳಸಿದ್ದಕ್ಕೆ ವಿರೋಧ
ಸಿದ್ದರಾಮಯ್ಯನವರ ನಾಲಿಗೆಯಲ್ಲಿ ಉಲ್ಟಾ ಮಚ್ಚೆ ಇದೆ ಎಂದ ಸಿ.ಟಿ.ರವಿ
ಸವರ್ಣೀಯರಿಂದ ಶೋಷಿತರಿಗೆ ಇನ್ನೂ ಸ್ವಾತಂತ್ರ್ಯ ದೊರೆತಿಲ್ಲ | ಅಂಬೇಡ್ಕರ್ ಸೇನೆ
ಭಾರತಕ್ಕೆ ಸ್ವಾತಂತ್ರ್ಯೋತ್ಸವದ ಶುಭಾಶಯ ಕೋರಿದ WWE ಸೂಪರ್ ಸ್ಟಾರ್ ಗಳು
ಧ್ವಜಸ್ತಂಭ ನಿಲ್ಲಿಸುತ್ತಿದ್ದ ವೇಳೆ ಮೂವರ ಮೇಲೆ ಪ್ರವಹಿಸಿದ ವಿದ್ಯುತ್: ಓರ್ವ ಬಾಲಕನ ದಾರುಣ ಸಾವು