ಮಗುವಿಗೆ ಚಪ್ಪಲಿಯಲ್ಲಿ ಹೊಡೆದು ಚಿತ್ರ ಹಿಂಸೆ ನೀಡಿದ್ದ ತಾಯಿ ಅರೆಸ್ಟ್!
ತಮಿಳುನಾಡು: ಕಳೆದ ಹಲವು ದಿನಗಳಿಂದಲೂ ತಾಯಿಯೋರ್ವಳು ತನ್ನ ಮಗುವಿಗೆ ಅಮಾನವೀಯವಾಗಿ ಹಲ್ಲೆ ನಡೆಸುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಈ ಘಟನೆ ಕಂಡು ಜನರು ಬೆಚ್ಚಿಬಿದ್ದಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಆಕ್ರೋಶ ವ್ಯಕ್ತವಾಗಿತ್ತು.
ಈ ಘಟನೆ ಸಂಬಂಧ ಮಗುವಿನ ತಾಯಿಯ ವಿರುದ್ಧ ಆಕೆಯ ಪತಿಯೇ ದೂರು ನೀಡಿದ್ದು, ಈ ಹಿನ್ನೆಲೆಯಲ್ಲಿ ಆಂಧ್ರಪ್ರದೇಶದ ಚಿತ್ತೂರಿನಲ್ಲಿರುವ 22 ವರ್ಷ ವಯಸ್ಸಿನ ತುಳಸಿ ಎಂಬಾಕೆಯನ್ನು ತಮಿಳುನಾಡು ಪೊಲೀಸರು ಬಂಧಿಸಿದ್ದಾರೆ.
ಐದು ವರ್ಷಗಳ ಹಿಂದೆ ತಮಿಳುನಾಡು ಮೂಲದ ವಡಿವಜಗನ್ ಎಂಬಾತನನ್ನು ಮದುವೆಯಾಗಿದ್ದ ತುಳಸಿ ದಂಪತಿಗೆ ನಾಲ್ಕು ವರ್ಷ ವಯಸ್ಸಿನ ಹಾಗೂ ಒಂದೂವರೆ ವರ್ಷ ವಯಸ್ಸಿನ ಇಬ್ಬರು ಗಂಡು ಮಕ್ಕಳಿದ್ದಾರೆ. ಈ ನಡುವೆ ಪ್ರತಿ ದಿನ ಗಂಡ, ಹೆಂಡತಿ ನಡುವೆ ಜಗಳ ನಡೆಯುತ್ತಿತ್ತು. ಇದರಿಂದ ಬೇಸತ್ತು, ಪತಿಯು ಪತ್ನಿಯನ್ನು ಆಂಧ್ರಪ್ರದೇಶದಲ್ಲಿದ್ದ ಪತ್ನಿಯ ತವರು ಮನೆಗೆ ಆಕೆಯನ್ನು ಕರೆದೊಯ್ದು ಬಿಟ್ಟಿದ್ದ ಎನ್ನಲಾಗಿದೆ.
ತವರು ಮನೆ ಸೇರಿದ ಪತ್ನಿ ಪತಿಯ ಮೇಲಿನ ಸಿಟ್ಟಿನಿಂದ ತನ್ನ ಒಂದೂವರೆ ವರ್ಷ ವಯಸ್ಸಿನ ಮಗುವಿಗೆ ಹಿಗ್ಗಾಮುಗ್ಗಾ ಥಳಿಸಿ ವಿಡಿಯೋ ಮಾಡಿದ್ದಾಳೆ. ಈ ವಿಡಿಯೋವನ್ನು ಆಕೆಯ ಸಂಬಂಧಿಕರೊಬ್ಬರು ನೋಡಿ, ಪತಿಯ ಗಮನಕ್ಕೆ ತಂದಿದ್ದರು. ಈ ವಿಡಿಯೋದ ಆಧಾರದಲ್ಲಿ ತಮಿಳುನಾಡು ಪೊಲೀಸರಿಗೆ ದೂರು ನೀಡಲಾಗಿತ್ತು. ಪತಿಯ ದೂರು ಸ್ವೀಕರಿಸಿದ ಪೊಲೀಸರು ಇದೀಗ ಮಹಿಳೆಯನ್ನು ಬಂಧಿಸಿದ್ದಾರೆ.
ವಿಡಿಯೋದಲ್ಲಿ ಕಂಡು ಬಂದಂತೆ, ತಾಯಿಯು ಪುಟ್ಟ ಮಗುವಿನ ಮೇಲೆ ತೀವ್ರ ತರಹದ ಕ್ರೂರತನವನ್ನು ಮೆರೆದಿದ್ದಾಳೆ. ಮಗುವಿಗೆ ಮೈಮೇಲೆ ಬಾಸುಂಡೆ ಬರುವಂತೆ ಹೊಡೆದಿದ್ದಾಳೆ. ಮುಷ್ಢಿ ಬಿಗಿದು ಗುದ್ದಿದ್ದಾಳೆ. ಚಪ್ಪಲಿ ಎತ್ತಿಕೊಂಡು ಹೊಡೆಯುತ್ತಿದ್ದಳು. ತಾನು ಹೊಡೆಯುತ್ತಿದ್ದದ್ದನ್ನು ವಿಡಿಯೋ ಕೂಡ ಮಾಡಿಕೊಂಡಿದ್ದಳು. ತನ್ನ ಪತಿಗೆ ಈ ವಿಡಿಯೋ ತೋರಿಸಿ, ನೋವುಂಟು ಮಾಡಿಸುವುದು ಆಕೆಯ ಉದ್ದೇಶವೇ ತಿಳಿದಿಲ್ಲ. ಆದರೂ, ಆ ಪುಟ್ಟ ಮಗುವಿನ ಮೇಲೆ ನಡೆಸುತ್ತಿರುವ ದೌರ್ಜನ್ಯದ ವಿಡಿಯೋ ಕಂಡು ಇಡೀ ದೇಶದ ಜನರೇ ಕಣ್ಣೀರಾಗಿದ್ದಾರೆ.
ಇನ್ನಷ್ಟು ಸುದ್ದಿಗಳು…
ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ವೀಕೆಂಡ್ ಕರ್ಫ್ಯೂ ಮುಂದುವರಿಕೆ | ಆರ್.ಅಶೋಕ್
ನಡು ರಸ್ತೆಯಲ್ಲಿ ಯುವತಿಯ ಕತ್ತು ಕೊಯ್ದು, ತಾನೂ ಕತ್ತು ಸೀಳಿಕೊಂಡ ಯುವಕ
ಅಪ್ರಾಪ್ತ ವಯಸ್ಸಿನ ಬಾಲಕಿಯ ಮೇಲೆ 7 ಬಾಲಕರಿಂದ ಸಾಮೂಹಿಕ ಅತ್ಯಾಚಾರ!
ಆಕ್ಸಿಜನ್ ದುರಂತದ ಸಂದರ್ಭದಲ್ಲಿ ನಾನು ಹುಚ್ಚನಂತೆ ಅಳ್ತಾ ಇದ್ದೆ: ರಮೇಶ್ ಕುಮಾರ್
ನಾಯಿ ಮೂತ್ರ ಮಾಡಿದ ವಿಚಾರ: ಕಾರ್ ನ ಮಾಲಿಕನಿಗೆ ನಾಯಿಯ ಮಾಲಿಕರಿಂದ ಹಿಗ್ಗಾಮುಗ್ಗಾ ಥಳಿತ!
ನಾವು ಭಾರತದೊಂದಿಗೆ ಉತ್ತಮ ಬಾಂಧವ್ಯ ಬಯಸುತ್ತೇವೆ | ತಾಲಿಬಾನ್ ನಾಯಕ ಮೊಹಮ್ಮದ್ ಅಬ್ಬಾಸ್ ಸ್ಟ್ಯಾನಿಕಜೈ