ಇಬ್ಬರು ಅಂಗಾಂಗ ದಾನಿಗಳ ದಾನದಿಂದ 14 ಮಂದಿಯ ಪ್ರಾಣ ಉಳಿಯಿತು - Mahanayaka
11:12 PM Wednesday 11 - December 2024

ಇಬ್ಬರು ಅಂಗಾಂಗ ದಾನಿಗಳ ದಾನದಿಂದ 14 ಮಂದಿಯ ಪ್ರಾಣ ಉಳಿಯಿತು

lorence and shobha
20/08/2021

ಮೈಸೂರು:  ಅಪಘಾತದಲ್ಲಿ ಮೆದುಳು ನಿಷ್ಕ್ರಿಯಗೊಂಡಿದ್ದ ಇಬ್ಬರ ಅಂಗಾಂಗಗಳನ್ನು ದಾನ ಮಾಡಲಾಗಿದ್ದು, ಈ ಇಬ್ಬರ ಅಂಗಾಂಗ ದಾನದಿಂದ ಒಟ್ಟು 14 ಮಂದಿಯ ಜೀವವನ್ನು ಉಳಿಸಲಾಗಿದ್ದು, ಅಪಘಾತಕ್ಕೀಡಾದವರು ತಮ್ಮ ಜೀವನದ ಕೊನೆಯ ಘಳಿಗೆಯಲ್ಲಿ 14 ಮಂದಿಯ ಜೀವನಕ್ಕೆ ಬೆಳಕಾಗಿದ್ದಾರೆ.

ಹುಣಸೂರು ಮೂಲದ 40 ವರ್ಷ ವಯಸ್ಸಿನ ಲಾರೆನ್ಸ್ ಹಾಗೂ ಕುಶಾಲ ನಗರ ಮೂಲದ 48 ವರ್ಷ ವಯಸ್ಸಿನ ಶೋಭಾ ಅವರು ಅಂಗಾಂಗ ದಾನದ ಮೂಲಕ ಜೀವನದಲ್ಲಿ ಸಾರ್ಥಕತೆ ಮೆರೆದಿದ್ದಾರೆ. ಇವರ ಕುಟುಂಬಸ್ಥರು ತಮ್ಮ ತೀವ್ರ ದುಃಖದ ನಡುವೆಯೂ ತೆಗೆದುಕೊಂಡ ಗಟ್ಟಿ ನಿರ್ಧಾರದಿಂದಾಗಿ 14 ಜೀವಗಳಿಗೆ ಆಸರೆಯಾಗಿದ್ದಾರೆ.

ಇಬ್ಬರು ಅಂಗಾಂಗ ದಾನಿಗಳ ಪೈಕಿ ಲಾರೆನ್ಸ್ ಅವರು ಆಗಸ್ಟ್ 16ರಂದು ರಸ್ತೆ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡು ಮೆದುಳು ನಿಷ್ಕ್ರಿಯಗೊಂಡಿತ್ತು. ಈ ಹಿನ್ನೆಲೆಯಲ್ಲಿ ಕುಟುಂಬಸ್ಥರು ಅಂಗಾಂಗ ದಾನಕ್ಕೆ ಮುಂದಾಗಿದ್ದರು.  ಇನ್ನೂ ಕುಶಾಲನಗರದ ಶೋಭಾ ಎಂಬವರು ಮೆದುಳಿನ ರಕ್ತಸ್ರಾವದಿಂದ ಬಳಲುತ್ತಿದ್ದರು. ಹೀಗಾಗಿ ಅವರ ಅಂಗಾಂಗ ದಾನಕ್ಕೆ ಕುಟುಂಬಸ್ಥರು ಮುಂದಾಗಿದ್ದರು.

ಈ ಇಬ್ಬರು ದಾನಿಗಳು 4 ಮೂತ್ರಪಿಂಡ, 2 ಲಿವರ್, 4 ಹೃದಯದ ಕವಾಟ, 4 ಕಾರ್ನಿಯಗಳನ್ನು ದಾನ ಮಾಡಿದ್ದಾರೆ. ಈ ಮೂಲಕವಾಗಿ ಅಂಗಾಂಗ ವೈಫಲ್ಯದಿಂದ ಬಳಲುತ್ತಿದ್ದ ಒಟ್ಟು 14 ಮಂದಿಯ ಪ್ರಾಣವನ್ನು ಉಳಿಸಿದ್ದಾರೆ. ಈ ಮೂಲಕ ಜೀವನದಲ್ಲಿ ಸಾರ್ಥಕತೆ ಮೆರೆದಿದ್ದಾರೆ.

ಇನ್ನಷ್ಟು ಸುದ್ದಿಗಳು…

ಪೆಟ್ರೋಲ್ ಬೆಲೆ ಏರಿಕೆ ಬಗ್ಗೆ ಪ್ರಶ್ನಿಸಿದ್ದಕ್ಕೆ ಅಫ್ಘಾನಿಸ್ತಾನಕ್ಕೆ ಹೋಗಿ ಎಂದ ಬಿಜೆಪಿ ನಾಯಕ!

ಮೂರನೇ ಅಲೆ ತಡೆಗಟ್ಟಲು ಕೋವಿಡ್ ಪರೀಕ್ಷೆ ಹೆಚ್ಚಿಸಿ: ಸಚಿವ ಡಾ.ಕೆ.ಸುಧಾಕರ್

ವಿಮಾನದಿಂದ ಬಿದ್ದ ಅಫ್ಘಾನ್ ನ ಇಬ್ಬರು ನಾಗರಿಕರ ಸಾವು ಎಷ್ಟೊಂದು ಭೀಕರವಾಗಿತ್ತು ಗೊತ್ತೆ? | ಸಾವನ್ನು ಕಣ್ಣಾರೆ ಕಂಡವರು ಹೇಳಿದ್ದೇನು?

ಬಿಗ್ ಬಾಸ್ ನಿಂದ ಹೊರ ಬಂದ ತಕ್ಷಣವೇ ನಟಿಯ ಬೆಡ್ ರೂಂ ದೃಶ್ಯ ವೈರಲ್ ! | ನಟಿಯ ಪ್ರತಿಕ್ರಿಯೆ ಏನು?

ತನ್ನ ಬಯಕೆ ಈಡೇರಲಿಲ್ಲ ಎಂದು ಪತ್ನಿಯ ಮೇಲೆ ಬಿಸಿ ನೀರು ಎರಚಿದ ಪಾಪಿ ಪತಿ!

ಅಫ್ಘಾನಿಸ್ತಾನದಲ್ಲಿ ಸಿಲುಕಿದ ಕರ್ನಾಟಕ ಮೂಲದ ಇಬ್ಬರು ಕ್ರೈಸ್ತ ಧರ್ಮಗುರುಗಳು!

ಇತ್ತೀಚಿನ ಸುದ್ದಿ