“ನನ್ನನ್ನು ಮದುವೆಗೆ ಯಾಕೆ ಕರೆದಿಲ್ಲ” ಎಂದು ಪ್ರಶ್ನಿಸಿ ನವವಿವಾಹಿತನಿಗೆ ಹಿಗ್ಗಾಮುಗ್ಗಾ ಥಳಿಸಿದ ಸಂಬಂಧಿಕ! - Mahanayaka
10:52 PM Wednesday 11 - December 2024

“ನನ್ನನ್ನು ಮದುವೆಗೆ ಯಾಕೆ ಕರೆದಿಲ್ಲ” ಎಂದು ಪ್ರಶ್ನಿಸಿ ನವವಿವಾಹಿತನಿಗೆ ಹಿಗ್ಗಾಮುಗ್ಗಾ ಥಳಿಸಿದ ಸಂಬಂಧಿಕ!

marriage
24/08/2021

ಭಿಂದ್: ಕೊರೊನಾ ಸಂಕಷ್ಟದ ನಡುವೆಯೇ ವಿವಾಹವಾದ ಯುವಕನಿಗೆ ಸಂಬಂಧಿಕನೋರ್ವ ಹಿಗ್ಗಾಮುಗ್ಗ ಥಳಿಸಿದ್ದು, “ಮದುವೆಗೆ ಯಾಕೆ ಕರೆದಿಲ್ಲ” ಎಂದು ಪ್ರಶ್ನಿಸಿ ಹಲ್ಲೆ ನಡೆಸಲಾಗಿದೆ ಎಂದು ಸಂತ್ರಸ್ತ ನವವಿವಾಹಿತ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾನೆ.

ಮಧ್ಯಪ್ರದೇಶದ ಭಿಂದ್ ಜಿಲ್ಲೆಯಲ್ಲಿ ಹೊಸದಾಗಿ ಮದುವೆಯಾದ ಯುವಕನಿಗೆ ಹಲ್ಲೆ ನಡೆಸಲಾಗಿದ್ದು,  ಭಾನುವಾರ ರಾತ್ರಿ ದೇಹತ್ ಪೊಲೀಸ್ ಠಾಣೆ ವ್ಯಾಪ್ತಿಯ ಚಂದುಪುರ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಕೊರೊನಾ ಮಾರ್ಗಸೂಚಿ ನಿಯಮದ ಹಿನ್ನೆಲೆಯಲ್ಲಿ ಕುಟುಂಬಸ್ಥರಿಗೆ ಮಾತ್ರವೇ ಮದುವೆಗೆ ಆಹ್ವಾನ ನೀಡಲಾಗಿತ್ತು. ಆದರೆ ಇವರ ಸಂಬಂಧಿಕ ನರೇಂದ್ರ ಕುಶ್ವಾಹ ಎಂಬಾತನಿಗೆ ತನ್ನನ್ನು ಮದುವೆಗೆ ಕರೆದಿಲ್ಲ ಎಂದು ಬೇಸರವಾಗಿತ್ತು ಎನ್ನಲಾಗಿದೆ.

ತನ್ನನ್ನು ಯಾಕೆ ಮದುವೆಗೆ ಕರೆದಿಲ್ಲ ಎಂದು ಪ್ರಶ್ನಿಸಿದ ನರೇಂದ್ರ ನವವಿವಾಹಿತನಿಗೆ ಹಿಗ್ಗಾಮುಗ್ಗಾ ಥಳಿಸಲು ಆರಂಭಿಸಿದ್ದಾನೆ. ತನ್ನನ್ನು ಮದುವೆಗೆ ಕರೆಯದಿದ್ದುದಕ್ಕೆ, ತನಗೆ ಕುಡಿಯಲು 500 ರೂಪಾಯಿ ನೀಡು ಎಂದು ಹಲ್ಲೆ ನಡೆಸುತ್ತಲೇ ಇದ್ದ ಎಂದು ಸಂತ್ರಸ್ತ ಹೇಳಿದ್ದು, ಕೊನೆಗೆ 100 ರೂಪಾಯಿ ನೀಡಿ ಹೇಗೋ ಆತನಿಂದ ತಪ್ಪಿಸಿಕೊಂಡು ಬಂದಿರುವುದಾಗಿ ಸಂತ್ರಸ್ತ ಯುವಕ ಪೊಲೀಸರಿಗೆ ತಿಳಿಸಿದ್ದಾನೆ.

ಒಂದೆಡೆಯಲ್ಲಿ ಕೊರೊನಾದಿಂದಾಗಿ ಮದುವೆಗೆ ಹೆಚ್ಚು ಜನ ಸೇರಿಸುವಂತಿಲ್ಲ, ಹೆಚ್ಚು ಜನ ಸೇರಿಸಿದರೆ, ಕೇಸ್ ಹಾಕಿಸಿಕೊಳ್ಳಬೇಕಾಗುತ್ತದೆ. ಇತ್ತ ಸಂಬಂಧಿಕರಿಗೆ ಹೇಳದಿದ್ದರೆ, ಸಂಬಂಧಿಕರು ಹಿಡಿದುಕೊಂಡು ಹಿಗ್ಗಾಮುಗ್ಗಾ ಥಳಿಸುತ್ತಿದ್ದಾರೆ.  ಸದ್ಯ ಹೊಸದಾಗಿ ಮದುವೆಯಾಗುವ ಯುವಕರು ಮದುವೆಯಾಗಲು ಸ್ವಲ್ಪ ಯೋಚನೆ ಮಾಡುವಂತಾಗಿದೆ.

ಇನ್ನಷ್ಟು ಸುದ್ದಿಗಳು…

 

ಮೊಮ್ಮಗಳಿಗೆ ಮೇಕೆ ಗುದ್ದಿದ್ದನ್ನು ಪ್ರಶ್ನೆ ಮಾಡಲು ಹೋದ ವೃದ್ಧ ದಾರುಣ ಸಾವು!

ಈ ಬಾರಿ ಆನ್ ಲೈನ್ ನಲ್ಲೇ ವಿದ್ಯಾರ್ಥಿಗಳಿಗೆ ಬಸ್ ಪಾಸ್ ವಿತರಣೆ: ಸಚಿವ ಬಿ.ಶ್ರೀರಾಮುಲು

ಕೇಂದ್ರ ಸಚಿವ ನಾರಾಯಣರಾಣೆ ಅರೆಸ್ಟ್: ರಣರಂಗವಾದ ಮುಂಬೈ | ಶಿವಸೇನೆ, ಬಿಜೆಪಿ ಕಾರ್ಯಕರ್ತರ ನಡುವೆ ಮಾರಾಮಾರಿ

ರವಿಚಂದ್ರನ್ ಅವರ “ಯಮ್ಮೊ ಯಮ್ಮೋ  ನೋಡ್ಬಾರ್ದನ್ನು ನಾ ನೋಡ್ಡೆ” ಅನ್ನೋ ಹಾಡು ಇಷ್ಟ ಎಂದ ನಟಿ ನವ್ಯಾ

ಪ್ರೀತಿಸಿದವಳ ತಂದೆಯ ತಲೆ ಹೊಡೆದು ಹತ್ಯೆ ಮಾಡಿದ ಪಾಗಲ್ ಪ್ರೇಮಿ!

ಹಾವಿನ ಬಾಲಕ್ಕೆ ರಾಕಿ ಕಟ್ಟಲು ಹೋದಾತನಿಗೆ ಸಾವನ್ನೇ ಉಡುಗೊರೆ ನೀಡಿದ ಹಾವು! | ವಿಡಿಯೋ ನೋಡಿ…

ಉಕ್ರೇನ್ ವಿಮಾನ ಹೈಜಾಕ್ ಆಗಿಲ್ಲ | ಇರಾನ್ ನೀಡಿದ ಸ್ಪಷ್ಟನೆ ಏನು ಗೊತ್ತಾ?

ಕಾಂಗ್ರೆಸ್ ನ ಫ್ಯೂಸ್ ಕಿತ್ತಾಕ್ಬಿಟ್ಟಿದ್ದೀವಿ ಹೇಗೆ ಶಾಕ್ ನೀಡ್ತಾರೆ ನೋಡೋಣ: ಕುಮಾರಸ್ವಾಮಿ ಡೈಲಾಗ್ ವೈರಲ್

ಇತ್ತೀಚಿನ ಸುದ್ದಿ