ಮೈಸೂರು ಗ್ಯಾಂಗ್ ರೇಪ್: ಬಿಜೆಪಿ ಸಂಸದರ ಬೇಜವಾಬ್ದಾರಿಯ ಹೇಳಿಕೆ
ದಾವಣಗೆರೆ: ಮೈಸೂರಿನಲ್ಲಿ ವಿದ್ಯಾರ್ಥಿನಿಯ ಮೇಲೆ ನಡೆದ ಗ್ಯಾಂಗ್ ರೇಪ್ ಗೆ ಸಂಬಂಧಿಸಿದಂತೆ ಬಿಜೆಪಿ ನಾಯಕರ ಸಾಲು ಸಾಲು ವಿವಾದಾತ್ಮಕ ಹೇಳಿಕೆಗಳು ಮುಂದುವರಿದಿದ್ದು, ಇದೀಗ ಬಿಜೆಪಿ ಸಂಸದ ಜಿ.ಎಂ.ಸಿದ್ದೇಶ್ವರ್ ಹೇಳಿಕೆ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಮೈಸೂರು ಗ್ಯಾಂಗ್ ರೇಪ್ ಸಂಬಂಧ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಅವರು ಬೇಜವಾಬ್ದಾರಿಯ ಹೇಳಿಕೆ ನೀಡಿದ್ದಾರೆ. ಮೈಸೂರಿನಲ್ಲಿ ಘಟನೆ ಆದ್ರೆ, ನನಗೇನು ಗೊತ್ತು? ನಾನೇನು ನೋಡಿದ್ದೀನಾ? ಮಾಡಿದ್ದೀನಾ ಎಂಬಂತಹ ಹೇಳಿಕೆ ನೀಡಿದ್ದಾರೆ ಎಂದು ವರದಿಯಾಗಿದೆ.
ಈ ವಿಚಾರ ನನಗೆ ಗೊತ್ತೇ ಇಲ್ಲ ಎಂದ ಸಂಸದರು, ನಾನು ಬೆಳಿಗ್ಗೆ ಮನೆಯಿಂದ ಹೋದರೆ, ವಾಪಸ್ ಬರುವುದು ರಾತ್ರಿ 11 ಗಂಟೆಗೆ. ಹೀಗಿರುವಾಗ ಮೈಸೂರಿನಲ್ಲಿ ರೇಪ್ ನಡೆದಿದ್ದರೆ, ನನ್ನನ್ನು ಕೇಳಿದರೆ ನನಗೆ ಹೇಗೆ ಗೊತ್ತು? ನಾನೇನು ಹೇಳಲು ಸಾಧ್ಯ? ನಾನು ನೋಡಿದ್ದೇನಾ? ಮಾಡಿದ್ದೇನಾ? ಎಂದು ಪ್ರಶ್ನಿಸಿದ್ದಾರೆ ಎಂದು ತಿಳಿದು ಬಂದಿದೆ.
ದಾವಣಗೆರೆಯಲ್ಲಿ ಏನಾದರೂ ಘಟನೆ ನಡೆದಿದ್ದರೆ, ನಾನು ಈ ಬಗ್ಗೆ ಪ್ರತಿಕ್ರಿಯಿಸುತ್ತಿದೆ. ಅಧಿಕಾರಿಗಳಿಗೆ ಕ್ರಮಕೈಗೊಳ್ಳಲು ಸೂಚಿಸುತ್ತಿದ್ದೆ. ಆದರೆ ಮೈಸೂರಿನಲ್ಲಿ ನಡೆದ ಘಟನೆಯ ಬಗ್ಗೆ ನನಗೆ ಗೊತ್ತಿಲ್ಲ ಎಂದು ಅವರು ಹೇಳಿದ್ದಾರೆ.
ಇನ್ನಷ್ಟು ಸುದ್ದಿಗಳು….
ಅನಿಷ್ಟ ಕಾಮುಕರನ್ನು ಬಂಧಿಸುವ, ಶಿಕ್ಷಿಸುವ ಕಾನೂನು ಗಟ್ಟಿಯಾಗಬೇಕು | ನಟಿ ಶೃತಿ
ಅತ್ಯಾಚಾರಕ್ಕಿಂತಲೂ ಘೋರ ಈ ಧೋರಣೆ ಮನಸ್ಥಿತಿ | ನಾ ದಿವಾಕರ
ಪುರುಷರು ಮಾಡಿದ ತಪ್ಪಿಗೆ ಮಹಿಳೆಯರನ್ನೇ ಯಾಕೆ ತಪ್ಪಿತಸ್ಥರನ್ನಾಗಿ ಮಾಡಲಾಗುತ್ತಿದೆ | ನಟಿ ರಮ್ಯಾ ಪ್ರಶ್ನೆ
ಪರಿಶಿಷ್ಟ ಜಾತಿಯ ಯುವಕನಿಗೆ ಮೂತ್ರ ಕುಡಿಸಿದ ಪ್ರಕರಣ | ಆರೋಪಿ ಪಿಎಸ್ ಐ ಅರ್ಜುನ್ ಜಾಮೀನು ಅರ್ಜಿ ವಜಾ