ರವಿಚಂದ್ರನ್ ಅವರ “ಯಮ್ಮೊ ಯಮ್ಮೋ ನೋಡ್ಬಾರ್ದನ್ನು ನಾ ನೋಡ್ಡೆ” ಅನ್ನೋ ಹಾಡು ಇಷ್ಟ ಎಂದ ನಟಿ ನವ್ಯಾ
ಸಿನಿಡೆಸ್ಕ್: ದೃಶ್ಯಂ 2 ಚಿತ್ರಕ್ಕಾಗಿ ರವಿಚಂದ್ರನ್ ಹಾಗೂ ನವ್ಯಾ ನಾಯರ್ ಮತ್ತೆ ಒಂದಾಗಿದ್ದಾರೆ. ಮಲಯಾಳಂ ಚಿತ್ರದ ರೀಮೇಕ್ ದೃಶ್ಯಂ ಮೊದಲ ಭಾಗ ಕನ್ನಡದಲ್ಲಿಯೂ ಯಶಸ್ವಿ ಪ್ರದರ್ಶನ ಕಂಡಿತ್ತು. ರವಿಚಂದ್ರನ್ ಹಾಗೂ ನವ್ಯಾ ಜೋಡಿಯ ನಟನೆಗೆ ಸಿನಿ ಪ್ರೇಮಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದರು. ಇದೀಗ ದೃಶ್ಯಂ 2 ಚಿತ್ರ ಬಿಡುಗಡೆಗೆ ಪ್ರೇಕ್ಷಕರು ಕಾಯುತ್ತಿದ್ದಾರೆ.
ಇದೇ ಸಂದರ್ಭದಲ್ಲಿ ಚಿತ್ರ ಸಂಬಂಧವಾಗಿ ನಟ ರವಿಚಂದ್ರನ್, ನವ್ಯಾ ನಾಯರ್ ಸೇರಿದಂತೆ ಇತರ ಕಲಾವಿದರು. ಇಂದು ಮಾಧ್ಯಮಗೋಷ್ಠಿಯಲ್ಲಿ ಭಾಗವಹಿಸಿದರು. ಈ ವೇಳೆ ನಟಿ ನವ್ಯಾ ನಾಯರ್ ಹಾಗೂ ರವಿ ಚಂದ್ರನ್ ಚಿತ್ರದ ಬಗ್ಗೆ ಹಲವು ವಿಚಾರಗಳನ್ನು ಹಂಚಿಕೊಂಡರು. ಈ ವೇಳೆ ಮಲಯಾಳಂ ನಟಿಯೂ ಆಗಿರುವ ನಟಿ ನವ್ಯಾ ನಾಯರ್ ಅವರು ರವಿಚಂದ್ರನ್ ಅವರ ಹಳೆಯ ಚಿತ್ರಗಳ ಬಗ್ಗೆ, ಹಾಡುಗಳ ಮಾತನಾಡಿದರು.
ನಟಿ ನವ್ಯಾ ಮಾತನಾಡುತ್ತಾ, ನನಗೆ ರವಿಚಂದ್ರನ್ ಅವರ ಯಮ್ಮೋ ಯಮ್ಮೋ ನೋಡ್ದೆ, ನೋಡ್ಡೆ, ನೋಡ್ಬಾರ್ದನ್ನ ನಾ ನಾಡ್ದೆ ಅನ್ನೋ ಹಾಡು ಬಹಳ ಇಷ್ಟ ಎಂದರು. ಈ ವೇಳೆ ಜೊತೆಗಿದ್ದವರು ಜೋರಾಗಿ ನಕ್ಕರು. ಮುಂದುವರಿದ ನವ್ಯಾ ಆ ಹಾಡು ಬಹಳ ಚೆನ್ನಾಗಿ ಬಂದಿದೆ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು. ಜೊತೆಗೆ ಹೇ ನವಿಲೇ… ಅನ್ನುವ ಹಾಡು ಕೂಡ ನನಗೆ ತುಂಬಾ ಇಷ್ಟವಾದ ಹಾಡು ಎಂದು ಹೇಳಿದರು.
ದೃಶ್ಯಂ 2 ಚಿತ್ರ ಮಲಯಾಳಂನಲ್ಲಿ ಈಗಾಗಲೇ ಬಿಡುಗಡೆಯಾಗಿದೆ. ದೃಶ್ಯಂ ಮೊದಲ ಭಾಗಕ್ಕಿಂತ ಎರಡನೇ ಭಾಗ ಬಹಳ ಇಂಟ್ರಸ್ಟಿಂಗ್ ಆಗಿದೆ. ಮೊದಲ ಭಾಗದಲ್ಲಿ ಪೊನ್ನಪ್ಪ(ರವಿಚಂದ್ರನ್)ನನ್ನು ಪೊಲೀಸರು ಸತಾಯಿಸಿದರೆ, ಎರಡನೇ ಭಾಗದಲ್ಲಿ ಪೊನ್ನಪ್ಪ ಪೊಲೀಸರನ್ನು ಸತಾಯಿಸುತ್ತಾರೆ. ದೃಶ್ಯ 2 ಕನ್ನಡದಲ್ಲಿ ಹೇಗೆ ಮೂಡಿ ಬರುತ್ತದೆ ಗೊತ್ತಿಲ್ಲ. ಆದರೆ. ದೃಶ್ಯಂ 2 ಮತ್ತೆ ರವಿಚಂದ್ರನ್ ಅವರಿಗೆ ಕನ್ನಡ ಚಿತ್ರದಲ್ಲಿ ಹೊಸ ಭರವಸೆ ನೀಡುವ ಚಿತ್ರವಾಗಿದೆ ಎಂದಷ್ಟೇ ಹೇಳಬಹುದು.
ಇನ್ನಷ್ಟು ಸುದ್ದಿಗಳು…
ಹಾವಿನ ಬಾಲಕ್ಕೆ ರಾಕಿ ಕಟ್ಟಲು ಹೋದಾತನಿಗೆ ಸಾವನ್ನೇ ಉಡುಗೊರೆ ನೀಡಿದ ಹಾವು! | ವಿಡಿಯೋ ನೋಡಿ…
ಪ್ರೀತಿಸಿದವಳ ತಂದೆಯ ತಲೆ ಹೊಡೆದು ಹತ್ಯೆ ಮಾಡಿದ ಪಾಗಲ್ ಪ್ರೇಮಿ!
ಉಕ್ರೇನ್ ವಿಮಾನ ಹೈಜಾಕ್ ಆಗಿಲ್ಲ | ಇರಾನ್ ನೀಡಿದ ಸ್ಪಷ್ಟನೆ ಏನು ಗೊತ್ತಾ?
ಬಾರ್ ಮುಂದೆ ವೀರವನಿತೆಯರ ಪಡೆ ಕಂಡು ಬೆಚ್ಚಿಬಿದ್ದ ಕುಡುಕರು | ಮುಂದೆ ನಡೆದದ್ದೇನು ಗೊತ್ತಾ?
ಸೊಸೆಯನ್ನು ಕೆಂಡದ ಮೇಲೆ ನಡೆಸಿದ ಅತ್ತೆ! | ಅತ್ತೆಯ ಅಮಾನವೀಯ ಕೃತ್ಯಕ್ಕೆ ಸೊಸೆ ಹೇಳಿದ್ದೇನು ಗೊತ್ತೇ?
ಕಾಂಗ್ರೆಸ್ ನ ಫ್ಯೂಸ್ ಕಿತ್ತಾಕ್ಬಿಟ್ಟಿದ್ದೀವಿ ಹೇಗೆ ಶಾಕ್ ನೀಡ್ತಾರೆ ನೋಡೋಣ: ಕುಮಾರಸ್ವಾಮಿ ಡೈಲಾಗ್ ವೈರಲ್
ಪಿಸ್ತೂಲ್ ಸ್ವಚ್ಛಗೊಳಿಸುತ್ತಿರುವ ವೇಳೆ ಹಾರಿದ ಗುಂಡು | ಕಾನ್ಟ್ಟೇಬಲ್ ದಾರುಣ ಸಾವು