ಹೆಣ ಅಂತ ಅಂದು ಕೊಂಡ್ರು, ಆದ್ರೆ ಅದು ಜನ! | ಪೊಲೀಸರನ್ನೇ ಬೆಚ್ಚಿಬೀಳಿಸಿದ ಭೂಪ
ಅಮೆರಿಕ: ಚಿಂತೆ ಇಲ್ಲದವನಿಗೆ ಸಂತೆಯಲ್ಲೂ ನಿದ್ದೆ ಅಂತಾರೆ, ಆದರೆ ಇಲ್ಲೊಬ್ಬ ನದಿಯ ದಡದ ಬಳಿಯ ಮರಳಿನಲ್ಲಿ ಗಡದ್ದಾಗಿ ಮಲಗಿದ್ದು, ಆತನ ಸುತ್ತ ನೀರಿದ್ದರೂ ಸುಖ ನಿದ್ದೆಯಲ್ಲಿದ್ದ. ಆದರೆ, ಈತ ನದಿಯಲ್ಲಿ ಮುಳುಗಿ ಸತ್ತು ಹೋಗಿ ದಡ ಸೇರಿದ್ದಾನೆ ಅಂದುಕೊಂಡು ರಕ್ಷಣಾ ತಂಡ ಸಮೀಪಕ್ಕೆ ಹೋಗಿ ಆತನನ್ನು ಮುಟ್ಟಿದಾಗ, ಆತ ಎದ್ದು ಕುಳಿತುಕೊಂಡಿದ್ದಾನೆ.
ಆಗಸ್ಟ್ 18ರಂದು ಈ ಘಟನೆ ನಡೆದಿದೆ ಎನ್ನಲಾಗುತ್ತಿದೆ. ಅಮೆರಿಕದ ಅರ್ಕಾನ್ಸಾಸ್ ನಲ್ಲಿ ಈ ಘಟನೆ ನಡೆದಿದೆ. ಈ ಘಟನೆಯ ವಿಡಿಯೋ ನೋಡಿ ನೆಟ್ಟಿಗರು ಬಿದ್ದು ಬಿದ್ದು ನಗುವಂತಾಗಿದೆ. ನದಿ ದಡದಲ್ಲಿ ಹೆಣ ಸಿಲುಕಿಕೊಂಡಿದೆ ಅಂತ ಅಂದುಕೊಂಡು ಹೋದ ರಕ್ಷಣಾ ಸಿಬ್ಬಂದಿ, ಆತ ಎದ್ದುಕುಳಿತಾಗ ಇದು ಹೆಣ ಅಲ್ಲ ಜನ ಎಂದು ತಿಳಿದು ಬಂದಿತ್ತು. ಆತ ಎದ್ದು ಕುಳಿತಾಗ ಸಿಬ್ಬಂದಿ ಬೆಚ್ಚಿಬಿದ್ದಿದ್ದಾರೆ.
ಈತ ಸತ್ತಿದ್ದಾನೆ ಅಂದುಕೊಳ್ಳಲು ಇನ್ನೊಂದು ಮುಖ್ಯ ಕಾರಣ ಏನೆಂದರೆ, ಈತ ಮಲಗಿದ್ದು ನದಿ ದಡವಾದರೂ ಈತ ಮಲಗಿದ ಸಣ್ಣ ಪ್ರದೇಶವನ್ನು ಬಿಟ್ಟು ಉಳಿದ ಪ್ರದೇಶಗಳನ್ನು ನೀರು ತುಂಬಿತ್ತು. ಹೀಗಾಗಿ ಈತ ಇದ್ದ ಪ್ರದೇಶಕ್ಕೆ ಸಿಬ್ಬಂದಿ ಸಣ್ಣ ದೋಣಿ ಮೂಲಕ ತೆರಳಿದ್ದಾರೆ.
ಇನ್ನಷ್ಟು ಸುದ್ದಿಗಳು…
ಅಫ್ಘಾನಿಸ್ತಾನದ ಮಹಿಳೆಯರನ್ನು ಬಹಿರಂಗವಾಗಿ ಮಾರಾಟ ಮಾಡಲಾಯ್ತೆ? | ವೈರಲ್ ವಿಡಿಯೋದ ಹಿಂದಿನ ಸತ್ಯಾಂಶ ಏನು?
ಶಾಲೆ ಆರಂಭ: ಸಚಿವರಿಗೆ ಸಿಎಂ ಬೊಮ್ಮಾಯಿ ನೀಡಿದ ಖಡಕ್ ಸೂಚನೆ ಏನು?
ಅಪ್ರಾಪ್ತ ಬಾಲಕಿಯ ಮೊಬೈಲ್ ಗೆ ಅಶ್ಲೀಲ ಚಿತ್ರ ಕಳುಹಿಸಿದ ಮಹಿಳೆ | ಮಹಿಳೆಯ ವಿಲಕ್ಷಣ ಮನಸ್ಥಿತಿಗೆ ಬೆಚ್ಚಿಬಿದ್ದ ಪೋಷಕರು
ರಮೇಶ್ ಜಾರಕಿಹೊಳಿ ಅವರ ರಕ್ಷಾ ಬಂಧನ ಆಚರಣೆ ಹೇಗಿತ್ತು ಗೊತ್ತಾ?
ಬೆಂಗಳೂರು-ಮೈಸೂರು 6 ಪಥದ ರಸ್ತೆ ನಿರ್ಮಾಣ ಪ್ರತಾಪ್ ಸಿಂಹ ಸಾಧನೆಯಲ್ಲ | ಹೆಚ್.ವಿಶ್ವನಾಥ್
ಹೃದಯ ವಿದ್ರಾವಕ ಘಟನೆ: ಬೀಡಿ ಬ್ರಾಂಚ್ ಗೆ ತೆರಳುತ್ತಿದ್ದ ಮಹಿಳೆಯರಿಗೆ ರೈಲು ಡಿಕ್ಕಿ | ಇಬ್ಬರು ಬಲಿ
ಮತ್ತೆ ಅಖಾಡಕ್ಕಿಳಿಯಲಿದ್ದಾರೆ WWE ಸೂಪರ್ ಸ್ಟಾರ್ ಸಿಎಂ ಫಂಕ್ | ಖುಷಿಯಲ್ಲಿ ಕಣ್ಣೀರು ಹಾಕಿದ ಅಭಿಮಾನಿಗಳು