ಹಾವಿನ ಬಾಲಕ್ಕೆ ರಾಕಿ ಕಟ್ಟಲು ಹೋದಾತನಿಗೆ ಸಾವನ್ನೇ ಉಡುಗೊರೆ ನೀಡಿದ ಹಾವು! | ವಿಡಿಯೋ ನೋಡಿ…

ಪಾಟ್ನಾ: ಹಾವಿನೊಂದಿಗೆ ರಕ್ಷಾ ಬಂಧನ ಆಚರಿಸಲು ಹೋದ ಯುವಕ ಹಾವು ಕಚ್ಚಿ ಸಾವನ್ನಪ್ಪಿದ ಘಟನೆ ಬಿಹಾರದ ಸಾರನ್ ಜಿಲ್ಲೆಯಲ್ಲಿ ನಡೆದಿದ್ದು, ಎರಡು ಹಾವನ್ನು ಜೊತೆಯಾಗಿ ಸೇರಿಸಿ ರಕ್ಷಾ ಬಂಧನ ಕಟ್ಟಲು ವ್ಯಕ್ತಿ ಯತ್ನಿಸಿದ್ದಾನೆ. ಈ ವೇಳೆ ಒಂದು ಹಾವು ಕಚ್ಚಿದೆ.
ತನ್ನ ಬಳಿ ಇದ್ದ ಎರಡು ಹೆಣ್ಣು ನಾಗರ ಹಾವಿನ ಬಾಲಕ್ಕೆ ವ್ಯಕ್ತಿ ರಕ್ಷಾ ಬಂಧನ ಕಟ್ಟಲು ಯತ್ನಿಸುತ್ತಿದ್ದ. ಈತನ ಹುಚ್ಚಾಟ ನೋಡು ಗ್ರಾಮದ ಜನರು ಕೂಡ ನೆರೆದಿದ್ದರು. ಬಾವಿನ ಬಾಲಕ್ಕೆ ರಕ್ಷಾ ಬಂಧನ ಕಟ್ಟುತ್ತಿದ್ದ ವೇಳೆ ಒಂದು ಹಾವು ವ್ಯಕ್ತಿಯ ಕಾಲಿನ ಬಳಿಗೆ ತೆವಲುತ್ತಾ ಬಂದು ವ್ಯಕ್ತಿಗೆ ಕಚ್ಚಿದೆ.
ಇನ್ನೂ ವ್ಯಕ್ತಿಗೆ ಹಾವು ಕಚ್ಚಿದರೂ, ಅಷ್ಟೊಂದು ಜನರು ಸ್ಥಳದಲ್ಲಿದ್ದರೂ ಒಬ್ಬರು ಕೂಡ ಆತನನ್ನು ರಕ್ಷಿಸಲು ಮುಂದಾಗದೇ ವಿಡಿಯೋ ಮಾಡುತ್ತಾ ನಿಂತಿರುವುದು ಕಂಡು ಬಂದಿದೆ. ಹಾವು ತನ್ನ ಪ್ರಕೃತಿ ದತ್ತವಾದ ಸ್ವಭಾವದಂತೆ ನಡೆದುಕೊಳ್ಳುತ್ತದೆಯೇ ಹೊರತು, ನಾವು ನಂಬುವ ಕಥೆಗಳನ್ನು ಆಧರಿಸಿ ಹಾವುಗಳ ಜೀವನಗಳಿಲ್ಲ ಎನ್ನುವ ಸತ್ಯವನ್ನು ಒಪ್ಪಿಕೊಳ್ಳಲೇ ಬೇಕಾಗಿದೆ. ನಾಗರ ಪಂಚಮಿ ಸಂದರ್ಭಗಳಲ್ಲಿ ಜೀವಂತ ಹಾವುಗಳಿಗೆ ಹಾಲೆರೆದು ಹುಚ್ಚಾಟ ಮೆರೆಯುವವರು ಕೂಡ ಇದ್ದಾರೆ.
बिहार के सारण में बहन से साप को राखी बंधवाना महंगा पड़ गया साप के डसने से भाई की चली गई जान pic.twitter.com/675xsgnZ6N
— Tushar Srivastava (@TusharSrilive) August 23, 2021
ಇನ್ನಷ್ಟು ಸುದ್ದಿಗಳು…
ಉಕ್ರೇನ್ ವಿಮಾನ ಹೈಜಾಕ್ ಆಗಿಲ್ಲ | ಇರಾನ್ ನೀಡಿದ ಸ್ಪಷ್ಟನೆ ಏನು ಗೊತ್ತಾ?
ಬಾರ್ ಮುಂದೆ ವೀರವನಿತೆಯರ ಪಡೆ ಕಂಡು ಬೆಚ್ಚಿಬಿದ್ದ ಕುಡುಕರು | ಮುಂದೆ ನಡೆದದ್ದೇನು ಗೊತ್ತಾ?
ಸೊಸೆಯನ್ನು ಕೆಂಡದ ಮೇಲೆ ನಡೆಸಿದ ಅತ್ತೆ! | ಅತ್ತೆಯ ಅಮಾನವೀಯ ಕೃತ್ಯಕ್ಕೆ ಸೊಸೆ ಹೇಳಿದ್ದೇನು ಗೊತ್ತೇ?
ಸಹೋದರಿಯ ಸ್ನೇಹಿತೆಯ ಮೇಲೆ ಅತ್ಯಾಚಾರ ನಡೆಸಿದ ಕಾಮುಕ!
ತಾಲಿಬಾನ್ ನ 10ಕ್ಕೂ ಅಧಿಕ ಉಗ್ರರಿಗೆ ಚಟ್ಟಕಟ್ಟಿದ ಅಫ್ಘಾನ್ ನ ಪಂಜ್ ಶೇರ್ ಚಳುವಳಿಗಾರರು