ಕಳ್ಳ ನುಂಗಿದ ಚಿನ್ನದ ಸರವನ್ನು ಹೊರ ತೆಗೆದದ್ದು ಹೇಗೆ ಗೊತ್ತಾ? | ಕೊನೆಗೂ ಕಳ್ಳನ ಪ್ಲಾನ್ ಪ್ಲಾಪ್ ಆಯಿತು!
ಬೆಂಗಳೂರು: ಸರ ಕಳ್ಳ ಮಾಡಿದ ಕೆಲಸದಿಂದ ಪೊಲೀಸರು ಧರ್ಮ ಸಂಕಟದಲ್ಲಿ ಸಿಲುಕುವಂತಾದ ಘಟನೆ ಬೆಂಗಳೂರಿನಲ್ಲಿ ನಡೆದಿದ್ದು, ಕಳ್ಳತನ ಮಾಡಿದ ಸರವನ್ನು ನುಂಗಿ ಕಳ್ಳ ಹೈಡ್ರಾಮಾ ಮಾಡಿದ್ದು, ಇದೀಗ ಕೊನೆಗೂ ಪ್ರಕೃತಿಯ ಕರೆ ಕಳ್ಳನ ಹೊಟ್ಟೆಯಿಂದ ಸರವನ್ನು ಹೊರಹಾಕಿದೆ.
ಮೊನ್ನೆ ರಾತ್ರಿ 9:30ರ ಸುಮಾರಿಗೆ ಎಂಟಿ ಸಿಟಿ ಮಾರ್ಕೆಟ್ ನಿವಾಸಿ ಹೇಮಾ ಎಂಬವರು ಅಂಗಡಿಯಿಂದ ಮನೆಗೆ ನಡೆದುಕೊಂಡು ಹೋಗುತ್ತಿದ್ದ ಸಂದರ್ಭದಲ್ಲಿ ಮೂವರು ಸರಗಳ್ಳರು ಮಹಿಳೆಯನ್ನು ಹಿಂಬಾಳಿಸಿ, ಮಹಿಳೆಯ ಕತ್ತಿನಿಂದ ಸರವನ್ನು ಎಳೆದಿದ್ದಾರೆ. ಈ ವೇಳೆ ಎಚ್ಚೆತ್ತುಕೊಂಡ ಹೇಮಾ ಅವರು, ತಕ್ಷಣವೇ ಕಳ್ಳರ ತಂಡದಲ್ಲಿದ್ದ ವಿಜಯ್ ಎಂಬಾತನ ಕೈಯಲ್ಲಿ ಹಿಡಿದುಕೊಂಡಿದ್ದಾರೆ. ಈ ವೇಳೆ ಸಾರ್ವನಿಕರು ಸೇರಿಕೊಂಡು ಕಳ್ಳನಿಗೆ ಧರ್ಮದೇಟು ನೀಡಿ ಪೊಲೀಸರಿಗೆ ಒಪ್ಪಿಸಿದ್ದಾರೆ.
ಸಾರ್ವಜನಿಕರ ಕೈಗೆ ಸಿಕ್ಕಿ ಬೀಳುವ ಭಯದಲ್ಲಿ ವಿಜಯ್ ತನ್ನ ಕೈಯಲ್ಲಿದ್ದ ಚಿನ್ನದ ಸರದ ತುಂಡನ್ನು ನುಂಗಿದ್ದಾನೆ. ಈ ಘಟನೆಯಾದ ಬಳಿಕ ಸಾರ್ವಜನಿಕರಿಂದ ಪೆಟ್ಟು ತಿಂದಿದ್ದ ವಿಜಯ್ ಯನ್ನು ಪೊಲೀಸರು ಆಸ್ಪತ್ರೆಗೆ ದಾಖಲಿಸಿದ್ದಾರೆ. ಈ ವೇಳೆ ವೈದ್ಯರು ಆತನಿಗೆ ಎಕ್ಸ್ ರೇ ಮಾಡಿದ್ದು, ಈ ವೇಳೆ ಹೊಟ್ಟೆಯಲ್ಲಿ ಚಿನ್ನದ ಸರ ಇರುವುದು ತಿಳಿದು ಬಂದಿದೆ.
ಹೊಟ್ಟೆಯಲ್ಲಿದ್ದ ಚಿನ್ನದ ಸರವನ್ನು ಹೇಗೆ ಹೊರ ತೆಗೆಯುವುದು ಎನ್ನುವುದು ತಿಳಿಯದೇ ಪೊಲೀಸರು ಕೂಡ ಗೊಂದಲಕ್ಕೀಡಾಗಿದ್ದರು. ಇದಾದ ಬಳಿಕ ಆರೋಪಿ ಪ್ರಕೃತಿಯ ಕರೆಗೆ ಓಗೊಟ್ಟು ಶೌಚಾಲಯಕ್ಕೆ ಹೋಗಿದ್ದು, ಈ ವೇಳೆ ಚಿನ್ನದ ಸರ ಆತನ ಹೊಟ್ಟೆಯಿಂದ ಹೊರ ಬಂದಿದೆ ಎಂದು ತಿಳಿದ ಬಂದಿದೆ.
ಇನ್ನಷ್ಟು ಸುದ್ದಿಗಳು…
ಜಾತಿ ಜನಗಣತಿ ನಡೆಸಲು ಪ್ರಧಾನಿ ಮೋದಿಗೆ ಬೇಡಿಕೆ ಇಟ್ಟ ನಿತೀಶ್ ಕುಮಾರ್ ನೇತೃತ್ವದ ನಿಯೋಗ
ರಕ್ಷಾ ಬಂಧನ ಕಟ್ಟಿ ವಾಪಸ್ ಆಗುತ್ತಿದ್ದ ವೇಳೆ ಭೀಕರ ಅಪಘಾತ: ಪತಿ, ಪತ್ನಿ, ಮಗು ದಾರುಣ ಸಾವು
ಬಿಗ್ ಬಾಸ್ ಕ್ಯಾಮರ ಮುಂದೆಯೇ ಲೈಂಗಿಕ ಕ್ರಿಯೆ ನಡೆಸಲಾಗಿದೆ | ಸ್ಪರ್ಧಿಯಿಂದ ಗಂಭೀರ ಆರೋಪ
ಹೆಣ ಅಂತ ಅಂದು ಕೊಂಡ್ರು, ಆದ್ರೆ ಅದು ಜನ! | ಪೊಲೀಸರನ್ನೇ ಬೆಚ್ಚಿಬೀಳಿಸಿದ ಭೂಪ
ಶಾಲೆ ಆರಂಭ: ಸಚಿವರಿಗೆ ಸಿಎಂ ಬೊಮ್ಮಾಯಿ ನೀಡಿದ ಖಡಕ್ ಸೂಚನೆ ಏನು?
ಅಫ್ಘಾನಿಸ್ತಾನದ ಮಹಿಳೆಯರನ್ನು ಬಹಿರಂಗವಾಗಿ ಮಾರಾಟ ಮಾಡಲಾಯ್ತೆ? | ವೈರಲ್ ವಿಡಿಯೋದ ಹಿಂದಿನ ಸತ್ಯಾಂಶ ಏನು?
ದೇವಸ್ಥಾನಕ್ಕೆ ಬಂದಿದ್ದ ತಂದೆ, ತಾಯಿ, ಮಗಳು ನದಿಯಲ್ಲಿ ಕೊಚ್ಚಿ ಹೋಗಿ ಸಾವು!