8 ತಿಂಗಳ ಗರ್ಭಿಣಿ ಪೊಲೀಸ್ ಅಧಿಕಾರಿಯನ್ನು ಗುಂಡಿಟ್ಟುಕೊಂದ ತಾಲಿಬಾನಿಗರು! - Mahanayaka
10:22 AM Monday 16 - December 2024

8 ತಿಂಗಳ ಗರ್ಭಿಣಿ ಪೊಲೀಸ್ ಅಧಿಕಾರಿಯನ್ನು ಗುಂಡಿಟ್ಟುಕೊಂದ ತಾಲಿಬಾನಿಗರು!

banu negar
06/09/2021

ಕಾಬುಲ್: ತಾಲಿಬಾನಿಗರು ಅಫ್ಘಾನಿಸ್ತಾನವನ್ನು ವಶಪಡಿಸಿಕೊಂಡ ಬೆನ್ನಲ್ಲೇ ಪ್ರತಿ ನಿತ್ಯ ಭೀಭತ್ಸ ಕೃತ್ಯಗಳನ್ನೆಸಗುತ್ತಿದ್ದು, ಇದೀಗ ಅಫ್ಘಾನಿಸ್ತಾನದ ಮಹಿಳಾ ಪೊಲೀಸ್ ವೊಬ್ಬರ ಮನೆಗೆ ನುಗ್ಗಿ ಪತಿ ಹಾಗೂ ಮಕ್ಕಳೆದುರೇ ಬರ್ಬರವಾಗಿ ಹತ್ಯೆ ಮಾಡಿದ್ದಾರೆ.

ಅಫ್ಘಾನಿಸ್ತಾನದ ಘೋರ್ ಪ್ರಾಂತ್ಯದ ಕೇಂದ್ರ ನಗರ ಫಿರೋಜ್ಕೋಹ್ ಈ ಘಟನೆ ನಡೆದಿದ್ದು, ಬಾನು ನೆಗರ್ ತಾಲಿಬಾನಿಗರಿಂದ ಹತ್ಯೆಗೀಡಾದ ಮಹಿಳಾ ಅಧಿಕಾರಿಯಾಗಿದ್ದಾರೆ.. ಇವರು 8 ತಿಂಗಳ ಗರ್ಭಿಣಿಯಾಗಿದ್ದರು. ಇವರು ಅಫ್ಘಾನಿಸ್ತಾನದ ಸರ್ಕಾರದ ಸಂದರ್ಭದಲ್ಲಿ ಸ್ಥಳೀಯ ಠಾಣೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದರು ಎಂದು ತಿಳಿದು ಬಂದಿದೆ.

ಉದಾರವಾದದ ಮುಖವಾಡ ಧರಿಸಿರುವ ತಾಲಿಬಾನ್, ಅಫ್ಘಾನಿಸ್ತಾನದಲ್ಲಿ ಮಾರಣಹೋಮವನ್ನೇ ಸೃಷ್ಟಿಸುತ್ತಿದೆ. ತಾಲಿಬಾನಿಗರು ತಮ್ಮ ರಕ್ತದಾಹಕ್ಕೆ ಧರ್ಮದ ಹೆಸರನ್ನು ಬಳಸುತ್ತಿದ್ದಾರೆ. ತಮ್ಮ ಅನ್ಯಾಯ, ಅತ್ಯಾಚಾರಗಳಿಗೆ ಧರ್ಮವನ್ನು ಗುರಾಣಿಯಾಗಿ ಬಳಸುತ್ತಿದ್ದಾರೆ.  ಗರ್ಭಿಣಿ ಸ್ತ್ರೀ ಎಂದೂ ನೋಡದೇ ಗುಂಡಿಟ್ಟು ಹತ್ಯೆ ಮಾಡಿದ ಬಳಿಕ ಬಾನು ನೆಗರ್ ಅವರ ಮೃತದೇಹದ ಮುಖವನ್ನು ವಿರೂಪಗೊಳಿಸಿ ವಿಕೃತಿ ಮೆರೆಯಲಾಗಿದೆ.

ಜೈಲಿನಲ್ಲಿದ್ದ ಉಗ್ರರ ಜೊತೆಗೆ ಕಟುವಾಗಿ ನಡೆದುಕೊಂಡಿರುವುದಕ್ಕೆ ಈ ಶಿಕ್ಷೆ ನೀಡಿದ್ದೇವೆ ಎಂದು ಉಗ್ರರು ಹೇಳಿಕೊಂಡಿದ್ದಾರೆನ್ನಲಾಗಿದೆ. ಇನ್ನೂ ಈ ಘಟನೆಯ ಬಗ್ಗೆ ತಾಲಿಬಾನ್ ತನಿಖೆ ನಡೆಸುವುದಾಗಿ ಹೇಳಿದೆ. ಆದರೆ,  ತಾಲಿಬಾನ್ ತನ್ನ ಹಿಂಸಾ ಮನಸ್ಥಿತಿಯ ಮೇಲೆ ಸೌಮ್ಯ ಭಾವದ ಮುಖವಾಡ ತೊಟ್ಟಿದೆ ಎನ್ನುವ ಆಕ್ರೋಶ ಇದೀಗ ಕೇಳಿ ಬಂದಿದೆ. ತಾಲಿಬಾನ್ ನಲ್ಲಿ ಉಗ್ರರ ಗುಂಡಿಗೆ ಜನರು ಗರಗೆಲೆಯಂತೆ ಬಿದ್ದು ಸಾಯುತ್ತಿದ್ದರೂ, ವಿಶ್ವ ಮಾನವ ಹಕ್ಕುಗಳ ಸಂಸ್ಥೆಗಳು ಮೌನವಹಿಸಿವೆ.

ಇನ್ನಷ್ಟು ಸುದ್ದಿಗಳು…

ಕೊಳ್ಳೇಗಾಲ ಶಾಸಕ ಎನ್.ಮಹೇಶ್ ಅವರ ಪತ್ನಿ, ಖ್ಯಾತ ಚಳುವಳಿಗಾರ್ತಿ ವಿಜಯ ಮಹೇಶ್ ನಿಧನ

ಮೂವರು ವಿದ್ಯಾರ್ಥಿನಿಯರಿಗೆ, ನೀವು ಧರಿಸಿರುವ ಉಡುಪು ಕಳಚಿ ಎಂದ 50 ವರ್ಷದ ಪ್ರಾಂಶುಪಾಲ!

ಸೆಪ್ಟಂಬರ್ 27ರಂದು ಭಾರತ್ ಬಂದ್: ಕೇಂದ್ರ ಸರ್ಕಾರದ ವಿರುದ್ಧ ತೀವ್ರತೆ ಪಡೆದ ರೈತರ ಹೋರಾಟ

ನನ್ನ ವಿರುದ್ಧದ ಆರೋಪ ಸಾಬೀತಾದರೆ, ಸಾರ್ವಜನಿಕವಾಗಿ ನೇಣಿಗೇರುತ್ತೇನೆ | ಮಮತಾ ಬ್ಯಾನರ್ಜಿ ಅಳಿಯ ಅಭಿಷೇಕ್ ಬ್ಯಾನರ್ಜಿ ಹೇಳಿಕೆ

ವಿವಾದಿತ ಕೃಷಿ ಕಾಯ್ದೆ ವಾಪಸ್ ಪಡೆಯದಿದ್ದರೆ ಬಿಜೆಪಿ ವಿರುದ್ಧ ಪ್ರಚಾರ ಮಾಡುತ್ತೇವೆ | ರೈತ ನಾಯಕರಿಂದ ಎಚ್ಚರಿಕೆ

ಕಾಂಗ್ರೆಸ್ ನವರು ಚಳುವಳಿ ಮಾಡುವಷ್ಟರ ಮಟ್ಟಿಗೆ ಬೆಲೆ ಏರಿಕೆಯಾಗಿಲ್ಲ | ಸಿ.ಟಿ.ರವಿ ಹೇಳಿಕೆ

 

ಇತ್ತೀಚಿನ ಸುದ್ದಿ