ಮೊಮ್ಮಗಳಿಗೆ ಮೇಕೆ ಗುದ್ದಿದ್ದನ್ನು ಪ್ರಶ್ನೆ ಮಾಡಲು ಹೋದ ವೃದ್ಧ ದಾರುಣ ಸಾವು!
ಚಿಕ್ಕಬಳ್ಳಾಪುರ: ತನ್ನ ಮೊಮ್ಮಗಳಿಗೆ ಮೇಕೆ ಗುದ್ದಿದೆ ಎಂದು ಮೇಕೆಯ ಮಾಲಿಕನ ಜೊತೆಗೆ ಜಗಳವಾಡಿದ ವೃದ್ಧರೊಬ್ಬರು ವ್ಯಕ್ತಿಯ ಏಟಿನ ಪರಿಣಾಮ ಮೃತಪಟ್ಟ ದಾರುಣ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನ ಬಿಸವನಹಳ್ಳಿಯಲ್ಲಿ ನಡೆದಿದೆ.
65 ವರ್ಷ ವಯಸ್ಸಿನ ಚಂದ್ರಶೇಖರ್ ಹತ್ಯೆಗೀಡಾದವರಾಗಿದ್ದಾರೆ. ಹರಕೆಗೆ ಬಿಟ್ಟಿದ್ದ ಮೇಕೆ ತನ್ನ ಮೊಮ್ಮಗಳಿಗೆ ಗುದ್ದಿದೆ ಎಂದು ಆರೋಪಿಸಿದ ಚಂದ್ರಶೇಖರ್ ಅವರು, ಮೇಕೆಯ ಮಾಲಿಕ ರವಿ ಕುಮಾರ್ ಎಂಬಾತನೊಂದಿಗೆ ಜಗಳವಾಡಿದ್ದಾರೆನ್ನಲಾಗಿದೆ.
ಜಗಳ ನಡೆದ ವೇಳೆ ರವಿ ಕುಮಾರ್, ಚಂದ್ರಶೇಖರ್ ಅವರ ಎದೆಗೆ ಬಲವಾಗಿ ಹೊಡೆದಿದ್ದಾರೆನ್ನಲಾಗಿದೆ. ಇದಾದ ಬಳಿಕ ಸ್ವಲ್ಪ ಹೊತ್ತಿನಲ್ಲಿಯೇ ಚಂದ್ರಶೇಖರ್ ಅವರಿಗೆ ಎದೆನೋವು ಕಾಣಿಸಿಕೊಂಡಿದ್ದು, ತೀವ್ರ ಅಸ್ವಸ್ಥರಾದ ಅವರು ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ.
ಇತ್ತ ಚಂದ್ರಶೇಖರ್ ಮೃತಪಟ್ಟಿರುವ ವಿಚಾರ ತಿಳಿಯುತ್ತಿದ್ದಂತೆಯೇ ಆರೋಪಿ ರವಿ ಕುಮಾರ್ ತಲೆಮರೆಸಿಕೊಂಡಿದ್ದು, ಘಟನೆ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಸದ್ಯ ತನಿಖೆ ನಡೆಸಿದ್ದು, ಆರೋಪಿ ರವಿಕುಮಾರ್ ಗಾಗಿ ಶೋಧ ನಡೆಸುತ್ತಿದ್ದಾರೆ.
ಇನ್ನಷ್ಟು ಸುದ್ದಿಗಳು…
ಈ ಬಾರಿ ಆನ್ ಲೈನ್ ನಲ್ಲೇ ವಿದ್ಯಾರ್ಥಿಗಳಿಗೆ ಬಸ್ ಪಾಸ್ ವಿತರಣೆ: ಸಚಿವ ಬಿ.ಶ್ರೀರಾಮುಲು
ಕೇಂದ್ರ ಸಚಿವ ನಾರಾಯಣರಾಣೆ ಅರೆಸ್ಟ್: ರಣರಂಗವಾದ ಮುಂಬೈ | ಶಿವಸೇನೆ, ಬಿಜೆಪಿ ಕಾರ್ಯಕರ್ತರ ನಡುವೆ ಮಾರಾಮಾರಿ
ರವಿಚಂದ್ರನ್ ಅವರ “ಯಮ್ಮೊ ಯಮ್ಮೋ ನೋಡ್ಬಾರ್ದನ್ನು ನಾ ನೋಡ್ಡೆ” ಅನ್ನೋ ಹಾಡು ಇಷ್ಟ ಎಂದ ನಟಿ ನವ್ಯಾ
ಹಾವಿನ ಬಾಲಕ್ಕೆ ರಾಕಿ ಕಟ್ಟಲು ಹೋದಾತನಿಗೆ ಸಾವನ್ನೇ ಉಡುಗೊರೆ ನೀಡಿದ ಹಾವು! | ವಿಡಿಯೋ ನೋಡಿ…
ಬಾರ್ ಮುಂದೆ ವೀರವನಿತೆಯರ ಪಡೆ ಕಂಡು ಬೆಚ್ಚಿಬಿದ್ದ ಕುಡುಕರು | ಮುಂದೆ ನಡೆದದ್ದೇನು ಗೊತ್ತಾ?
ಕಾಂಗ್ರೆಸ್ ನ ಫ್ಯೂಸ್ ಕಿತ್ತಾಕ್ಬಿಟ್ಟಿದ್ದೀವಿ ಹೇಗೆ ಶಾಕ್ ನೀಡ್ತಾರೆ ನೋಡೋಣ: ಕುಮಾರಸ್ವಾಮಿ ಡೈಲಾಗ್ ವೈರಲ್