ದಲಿತ ಕೂಲಿ ಕಾರ್ಮಿಕನ ಮೇಲೆ ವಿಷಪೂರಿತ ಆ್ಯಸಿಡ್ ಎರಚಿ, ಮಾರಣಾಂತಿಕ ಹಲ್ಲೆ - Mahanayaka

ದಲಿತ ಕೂಲಿ ಕಾರ್ಮಿಕನ ಮೇಲೆ ವಿಷಪೂರಿತ ಆ್ಯಸಿಡ್ ಎರಚಿ, ಮಾರಣಾಂತಿಕ ಹಲ್ಲೆ

udupi crime news
21/08/2021

ಶಂಕರನಾರಾಯಣ: ದಲಿತ ಕೂಲಿ ಕಾರ್ಮಿಕರೊಬ್ಬರ ಮೇಲೆ ಆ್ಯಸಿಡ್ ನಂತಹ ವಿಷಪೂರಿತ ಕೆಮಿಕಲ್ ಎರಚಿ ಮಾರಣಾಂತಿಕ ಹಲ್ಲೆ ನಡೆಸಿರುವ ಅಮಾನವೀಯ ಘಟನೆ ಉಡುಪಿಯ  ಶಂಕರನಾರಾಯಣದ ಹಳ್ಳಿಹೊಳೆ ಗ್ರಾಮದ ಕೊಳೆಕೋಡು ಎಂಬಲ್ಲಿ ನಡೆದಿದೆ.

35 ವರ್ಷ ವಯಸ್ಸಿನ ವೆಂಕಟರಮಣ ಎಂಬವರು ಹಲ್ಲೆಗೊಳಗಾದ ವ್ಯಕ್ತಿಯಾಗಿದ್ದು, ಇವರು ಮುದೂರು ಗ್ರಾಮದ ಶೇಡಿಗುಂಡಿ ನಿವಾಸಿ ಮಂಜು ಅವರ ಪುತ್ರ ಎಂದು ಗುರುತಿಸಲಾಗಿದೆ. ಸದ್ಯ ತೀವ್ರ ಸುಟ್ಟಗಾಯಗಳಿಂದ ವೆಂಕಟರಮಣ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಕೊಳೆಕೋಡುವಿನ ಲಕ್ಷ್ಮೀನಾರಾಯಣ ಚಾತ್ರ ಎಂಬವರ ಅಡಿಕೆ ತೋಟದಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಜಮೀನಿನ ವಿವಾದಕ್ಕೆ ಸಂಬಂಧಿಸಿದಂತೆ ಆರೋಪಿಗಳಾದ ಸುಷ್ಮಾ ಚಾತ್ರ, ಶೈಲಜಾ ಚಾತ್ರ, ಗ್ರೀಷ್ಮ ಚಾತ್ರ, ವಿಜೇಂದ್ರ ಚಾತ್ರ, ಸುಮಾ ವಿಜೇಂದ್ರ ಚಾತ್ರ ಎಂಬವರು ಅಡಿಕೆ ತೋಟಕ್ಕೆ ಪ್ರವೇಶಿಸಿ, ಸಂತ್ರಸ್ತ ವೆಂಕಟರಮಣಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ.

ಬಳಿಕ  ಸುಷ್ಮಾ ಚಾತ್ರ ವಿಷಪೂರಿತ ಕೆಮಿಕಲ್ ನ್ನು ವೆಂಕಟರಮಣ ಮೇಲೆ ಎರಚಿದ್ದಾರೆ.  ಉಳಿದವರು ದೊಣ್ಣೆ ಹಾಗೂ ಕೈಗಳಿಂದ ಹಲ್ಲೆ ನಡೆಸಿ ಕಾಲಿನಿಂದ ತುಳಿದಿದ್ದಾರೆ ಎಂದು ವೆಂಕಟರಮಣ  ಅವರು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ. ಆಸಿಡ್ ಎರಚಿದ ಪರಿಣಾಮ ವೆಂಕಟರಮಣ ಅವರ ಬೆನ್ನಿಗೆ ತೀವ್ರವಾದ ಸುಟ್ಟಗಾಯಗಳಾಗಿವೆ.

ಇನ್ನೂ ಘಟನೆಗೆ ಸಂಬಂಧಿಸಿದಂತೆ ಪೊಲೀಸರು ವಿಜೇಂದ್ರ ಚಾತ್ರ ಎಂಬಾತನನ್ನು ಅರೆಸ್ಟ್ ಮಾಡಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಈ ಘಟನೆ ಸಂಬಂಧ ದಲಿತ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿದ್ದು, ತಕ್ಷಣವೇ ಪ್ರಕರಣಕ್ಕೆ ಸಂಬಂಧಿಸಿದ ಎಲ್ಲ ಆರೋಪಿಗಳನ್ನು ಬಂಧಿಸಿ ಕಾನೂನಿನಡಿಯಲ್ಲಿ ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದೆ.

ಇನ್ನಷ್ಟು ಸುದ್ದಿಗಳು…

ಪಾಕಿಸ್ತಾನ ಪರ ಘೋಷಣೆ: ಮೊಹರಂ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ 6 ಯುವಕರ ಬಂಧನ

“ಐ ಲವ್ ತಾಲಿಬಾನ್” ಎಂದು ಕಮೆಂಟ್ ಮಾಡಿ, ವಿವಾದ ಸೃಷ್ಟಿಸಿದ ಯುವಕ!

ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನದಿಂದ ಇಳಿಯುತ್ತಾರಾ ನಳಿನ್ ಕುಮಾರ್ ಕಟೀಲ್?

ಗುಂಪುಗೂಡಬಾರದು ಎನ್ನುತ್ತಲೇ ಬಿಜೆಪಿ ಜನಾಶೀರ್ವಾದ ಜಾತ್ರೆಯ ಬಗ್ಗೆ ಮೌನ ವಹಿಸಿದ ಸಿಎಂ ಬೊಮ್ಮಾಯಿ

ಬದುಕಿದ್ದ ಯೋಧನ ಮನೆಗೆ ಹೋಗಿ ಸಾಂತ್ವನ ಹೇಳಿದ ಕೇಂದ್ರ ಸಚಿವ: ಜನಾಶೀರ್ವಾದ ಯಾತ್ರೆಯಲ್ಲಿ ಯಡವಟ್ಟು

ಕಾಂಗ್ರೆಸ್ ಗೆ ಸೇರ್ಪಡೆಗೊಂಡ ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷ ಡಾ.ಸಿ.ಎಸ್.ದ್ವಾರಕಾನಾಥ್

ರಾಜೀವ್‍ ಗಾಂಧಿ 77ನೇ ಜನ್ಮ ದಿನಾಚರಣೆ: ವೀರಭೂಮಿಯಲ್ಲಿ ನಮನ ಸಲ್ಲಿಸಿ, ಕಾಲ ಕಳೆದ ರಾಹುಲ್ ಗಾಂಧಿ

ಇತ್ತೀಚಿನ ಸುದ್ದಿ