ನಾವು ಭಾರತದೊಂದಿಗೆ ಉತ್ತಮ ಬಾಂಧವ್ಯ ಬಯಸುತ್ತೇವೆ | ತಾಲಿಬಾನ್ ನಾಯಕ ಮೊಹಮ್ಮದ್ ಅಬ್ಬಾಸ್ ಸ್ಟ್ಯಾನಿಕಜೈ
ಅಫ್ಘಾನಿಸ್ತಾನ: ತಾಲಿಬಾನ್ ವಶದಲ್ಲಿರುವ ಅಫ್ಘಾನಿಸ್ತಾನ ಭಾರತದೊಂದಿಗೆ ಉತ್ತಮ ಸಂಬಂಧವನ್ನು ಹೊಂದಲು ಬಯಸುತ್ತದೆ ಎಂದು ತಾಲಿಬಾನ್ ನಾಯಕ ಮೊಹಮ್ಮದ್ ಅಬ್ಬಾಸ್ ಸ್ಟ್ಯಾನಿಕಜೈ ಹೇಳಿಕೆ ನೀಡಿದ್ದು, ಅಫ್ಘಾನಿಸ್ತಾನವನ್ನು ವಶಕ್ಕೆ ಪಡೆದ ಬಳಿಕ ತಮ್ಮದೇ ಸಾಮ್ರಾಜ್ಯವನ್ನು ಕಟ್ಟಿಕೊಂಡಿರುವ ತಾಲಿಬಾನ್ ಇದೀಗ ಭಾರತದೊಂದಿಗೆ ಬಾಂಧವ್ಯ ಹೊಂದುವ ಅಭಿಲಾಷೆ ವ್ಯಕ್ತಪಡಿಸಿದೆ.
ತಾಲಿಬಾನ್ ನಾಯಕ ಮೊಹಮ್ಮದ್ ಅಬ್ಬಾಸ್ ಸ್ಟ್ಯಾನಿಕಜೈ ಮೊದಲು ಭಾರತದ ಡೆಹ್ರಾಡೂನ್ ನಲ್ಲಿ ಇಂಡಿಯನ್ ಮಿಲಿಟರಿ ಅಕಾಡೆಮಿಯಲ್ಲಿ ತರಬೇತಿ ಪಡೆದಿದ್ದ ತರಬೇತಿ ಬಳಿಕ ಅಫ್ಘಾನಿಸ್ತಾನಕ್ಕೆ ಹೋಗಿದ್ದ. ತರಬೇತಿಯ ಬಳಿಕ ಮಿಲಿಟರಿ ಸೇರುವ ಬದಲು ತಾಲಿಬಾನ್ ಗೆ ಸೇರಿಕೊಂಡಿದ್ದ.
ಈಗಾಗಲೇ ಅಫ್ಘಾನಿಸ್ತಾನದ ಬಹು ಭಾಗವನ್ನು ತಾಲಿಬಾನ್ ವಶಕ್ಕೆ ಪಡೆದುಕೊಂಡಿದೆ. ಇದೇ ಸಂದರ್ಭದಲ್ಲಿ ಭಾರತದೊಂದಿಗೆ ನಾವು ಉತ್ತಮ ಬಾಂಧವ್ಯವನ್ನು ಹೊಂದಲು ಬಯಸುತ್ತೇವೆ ಎಂದು ಮೊಹಮ್ಮದ್ ಅಬ್ಬಾಸ್ ಸ್ಟ್ಯಾನಿಕಜೈ ಹೇಳಿದ್ದಾನೆ.
ಇನ್ನೂ ತಾಲಿಬಾನ್ ನ ಭಯೋತ್ಪಾದನಾ ನೀತಿಯನ್ನು ಭಾರತಿ ತೀವ್ರವಾಗಿ ವಿರೋಧಿಸುತ್ತಿದ್ದು, ಅಫ್ಘಾನಿಸ್ತಾನವನ್ನು ಆಕ್ರಮಿಸಿದ ತಾಲಿಬಾನ್ ನಡೆಯ ಬಗ್ಗೆ ಇನ್ನೂ ಯಾವುದೇ ಪ್ರತಿಕ್ರಿಯೆಯನ್ನು ನೀಡಿಲ್ಲ. ಶಾಂತಿ ಪ್ರಿಯ ರಾಷ್ಟ್ರ ಭಾರತವು, ಬಂದೂಕನ್ನು ಹೆಗಲ ಮೇಲೆ ಇಟ್ಟುಕೊಂಡು ಅಫ್ಘಾನಿಸ್ತಾನಕ್ಕೆ ಕಾಲಿಟ್ಟ ತಾಲಿಬಾನ್ ಸರ್ಕಾರವನ್ನು ಒಪ್ಪುವುದು ಕಷ್ಟ ಸಾಧ್ಯ. ಆದರೆ, ತಾಲಿಬಾನ್ ನಾಯಕರು ಎಲ್ಲ ರಾಷ್ಟ್ರಗಳೊಂದಿಗೆ ಉತ್ತಮ ಬಾಂಧವ್ಯ ಹೊಂದಿ, ಅಫ್ಘಾನಿಸ್ತಾನದಲ್ಲಿ ತಮಗೆ ಬೇಕಾದ ಕಾನೂನುಗಳನ್ನು ಜಾರಿಗೊಳಿಸಿ, ಅಲ್ಲಿನ ನಾಗರಿಕರನ್ನು ಪೀಡಿಸುವ ಪ್ರಯತ್ನವನ್ನು ಮಾಡುತ್ತಿದ್ದಾರೆ ಎನ್ನುವ ಅನುಮಾನಗಳು ಇದೀಗ ಸೃಷ್ಟಿಯಾಗಿವೆ.
ಇನ್ನಷ್ಟು ಸುದ್ದಿಗಳು…
13ರ ಬಾಲಕಿಯ ಮೇಲೆ ಇಬ್ಬರು ಕಾಮುಕರಿಂದ ಲೈಂಗಿಕ ದೌರ್ಜನ್ಯ
ಅತ್ಯಾಚಾರ ಪ್ರಕರಣ ಭೇದಿಸಿದ ಪೊಲೀಸರಿಗೆ 1 ಲಕ್ಷ ರೂ. ಬಹುಮಾನ ಘೋಷಿಸಿದ ಹಿರಿಯ ನಟ ಜಗ್ಗೇಶ್
ಸಾಮೂಹಿಕ ಅತ್ಯಾಚಾರ ಪ್ರಕರಣ: ಆರೋಪಿಗಳ ಬಂಧನಕ್ಕೆ ಪೊಲೀಸರಿಗೆ ಸಹಕಾರವಾದ ಅಂಶಗಳೇನು?
ದೇಶದಿಂದಲೇ ಬಿಜೆಪಿಯನ್ನು ಕಿತ್ತೊಗೆಯುತ್ತೇವೆ | ತಾಕತ್ ಇದ್ದರೆ ಟಿಎಂಸಿಯನ್ನು ತಡೆಯಿರಿ | ಅಭಿಷೇಕ್ ಬ್ಯಾನರ್ಜಿ ಸವಾಲು
ಪ್ರೇಯಸಿಯ ತಂದೆಯನ್ನೇ ಕೊಂದಿದ್ದವ ಮೈಸೂರು ವಿದ್ಯಾರ್ಥಿನಿಯ ಅತ್ಯಾಚಾರ ಪ್ರಕರಣ ಆರೋಪಿಗಳಲ್ಲಿ ಓರ್ವ!
ಬಿಜೆಪಿಯ ಕೋಟ್ಯಾಧಿಪತಿ ಸ್ನೇಹಿತರ ಲಾಭಕ್ಕಾಗಿ ವಿವಾದಿತ ಕೃಷಿ ಕಾನೂನು ಜಾರಿ: ಪ್ರಿಯಾಂಕಾ ಗಾಂಧಿ ವಾದ್ರಾ ಆರೋಪ
ಬೆತ್ತಲೆ ವಿಡಿಯೋ ಕಾಲ್ ಮಾಡಿದ ಯುವತಿ, ಆಟೋ ಚಾಲಕನನ್ನೂ ಬೆತ್ತಲೆಗೊಳಿಸಿ ವಿಡಿಯೋ ವೈರಲ್ ಮಾಡಿಸಿದಳು!