ತನ್ನ ಬಗ್ಗೆ ತಾನೇ ಪುಸ್ತಕ ಬರೆದುಕೊಂಡು ಸ್ವಾತಂತ್ರ್ಯ ಹೋರಾಟಗಾರನಾದ ಸಾರ್ವರ್ಕರ್ | ಶಾಫಿ ಬೆಳ್ಳಾರೆ - Mahanayaka
5:16 PM Wednesday 11 - December 2024

ತನ್ನ ಬಗ್ಗೆ ತಾನೇ ಪುಸ್ತಕ ಬರೆದುಕೊಂಡು ಸ್ವಾತಂತ್ರ್ಯ ಹೋರಾಟಗಾರನಾದ ಸಾರ್ವರ್ಕರ್ | ಶಾಫಿ ಬೆಳ್ಳಾರೆ

shafi bellare sdpi
18/08/2021

ಪುತ್ತೂರು: ಕಡಬ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ನಡೆದ ಸ್ವಾತಂತ್ರ್ಯ ರಥಕ್ಕೆ ಅಡ್ಡಿಪಡಿಸಲಾಗಿದೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ಪುತ್ತೂರು ಪ್ರತಿಭಟನಾ ಕೇಂದ್ರವಾಗಿ ಪರಿಣಮಿಸಿದ್ದು, ನಿನ್ನೆ ಬಿಜೆಪಿ ಪರ ಸಂಘಟನೆಗಳು ಪ್ರತಿಭಟನೆ ನಡೆಸಿದ್ದು, ಇಂದು ಪುತ್ತೂರಿನ ದರ್ಬೆ ವೃತ್ತದಲ್ಲಿ ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ(ಎಸ್ ಡಿಪಿಐ) ಪ್ರತಿಭಟನೆ ನಡೆಸಿತು.

ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಎಸ್ ಡಿಪಿಐ ಮುಖಂಡ ಶಾಫಿ ಬೆಳ್ಳಾರೆ. ನಿನ್ನೆಯ ಪ್ರತಿಭಟನೆಯಲ್ಲಿ ಸಂಘಪರಿವಾರದ ಕಾರ್ಯಕರ್ತರು ಬಳಸಿದ ಶಬ್ದಗಳನ್ನು ಖಂಡಿಸಿದ್ದು, ಅವರು ಹೇಳಿರುವ ಪ್ರಾಣಿಗೆ ಬೊಗಳಲು ಮಾತ್ರವೇ ಗೊತ್ತಿರುವುದು. ಅದರ ಬಾಯಿಯಿಂದ ಸಂಗೀತವನ್ನು ನಿರೀಕ್ಷೆ ಮಾಡುವುದು ತಪ್ಪಾಗುತ್ತದೆ ಎಂದು ತಿರುಗೇಟು ನೀಡಿದರು.

ಕಬಕ ಗ್ರಾಪಂ ಕಾರ್ಯಕ್ರಮದಲ್ಲಿ ನಡೆದ ಒಂದು ಸಣ್ಣ ಘಟನೆಯನ್ನು ಮುಂದಿಟ್ಟುಕೊಂಡು, ಪುತ್ತೂರು ನಗರದವರೆಗೆ ಈ ರಥವನ್ನು ತಂದಿರುವುದರ ಉದ್ದೇಶ ಎನ್ನುವುದನ್ನು ಅವರು ಸ್ಪಷ್ಟಪಡಿಸಬೇಕಿದೆ ಎಂದ ಅವರು,  ಒಬ್ಬ ಪಿಡಿಓ, ಪಂಚಾಯತ್ ಅಧಿಕಾರಿಗೆ ಆ ಪಂಚಾಯತ್ ವ್ಯಾಪ್ತಿಯನ್ನು ಬಿಟ್ಟು ಉಳಿದ ಭಾಗಗಳಿಗೆ ಬರುವ ಅಧಿಕಾರವನ್ನು ಕೊಟ್ಟವರು ಯಾರು?  ನಾವು ಈ ವಿಚಾರವನ್ನು ಖಂಡಿತವಾಗಿಯೂ ಬಿಡುವುದಿಲ್ಲ. ಆ ಪಂಚಾಯತ್ ಅಧಿಕಾರಿಯ ವಿರುದ್ಧ ಕಾನೂನು ಹೋರಾಟವನ್ನು ಖಂಡಿತವಾಗಿಯೂ ಮಾಡುತ್ತೇವೆ ಎಂದು ಹೇಳಿದರು.

ಇವರು ಸಾರ್ವರ್ಕರ್ ನ್ನು ವೀರ ಎಂದು ಹೊಗಳಲು ಬರುತ್ತಿದ್ದಾರೆ. ಸ್ವಾತಂತ್ರ್ಯ ಹೋರಾಟಕ್ಕಾಗಿ ಸಾರ್ವರ್ಕರ್ ಮಾಡಿದ್ದೇನು? ಅದನ್ನು ಮೊದಲು ಹೇಳಿ. ನಾವು ಕೂಡ ಇತಿಹಾಸವನ್ನು ಓದಿದ್ದೇವೆ. ಸಾರ್ವರ್ಕರ್ ಬಗ್ಗೆ ಪುಸ್ತಕಗಳನ್ನು ನೋಡಿದರೆ, ಸಾರ್ವರ್ಕರ್ ಬಗ್ಗೆ ಮೊದಲ ಬಾರಿಗೆ ಪುಸ್ತಕವನ್ನು ಬರೆದದ್ದು ಸಾರ್ವರ್ಕರ್. ಸ್ವತಃ ತಾನೇ ಬರೆದ ಪುಸ್ತಕದಲ್ಲಿ ಸಾರ್ವರ್ಕರ್ ತಾನೊಬ್ಬ ಸ್ವಾತಂತ್ರ್ಯ ಹೋರಾಟಗಾರ ಎಂದು ಹೇಳಿಕೊಂಡಿದ್ದಾರೆ ಎಂದು ಅವರು ಹೇಳಿದರು.

ಸಾರ್ವರ್ಕರ್ ನ ನಿಜವಾದ ಇತಿಹಾಸ ತೆಗೆದು ನೋಡಿದರೆ, ಮೊದಲು ಲಂಡನ್ ನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ ಸಂದರ್ಭದಲ್ಲಿ ಬ್ರಿಟೀಷರ ವಿರುದ್ಧವಾಗಿ ಒಂದು ಪುಸ್ತಕವನ್ನು ಬರೆಯುತ್ತಾರೆ. ಬ್ರಿಟೀಷರ ವಿರುದ್ಧ ಪುಸ್ತಕ ಬರೆದ ಕಾರಣಕ್ಕೆ  25 ವರ್ಷಗಳ ಜೀವಾವಧಿ ಶಿಕ್ಷೆಯನ್ನು ಸಾರ್ವರ್ಕರ್ ಗೆ ವಿಧಿಸಲಾಗುತ್ತದೆ. ಅಲ್ಲಿಂದ ಅವರನ್ನು ಅಂಡಮಾನ್ ಜೈಲಿಗೆ ಸ್ಥಳಾಂತರ ಮಾಡಲಾಗುತ್ತದೆ. ಈ ಸಂದರ್ಭದಲ್ಲಿ ಸುಮಾರು 6 ಬಾರಿ ಬ್ರಿಟೀಷರಿಗೆ ಕ್ಷಮಾಪನಾ ಪತ್ರಗಳನ್ನು ಬರೆದು, ನನ್ನನ್ನು ಬಿಡುಗಡೆ ಮಾಡಿದರೆ, ನಾನು ಮಾತ್ರವಲ್ಲ, ನಮ್ಮ ಇಡೀ ಸಮಾಜವನ್ನೇ ಸ್ವಾತಂತ್ರ್ಯ ಹೋರಾಟದಿಂದ ನಿರ್ವೀರ್ಯರನ್ನಾಗಿ ಮಾಡುತ್ತೇನೆ ಎಂದು ಹೇಳಿದ್ದಾರೆ. ಬ್ರಿಟೀಷರಿಗೆ ಕ್ಷಮಾಪಣೆ ಪತ್ರ ಬರೆದ ಬಳಿಕ ಜೈಲಿನಿಂದ ಹೊರ ಬಂದ ಅವರು ಆ ಬಳಿಕ ಬ್ರಿಟೀಷರ ಪರವಾಗಿ ಕಾರ್ಯವನ್ನು ನಿರ್ವಹಿಸಿದ್ದಾರೆ ಎನ್ನುವ ವಾಸ್ತವವನ್ನು ನಾವು ಅರ್ಥ ಮಾಡಿಕೊಳ್ಳಬೇಕಿದೆ. ಈ ಕಾರಣಕ್ಕಾಗಿಯೇ ನಾವು ಸಾರ್ವರ್ಕರ್ ಫೋಟೋಗೆ ವಿರೋಧ ವ್ಯಕ್ತಪಡಿಸಿದ್ದೇವೆ ಎಂದು ಅವರು ಸ್ಪಷ್ಟಪಡಿಸಿದರು.

ಸಾರ್ವರ್ಕರ್ ವಿಚಾರವಾಗಿ ಬಿಜೆಪಿ ಪರ ಸಂಘಟನೆಗಳು ಹಾಗೂ ಎಸ್ ಡಿಪಿಐ ನಡುವೆ ನಡೆಯುತ್ತಿರುವ ತಿಕ್ಕಾಟದ ಹಿನ್ನೆಲೆಯಲ್ಲಿ ಎಸ್ ಡಿಪಿಐ ಪ್ರತಿಭಟನೆಯ ಸಂದರ್ಭದಲ್ಲಿ ಬಿಗು ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು.  ಪ್ರತಿಭಟನಾ ಸ್ಥಳಕ್ಕೆ ಸಹಾಯಕ ಆಯುಕ್ತ ಡಾ.ಯತೀಶ್ ಉಳ್ಳಾಲ್ ಅವರು ಭೇಟಿ ನೀಡಿದ್ದಾರೆ. ಡಿವೈಎಸ್ ಪಿ ಡಾ.ಗಾನಾ ಪಿ. ಕುಮಾರ್ ನೇತೃತ್ವದಲ್ಲಿ ಭದ್ರತೆ ಒದಗಿಸಲಾಗಿತ್ತು.

ಇನ್ನಷ್ಟು ಸುದ್ದಿಗಳು…

ಸಾರ್ವರ್ಕರ್ ಗಲಾಟೆ: ಎಸ್ ಡಿಪಿಐ ಮತ್ತು ಬಿಜೆಪಿಯ ಒಳ ಒಪ್ಪಂದದ ಕಾರ್ಯಕ್ರಮ | ಹಿಂದೂ ಮಹಾಸಭಾ ಆಕ್ರೋಶ

ಸ್ವಾತಂತ್ರ್ಯ ರಥಕ್ಕೆ ಅಡ್ಡಿ ಪ್ರಕರಣ: ಬಂಧಿತ ಮೂವರು ಆರೋಪಿಗಳಿಗೆ ಜಾಮೀನು ಮಂಜೂರು

ವೀರ ಸಾರ್ವರ್ಕರ್ ರಥಯಾತ್ರೆ ನಡೆಸುತ್ತೇವೆ ತಾಕತ್ ಇದ್ದರೆ ತಡೆಯಿರಿ | ಎಸ್ ಡಿಪಿಐಗೆ ಹಿಂದುತ್ವ ಸಂಘಟನೆಗಳ ಸವಾಲು

ಗಲಭೆ ಸೃಷ್ಟಿಸಲು ಮುಂದಾದರೆ, ಸಂವಿಧಾನ ಬದ್ಧವಾಗಿ ತಡೆಯಲು ಸಿದ್ಧ | ಸಂಘಪರಿವಾರಕ್ಕೆ ಪಿಎಫ್ ಐ ತಿರುಗೇಟು

ಇತ್ತೀಚಿನ ಸುದ್ದಿ