ನಾಯಿ ಮೂತ್ರ ಮಾಡಿದ ವಿಚಾರ: ಕಾರ್ ನ ಮಾಲಿಕನಿಗೆ ನಾಯಿಯ ಮಾಲಿಕರಿಂದ ಹಿಗ್ಗಾಮುಗ್ಗಾ ಥಳಿತ! - Mahanayaka
12:55 AM Wednesday 11 - December 2024

ನಾಯಿ ಮೂತ್ರ ಮಾಡಿದ ವಿಚಾರ: ಕಾರ್ ನ ಮಾಲಿಕನಿಗೆ ನಾಯಿಯ ಮಾಲಿಕರಿಂದ ಹಿಗ್ಗಾಮುಗ್ಗಾ ಥಳಿತ!

dog
29/08/2021

ಅಹ್ಮದಾಬಾದ್: ನನ್ನ ಕಾರಿನ ಟಯರ್ ಗೆ ನಿಮ್ಮ ನಾಯಿ ಮೂತ್ರ ಮಾಡಿದೆ. ನಾಯಿಯನ್ನು ಕಟ್ಟಿ ಹಾಕಿ ಎಂದು ನಾಯಿಯ ಮಾಲಿಕನಿಗೆ ಕಾರಿನ ಮಾಲಿಕ ಹೇಳಿದ್ದು, ಈ ವಿಚಾರ ಇಬ್ಬರ ನಡುವೆ ವಾಗ್ವಾದಕ್ಕೆ ಕಾರಣವಾಗಿ ಕಾರಿನ ಮಾಲಿಕನಿಗೆ ನಾಯಿಯ ಮಾಲಿಕ ಹಿಗ್ಗಾಮುಗ್ಗಾ ಥಳಿಸಿದ ಘಟನೆ ನಡೆದಿದೆ.

ಕರ್ನಾಲ್ ಕಟೋಚ್ ಎಂಬವರು ಹಲ್ಲೆಗೊಳಗಾಗಿರುವ ಕಾರು ಮಾಲಿಕನಾಗಿದ್ದಾನೆ.  ತನ್ನ ಕಾರನ್ನು ತೊಳೆದು ಮನೆಯ ಹೊರಗೆ ಕಟೋಚ್ ನಿಲ್ಲಿಸಿದ್ದು, ಈ ವೇಳೆ ಪಕ್ಕದ ಮನೆಯ ನಾಯಿ ಕಾರಿ ಟಯರ್ ಗೆ ಮೂತ್ರ ಮಾಡಿದೆ. ಇದರಿಂದ ಕೋಪಗೊಂಡು ನಾಯಿಯ ಮಾಲಿಕನ ಮನೆಯ ಬಳಿ ಹೋಗಿ ಗಲಾಟೆ ಮಾಡಿದ್ದಾರೆ.

ನಿಮ್ಮ ನಾಯಿ ನನ್ನ ಕಾರಿಗೆ ಮೂತ್ರ ಮಾಡಿದೆ. ನಾಯಿಯನ್ನು ಕಟ್ಟಿಹಾಕಿ ಎಂದು ಕಟೋಚ್ ಗಲಾಟೆ ನಡೆಸಿದ್ದು, ಈ ವೇಳೆ ನಾಯಿಯ ಮಾಲಿಕರಾದ ಚಿರಾಗ್ ಮಲ್ಹೋತ್ರ ಮತ್ತು ಸನ್ನಿ ಮಲ್ಹೋತ್ರ ಕೂಡ ಕೋಪಗೊಂಡು, ನಮ್ಮ ನಾಯಿಗೆ ನೀನು ಹೊಡೆಯುತ್ತೀಯಾ? ಎಂದು ಪ್ರಶ್ನಿಸಿ ವ್ಯಕ್ತಿಗೆ ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಘಟನೆ ಸಂಬಂಧ ಹಲ್ಲೆ ನಡೆಸಿದವರ ವಿರುದ್ಧ ಚಾಂದ್ ಖೇಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಇನ್ನಷ್ಟು ಸುದ್ದಿಗಳು…

ತಲಾಖ್ ನೀಡಿದ ಬಳಿಕವೂ ಪತ್ನಿಯ ಅಶ್ಲೀಲ ಚಿತ್ರವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟ ಪತಿ!

ಬುಡಕಟ್ಟು ಸಮುದಾಯದ ವ್ಯಕ್ತಿಯನ್ನು ಲಾರಿಗೆ ಕಟ್ಟಿ ಎಳೆದೊಯ್ದು ಭೀಕರ ಹತ್ಯೆ: ಪೊಲೀಸರ ಬಳಿ ಸುಳ್ಳು ಕಥೆ ಕಟ್ಟಿದ ಆರೋಪಿಗಳು

ನಾವು ಭಾರತದೊಂದಿಗೆ ಉತ್ತಮ ಬಾಂಧವ್ಯ ಬಯಸುತ್ತೇವೆ | ತಾಲಿಬಾನ್ ನಾಯಕ ಮೊಹಮ್ಮದ್ ಅಬ್ಬಾಸ್ ಸ್ಟ್ಯಾನಿಕಜೈ

ಅತ್ಯಾಚಾರ ಪ್ರಕರಣ ಭೇದಿಸಿದ ಪೊಲೀಸರಿಗೆ 1 ಲಕ್ಷ ರೂ. ಬಹುಮಾನ ಘೋಷಿಸಿದ ಹಿರಿಯ ನಟ ಜಗ್ಗೇಶ್

ಸಾಮೂಹಿಕ ಅತ್ಯಾಚಾರ ಪ್ರಕರಣ: ಆರೋಪಿಗಳ ಬಂಧನಕ್ಕೆ ಪೊಲೀಸರಿಗೆ ಸಹಕಾರವಾದ ಅಂಶಗಳೇನು?

ದೇವಸ್ಥಾನದ ಆವರಣದಲ್ಲಿ ಟಿಕ್ ಟಾಕ್ ವಿಡಿಯೋ ಮಾಡಿದಕ್ಕೆ ವಿರೋಧ | ಪೊಲೀಸರಿಗೆ ದೂರು

ಮೈಸೂರಿನ ಬೆನ್ನಲ್ಲೇ ಮತ್ತೊಂದು ಸಾಮೂಹಿಕ ಅತ್ಯಾಚಾರ: 15 ವರ್ಷದ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ

ಇತ್ತೀಚಿನ ಸುದ್ದಿ