126 ಪ್ರಯಾಣಿಕರನ್ನು ಹೊತ್ತು ಹಾರುತ್ತಿದ್ದ ವಿಮಾನದ ಪೈಲಟ್ ಗೆ ಹೃದಯಾಘಾತ: ಮುಂದೆ ನಡೆದದ್ದೇನು?
ನಾಗ್ಪುರ: ಹಾರುತ್ತಿದ್ದ ವಿಮಾನದ ಪೈಲಟ್ ಗೆ ಹೃದಯಾಘಾತವಾಗಿದ್ದು, ಪರಿಣಾಮವಾಗಿ ಬಾಂಗ್ಲಾದೇಶದ ಬಿಮನ್ ಏರ್ ಲೈನ್ಸ್ ಗೆ ಸೇರಿದ ವಿಮಾನವನ್ನು ನಾಗ್ಪುರದಲ್ಲಿ ತುರ್ತು ಲ್ಯಾಂಡಿಂಗ್ ನಡೆಸಲಾಗಿದೆ. ಬಳಿಕ ಪೈಲಟ್ ನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ.
ಮಸ್ಕತ್ ನಿಂದ ಢಾಕಾಗೆ ಹೊರಟ ಬಾಂಗ್ಲಾದೇಶ ವಿಮಾನದ ಪೈಲಟ್ ಗೆ ದಾರಿ ಮಧ್ಯೆ ಹೃದಯಾಘಾತ ಕಾಣಿಸಿಕೊಂಡಿದೆ. ಇದರಿಂದಾಗಿ ತುರ್ತು ಭೂಸ್ಪರ್ಶ ಮಾಡಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
126 ಪ್ರಯಾಣಿಕರನ್ನು ಹೊತ್ತ ಬೋಯಿಂಗ್ ವಿಮಾನ ಶುಕ್ರವಾರ ಬೆಳಗ್ಗೆ 11.40ರ ಹೊತ್ತಿಗೆ ನಾಗ್ಪುರದಲ್ಲಿ ಇಳಿದಿದೆ. ರಾಯಪುರ ಸಮೀಪದಲ್ಲಿದ್ದಾಗ ತುರ್ತು ಲ್ಯಾಂಡಿಂಗ್ ಗಾಗಿ ಕೋಲ್ಕತ್ತಾ ಎಟಿಸಿಯನ್ನು ಸಂಪರ್ಕಿಸಲಾಗಿತ್ತು. ಬಳಿಕ ಹತ್ತಿರದ ನಾಗ್ಪುರ ವಿಮಾನ ನಿಲ್ದಾಣದಲ್ಲಿ ಇಳಿಯಲು ಸೂಚಿಸಲಾಯಿತು ಎಂದು ತಿಳಿದು ಬಂದಿದೆ.
ಇನ್ನಷ್ಟು ಸುದ್ದಿಗಳು…
ಮೈಸೂರು ಗ್ಯಾಂಗ್ ರೇಪ್: ನನ್ಗೇನು ಗೊತ್ತು? ನಾನೇನು ನೋಡಿದ್ದೀನಾ, ಮಾಡಿದ್ದೀನಾ? | ಬಿಜೆಪಿ ಸಂಸದ ಹೇಳಿಕೆ
ಅನಿಷ್ಟ ಕಾಮುಕರನ್ನು ಬಂಧಿಸುವ, ಶಿಕ್ಷಿಸುವ ಕಾನೂನು ಗಟ್ಟಿಯಾಗಬೇಕು | ನಟಿ ಶೃತಿ
ಪುರುಷರು ಮಾಡಿದ ತಪ್ಪಿಗೆ ಮಹಿಳೆಯರನ್ನೇ ಯಾಕೆ ತಪ್ಪಿತಸ್ಥರನ್ನಾಗಿ ಮಾಡಲಾಗುತ್ತಿದೆ | ನಟಿ ರಮ್ಯಾ ಪ್ರಶ್ನೆ
ಅಂತರ್ಜಾತಿ ವಿವಾಹವಾಗಿದ್ದಕ್ಕೆ ದಂಪತಿಗೆ ಸವರ್ಣಿಯರಿಂದ ಸಾಮಾಜಿಕ ಬಹಿಷ್ಕಾರ
ಮೈಸೂರು ಗ್ಯಾಂಗ್ ರೇಪ್ ಆರೋಪಿಗಳ ಸುಳಿವು ಲಭ್ಯ | ಇಂಜಿನಿಯರಿಂಗ್ ವಿದ್ಯಾರ್ಥಿಗಳ ಕೃತ್ಯ?
ಆ ಹುಡುಗಿ ಅಷ್ಟೊತ್ತಿಗೆ ಅಲ್ಲಿಗೆ ಏಕೆ ಹೋಗಿದ್ದಳೋ? | ಗ್ಯಾಂಗ್ ರೇಪ್ ಬಗ್ಗೆ ಮಂಜುಳಾ ಮಾನಸ ಉಡಾಫೆ ಮಾತುಗಳು