ಹೊಟ್ಟೆಯ ಕೊಬ್ಬನ್ನು ಅತ್ಯಂತ ಸುಲಭವಾಗಿ ಕರಗಿಸುವುದು ಹೇಗೆ ಗೊತ್ತಾ?
ಪುರುಷರೇ ಆಗಲಿ, ಮಹಿಳೆಯರೇ ತೆಳ್ಳಗೆ ಕಾಣಬೇಕು ಎಂದು ಬಯಸುತ್ತಾರೆ. ಅದಕ್ಕಾಗಿ ಊಟ ಬಿಡುವುದು, ನಾನಾ ರೀತಿಯ ಮದ್ದುಗಳ ಮೊರೆ ಹೋಗುವುದು ಮೊದಲಾದ ಕಸರತ್ತುಗಳನ್ನು ಮಾಡುತ್ತಲೇ ಇರುತ್ತಾರೆ. ಆದರೆ, ಮನುಷ್ಯನ ಎಲ್ಲ ಸಮಸ್ಯೆಗಳಿಗೂ ಮೂಲ ಆತನ ಆಹಾರವೇ ಆಗಿರುತ್ತದೆ. ನಮ್ಮ ಆಹಾರವೇ ನಮ್ಮ ಆರೋಗ್ಯದ ಮುಖ್ಯ ಗುಟ್ಟಾಗಿದೆ.
ನಾವು ತೆಳ್ಳಗಾಗಬೇಕಾದರೆ, ಮೊದಲು ನಮ್ಮ ಆಹಾರ ಕ್ರಮವನ್ನು ಸರಿಪಡಿಸಿಕೊಳ್ಳಬೇಕು. ಆಹಾರವನ್ನು ಬಹಳ ಎಚ್ಚರಿಕೆಯಿಂದ ಸೇವಿಸಬೇಕು. ರಾತ್ರಿ ವೇಳೆ ಕೊಲೆಸ್ಟ್ರಾಲ್ ಯುಕ್ತ ಆಹಾರವನ್ನು ಸೇವಿಸುವುದನ್ನು ಮೊದಲು ಬಿಡಬೇಕು. ಸಿಹಿ ತಿಂಡಿ, ಐಸ್ ಕ್ರೀಂ ಅಂತೂ ರಾತ್ರಿ ಮಲಗುವ ಮೊದಲು ತಿನ್ನಲೇ ಬಾರದು. ಐಸ್ ಕ್ರೀಂ ರಾತ್ರಿ ವೇಳೆ ತಿನ್ನುವುದರಿಂದ ನಮ್ಮ ದೇಹದಲ್ಲಿ ಕೊಬ್ಬು ಶೇಖರಣೆಯಾಗುತ್ತದೆ. ಪಿಜ್ಜಾ ಮತ್ತು ಬರ್ಗರ್ ನಂತಹ ಆಹಾರವನ್ನು ದೂರವಿಡಬೇಕು.
ರಾತ್ರಿ ವೇಳೆ ನೂಡಲ್ಸ್ ನಂತಹ ಆಹಾರವನ್ನು ತಿನ್ನಬಾರದು. ಇಂತಹ ಆಹಾರಗಳಿಂದ ದೂರವಿದ್ದರೆ ಅದು ಬಹಳಷ್ಟು ಉತ್ತಮವಾಗಿದೆ. ಇಂತಹ ಆಹಾರಗಳು ನಮ್ಮ ದೇಹದ ಆರೋಗ್ಯಕ್ಕೆ ಹಾನಿಕಾರಕವಾಗಿದ್ದು, ಸ್ಥೂಲ ಕಾಯತೆ ಮತ್ತು ಅಧಿಕ ಕೊಲೆಸ್ಟ್ರಾಲ್ ಗಳು ನಮ್ಮ ದೇಹದಲ್ಲಿ ಶೇಖರಣೆಯಾಗಲು ಕಾರಣವಾಗುತ್ತದೆ.
ರಾತ್ರಿ 7 ಗಂಟೆಗೆ ಮೊದಲು ಊಟ ಮಾಡುವುದು ಉತ್ತಮವಾಗಿದೆ. ಇದು ಸಾಧ್ಯವಾಗದಿದ್ದರೆ, ನಾವು ಮಲಗುವುದಕ್ಕೂ ಎರಡು ಗಂಟೆಗಳ ಮೊದಲು ಆಹಾರವನ್ನು ಸೇವಿಸುವುದು ಉತ್ತಮ. ಊಟ ಮಾಡಿದ ತಕ್ಷಣವೇ ನಿದ್ದೆ ಮಾಡುವುದು ಒಳ್ಳೆಯದ್ದಲ್ಲ. ಹಾಗೆಯೇ ರಾತ್ರಿ ವೇಳೆ ಊಟ ಕಡಿಮೆ ಪ್ರಮಾಣದಲ್ಲಿರಲಿ. ರಾತ್ರಿ ವೇಳೆ ಹೆಚ್ಚು ಆಹಾರ ಸೇವಿಸುವುದು ಆರೋಗ್ಯದ ದೃಷ್ಟಿಯಲ್ಲಿ ಸರಿಯಲ್ಲ.
ಇನ್ನಷ್ಟು ಸುದ್ದಿಗಳು…
ನೋ ಪಾರ್ಕಿಂಗ್ ನಲ್ಲಿದ್ದ ಸವಾರ ಸಹಿತ ಬೈಕ್ ನ್ನು ಹೊತ್ತೊಯ್ದ ಟ್ರಾಫಿಕ್ ಪೊಲೀಸರು!
ಕೊವಿಡ್ ಲಸಿಕೆ ಪಡೆದು 20 ದಿನಗಳಲ್ಲಿ ಈ ಲಕ್ಷಣಗಳು ಕಂಡು ಬಂದರೆ ನಿರ್ಲಕ್ಷಿಸದಿರಿ!
ನರ್ಸ್ ನ ನಗ್ನ ಚಿತ್ರ ತೆಗೆದು ಲೈಂಗಿಕ ಕ್ರಿಯೆ ನಡೆಸಲು ಬ್ಲ್ಯಾಕ್ ಮೇಲ್ | ವೈದ್ಯನ ವಿರುದ್ಧ ದೂರು
ಲೈಂಗಿಕ ಬಯಕೆ ಈಡೇರಿಸಲು ಹೋಗುತ್ತಿದ್ದ ಪುರುಷರಿಗೆ ಬಿಗ್ ಶಾಕ್ ನೀಡುತ್ತಿದ್ದ ಮಹಿಳೆಯರು !