ಭಾರತದಲ್ಲಿ ಮತಕ್ಕಾಗಿ ಹಣ, ಹೆಂಡ ಹಂಚಿದ್ರೆ, ಅಮೆರಿಕದಲ್ಲಿ ಬಟ್ಟೆ ಬಿಚ್ಚಿನಿಂತ ಸೆಲೆಬ್ರೆಟಿಗಳು - Mahanayaka

ಭಾರತದಲ್ಲಿ ಮತಕ್ಕಾಗಿ ಹಣ, ಹೆಂಡ ಹಂಚಿದ್ರೆ, ಅಮೆರಿಕದಲ್ಲಿ ಬಟ್ಟೆ ಬಿಚ್ಚಿನಿಂತ ಸೆಲೆಬ್ರೆಟಿಗಳು

04/11/2020

ನವದೆಹಲಿ: ಭಾರತದಲ್ಲಿ ಚುನಾವಣೆ ಎಂದರೆ, ಹಣ, ಹೆಂಡ ಹಂಚೋದು ಮಾಮುಲಿ, ಆದರೆ ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಮತದಾರರನ್ನು ಸೆಳೆಯಲು ಮಹಿಳಾ ಸೆಲೆಬ್ರೆಟಿಗಳು  ಬೆತ್ತಲೆಯಾಗಿ ನಿಂತು ಮತದಾನ ಮಾಡುವಂತೆ ಪ್ರೇರೇಪಿಸಿದ್ದು,  ಹಾಲಿವುಡ್ ಸೆಲೆಬ್ರೆಟಿಗಳ ಈ ಕೆಲಸವು ಇದೀಗ ವಿವಾದಕ್ಕೆ ಕಾರಣವಾಗಿದೆ.


ಹಾಲಿವುಡ್ ಸೆಲೆಬ್ರಿಟಿಗಳಾದ ಕೇಟ್ ಬೆಕಿನ್‌ಸೇಲ್, ಚೆಲ್ಸಿಯಾ ಹ್ಯಾಂಡ್ಲರ್, ಜೆನ್ನಿಫರ್ ಲೋಪೆಜ್, ಕೆಂಡಾಲ್ ಜೆನ್ನರ್ ಲೀಸ್ ಮತ್ತಿತರ ನಟಿಯರು ತಮ್ಮ ಬೆತ್ತಲೆ ಫೋಟೋಗಳನ್ನು ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡು ಮತದಾನ ಮಾಡುವಂತೆ ಪ್ರೇರೇಪಿಸಿದರು.


ತಮ್ಮ ಬೆತ್ತಲೆ ಮೈಗೆ, “ನಾನು ಮತದಾನ ಮಾಡಿದ್ದೇನೆ” ಎಂಬ ಸ್ಟಿಕ್ಕರ್ ಅಂಟಿಸಿಕೊಂಡು ಪೋಸ್ಟ್ ಮಾಡಿದ್ದಾರೆ. ಜೋ ಬಿಡನ್ ಅವರನ್ನು ಆಯ್ಕೆ ಮಾಡುವಂತೆ ಸೆಲೆಬ್ರೆಟಿಗಳು ಕೇಳಿದ್ದಾರೆ. ಟಿಫಾನಿ ಹ್ಯಾಡಿಶ್, ಮಾಡೆಲ್ ನವೋಮಿ ಕ್ಯಾಂಪ್‌ಬೆಲ್, ಸಾಚಾ ಬ್ಯಾರನ್ ಕೊಹೆನ್,  ಬೋರಾಟ್ ಮತ್ತು ರಿಯಾನ್ ಮಿಚೆಲ್ ಬಾಥೆ ಮೊದಲಾದ ಸೆಲೆಬ್ರೆಟಿಗಳು ತಮ್ಮ ಬೆತ್ತಲೆ ಚಿತ್ರವನ್ನು ಹಂಚಿಕೊಂಡಿದ್ದಾರೆ.



Provided by

ಸೆಲೆಬ್ರೆಟಿಗಳು ಬೆತ್ತಲೆ ಪ್ರದರ್ಶನದ ಮೂಲಕ ಮತ ಕೇಳಿರುವುದು ಕಾನೂನಿನ ಗಮನಕ್ಕೆ ತರಲಾಗಿದೆ ಎಂದು ಹೇಳಲಾಗಿದೆ. ಇದನ್ನು ಬೆತ್ತಲೆ ಮತಪತ್ರ ಎಂದೂ ಕರೆಯಲಾಗಿದೆ.  ನಟ ಮಾರ್ಕ್ ರುಫಲೋ, ಹಾಸ್ಯನಟ ಆಮಿಶುಮರ್, ಸಾರಾ ಸಿಲ್ವರ್ ಮನ್ ಮತ್ತು ಕ್ರಿಸ್ ರಾಕ್ ಹಾಗೂ ಸೂಮರ್ ಮಾಡೆಲ್ ನವೋಮಿ ಕ್ಯಾಂಪ್ ಬೆಲ್ ಅವರು ವಿಡಿಯೋದಲ್ಲಿ ಕಾಣಿಸಿಕೊಂಡು ಮತ ಕೇಳಿದ ಬೆನ್ನಲ್ಲೇ, ಈ ಬೆತ್ತಲೆ ಮತಯಾಚನೆ ಅಭಿಯಾನ ಆರಂಭಗೊಂಡಿದೆ.




 

ಇತ್ತೀಚಿನ ಸುದ್ದಿ