ಚಲಿಸುತ್ತಿದ್ದ ಬಸ್ಸಿನ ಮೇಲೆ ಬಿದ್ದ ತೆಂಗಿನ ಮರ | ಕ್ಷಣ ಮಾತ್ರದಲ್ಲೇ ಮರದಲ್ಲಿದ್ದ ಎಳೆನೀರು ಖಾಲಿ!
ಮಂಗಳೂರು: ಚಲಿಸುತ್ತಿದ್ದ ಬಸ್ಸಿನ ಮೇಲೆ ತೆಂಗಿನ ಮರವೊಂದು ಬಿದ್ದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ನಗರದ ಮಲ್ಲಿಕಟ್ಟೆ ವೃತ್ತದ ಬಳಿಯಲ್ಲಿ ನಡೆದಿದ್ದು, ಅದೃಷ್ಟವಶಾತ್ ಯಾವುದೇ ಅನಾಹುತಗಳು ಸಂಭವಿಸದೇ ಬಸ್ ನಲ್ಲಿದ್ದ ಪ್ರಯಾಣಿಕರೆಲ್ಲರೂ ಸುರಕ್ಷಿತವಾಗಿದ್ದಾರೆ.
ಇಂದು ಬೆಳಗ್ಗೆ ಸುಮಾರು 10 ಗಂಟೆಯ ವೇಳೆಗೆ ಚಲಿಸುತ್ತಿದ್ದ 15 ನಂಬರ್ ನ ಸಿಟಿ ಬಸ್ ಮೇಲೆ ತೆಂಗಿನ ಮರ ಬಿದ್ದಿದೆ. ಬಸ್ ನ ಹಿಂಬದಿಗೆ ಮರ ಬಿದ್ದುದರಿಂದಾಗಿ ನಡೆಯಬಹುದಿದ್ದ ಅಪಾಯ ತಪ್ಪಿದೆ ಎಂದು ತಿಳಿದು ಬಂದಿದೆ. ಘಟನೆಯ ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ಆಗಮಿಸಿ ಮರವನ್ನು ತೆರವುಗೊಳಿಸಿದ್ದಾರೆ.
ಮರವು ಸಮೀಪದ ವಿದ್ಯುತ್ ತಂತಿಗೆ ಬಿದ್ದು, ಬಳಿಕ ಬಸ್ ಗೆ ತಾಗಿದೆ. ಬಸ್ ನ ಮೇಲೆ ವಿದ್ಯುತ್ ಪ್ರವಹಿಸಿದ್ದರೆ, ಭಾರೀ ಪ್ರಮಾಣದ ಅಪಾಯ ಉಂಟಾಗುವ ಸಾಧ್ಯತೆ ಇತ್ತು ಎನ್ನಲಾಗಿದೆ. ಘಟನಾ ಸ್ಥಳಕ್ಕೆ ಮಾಜಿ ಎಂಎಲ್ ಸಿ ಐವನ್ ಡಿಸೋಜ ಹಾಗೂ ಮಾಜಿ ಮೇಯರ್ ಶಶಿಧರ್ ಹೆಗ್ಡೆ ಭೇಟಿ ನೀಡಿದರು.
ತೆಂಗಿನ ಮರ ಬಿದ್ದ ಪರಿಣಾಮ ಬಸ್ ಗೆ ಹಾಗೂ ಸಮೀಪದ ವಿದ್ಯುತ್ ತಂತಿಗಳಿಗೂ ಹಾನಿಯುಂಟಾಗಿದೆ. ಇನ್ನೂ ಬಿದ್ದ ಮರದಲ್ಲಿದ್ದ ಎಳೆ ನೀರನ್ನು ಕೆಲವೇ ಕ್ಷಣಗಳಲ್ಲಿ ಸಾರ್ವಜನಿಕರು ಕಿತ್ತುಕೊಂಡು ಹೋಗಿರುವ ದೃಶ್ಯ ಕೂಡ ಕಂಡು ಬಂತು.
ಇನ್ನಷ್ಟು ಸುದ್ದಿಗಳು…
ದೇಶದಲ್ಲಿ ಕೊರೊನಾ ಸೋಂಕಿನ ಪ್ರಮಾಣ ಇಳಿಕೆ | ಸಕ್ರಿಯ ಪ್ರಕರಣಗಳ ಸಂಖ್ಯೆಯೂ ಇಳಿಕೆ
ಸಣ್ಣ ಮೀನುಗಳು ರುಚಿಗೆ ಮಾತ್ರವಲ್ಲ, ಆರೋಗ್ಯಕ್ಕೂ ಉತ್ತಮ
ಮಂಗಳೂರಿನಲ್ಲಿ 1,725 ಕೆ.ಜಿ. ಅಪಾಯಕಾರಿ ಸ್ಫೋಟಕ ಪತ್ತೆ! | ಆರೋಪಿ ಅರೆಸ್ಟ್
ಗದ್ದೆಗಿಳಿದು ನಾಟಿ ಮಾಡಿದ ಶೋಭಾ ಕರಂದ್ಲಾಜೆ | ಸಾಕು ಬಾರಕ್ಕೋ… ಎಂದ ಕಾರ್ಯಕರ್ತರು!
ಸವರ್ಣೀಯರಿಂದ ಶೋಷಿತರಿಗೆ ಇನ್ನೂ ಸ್ವಾತಂತ್ರ್ಯ ದೊರೆತಿಲ್ಲ | ಅಂಬೇಡ್ಕರ್ ಸೇನೆ