ಅಪ್ರಾಪ್ತ ವಯಸ್ಸಿನ ಬಾಲಕಿಯ ಮೇಲೆ 7 ಬಾಲಕರಿಂದ ಸಾಮೂಹಿಕ ಅತ್ಯಾಚಾರ! - Mahanayaka

ಅಪ್ರಾಪ್ತ ವಯಸ್ಸಿನ ಬಾಲಕಿಯ ಮೇಲೆ 7 ಬಾಲಕರಿಂದ ಸಾಮೂಹಿಕ ಅತ್ಯಾಚಾರ!

ranchi news
29/08/2021

ರಾಂಚಿ:  ಬಾಲಕಿಯೋರ್ವಳ ಮೇಲೆ 7 ಮಂದಿ ಬಾಲಕರು ಸಾಮೂಹಿಕ ಅತ್ಯಾಚಾರ ನಡೆಸಿದ ಘಟನೆ  ಜಾರ್ಖಂಡ್ ನ ರಾಂಚಿ ಜಿಲ್ಲೆಯಲ್ಲಿ ನಡೆದಿದ್ದು, ಘಟನೆಗೆ ಸಂಬಂಧಿಸಿದಂತೆ ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದೆ. ಉಳಿದವರು ತಲೆಮರೆಸಿಕೊಂಡಿದ್ದಾರೆ.

ಆಗಸ್ಟ್ 26ರಂದು ಈ ಘಟನೆ ನಡೆದಿದ್ದು, ಆರೋಪಿಗಳ ಪೈಕಿ ಓರ್ವ ಬಾಲಕಿಯ ಪರಿಚಯಸ್ಥ ಎಂದು ತಿಳಿದು ಬಂದಿದೆ. ಮೊದಲ ಆರೋಪಿಯು ಬಾಲಕಿಯನ್ನು ಮೋಟರ್ ಸೈಕಲ್ ನಲ್ಲಿ ನಿರ್ಜನ ಪ್ರದೇಶಕ್ಕೆ ಕರೆದೊಯ್ದಿದ್ದಾನೆ. ನಿರ್ಜನ ಪ್ರದೇಶದಲ್ಲಿ ಆತನ ಸ್ನೇಹಿತರು ಕಾದು ಕುಳಿತಿದ್ದರು. ಇದನ್ನು ಗಮನಿಸಿ, ಬಾಲಕಿ ಪರಾರಿಯಾಗಲು ವಿಫಲ ಯತ್ನ ನಡೆಸಿದ್ದಾಳೆ.

ಈ ವೇಳೆ 7 ಮಂದಿ ಬಾಲಕರೂ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿದ್ದಾರೆ. ಕೃತ್ಯದ ಬಳಿಕ ಬಾಲಕಿಯ ಸ್ನೇಹಿತನೇ ಆಕೆಯನ್ನು ಮನೆಗೆ ಕರೆತಂದು ಬಿಟ್ಟಿದ್ದು, ಘಟನೆಯಿಂದ ತೀವ್ರವಾಗಿ ಆಘಾತಕ್ಕೊಳಗಾಗಿದ್ದ ಬಾಲಕಿ ತನ್ನ ಪೋಷಕರಿಗೆ ಈ ವಿಚಾರವನ್ನು ತಿಳಿಸಿದ್ದಾಳೆ.

ಘಟನೆ ಸಂಬಂಧ ಬಾಲಕಿಯ ಪೋಷಕರು ನೀಡಿದ ದೂರಿನನ್ವಯ ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದ್ದು, ಬಂಧಿತರನ್ನು ಬಾಲ ಮಂದಿರದ ವಶಕ್ಕೆ ಒಪ್ಪಿಸಲಾಗಿದೆ ಎಂದು ತನಿಖಾಧಿಕಾರಿ ತಿಳಿಸಿದ್ದಾರೆ. ಇನ್ನೂ ಬಂಧಿತ ಆರೋಪಿಗಳೆಲ್ಲರೂ ಇಲ್ಲಿನ ಮಂದರ್ ಪ್ರದೇಶದ ನಿವಾಸಿಗಳು ಎಂದು ತಿಳಿದು ಬಂದಿದೆ.

ಇನ್ನಷ್ಟು ಸುದ್ದಿಗಳು…

ಆಕ್ಸಿಜನ್ ದುರಂತದ ಸಂದರ್ಭದಲ್ಲಿ ನಾನು ಹುಚ್ಚನಂತೆ ಅಳ್ತಾ ಇದ್ದೆ: ರಮೇಶ್ ಕುಮಾರ್

“ನೀವು ರೈತರ ತಲೆ ಒಡೆದು ಹಾಕುವುದನ್ನು ನಾನು ನೋಡಬೇಕು” | ಪೊಲೀಸರಿಗೆ ಆದೇಶ ನೀಡಿದ ಅಧಿಕಾರಿ

ಮಹಿಳಾ ರೋಗಿಗೆ ಲೈಂಗಿಕ ದೌರ್ಜನ್ಯ ನೀಡಿ ಹತ್ಯೆಗೆ ಯತ್ನಿಸಿದ ವಾರ್ಡ್ ಬಾಯ್

ತಲಾಖ್ ನೀಡಿದ ಬಳಿಕವೂ ಪತ್ನಿಯ ಅಶ್ಲೀಲ ಚಿತ್ರವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟ ಪತಿ!

ನಾವು ಭಾರತದೊಂದಿಗೆ ಉತ್ತಮ ಬಾಂಧವ್ಯ ಬಯಸುತ್ತೇವೆ | ತಾಲಿಬಾನ್ ನಾಯಕ ಮೊಹಮ್ಮದ್ ಅಬ್ಬಾಸ್ ಸ್ಟ್ಯಾನಿಕಜೈ

1,500 ವರ್ಷಗಳ ಹಳೆಯ, ಜೊತೆಯಾಗಿ ಸಮಾಧಿ ಮಾಡಲಾದ ಪ್ರೇಮಿಗಳ ಅಸ್ಥಿಪಂಜರಗಳು ಪತ್ತೆ !

ಇತ್ತೀಚಿನ ಸುದ್ದಿ